ETV Bharat / state

ಕೊಲೆಯಾದ ಅಂಜಲಿ‌ ಅಂಬಿಗೇರ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ

ಹುಬ್ಬಳ್ಳಿಯಲ್ಲಿ ಕೊಲೆಯಾದ ಯುವತಿ ಅಂಜಲಿ‌ ಅಂಬಿಗೇರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ.

author img

By ETV Bharat Karnataka Team

Published : 3 hours ago

anjali ambigera
ಅಂಜಲಿ‌ ಅಂಬಿಗೇರ (ETV Bharat)

ಹುಬ್ಬಳ್ಳಿ: ನಗರದಲ್ಲಿ ಯುವಕನಿಂದ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿ ಆದೇಶಿಸಲಾಗಿದೆ. ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿಯ ಮನೆಯಲ್ಲಿ ಮೇ 15ರಂದು ಅಂಜಲಿ ಕೊಲೆ ನಡೆದಿತ್ತು.

ಅಂದು ಬೆಳಗಿನಜಾವ ಪರಿಚಿತನಾದ ಗಿರೀಶ ಸಾವಂತ ಎಂಬಾತ, ಅಂಜಲಿ ಅಂಬಿಗೇರ (20) ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​, ಮೃತಳ ಕುಟುಂಬಸ್ಥರಿಗೆ ಪರಿಹಾರ ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.

ಸರ್ಕಾರವು ಈ ವರದಿಯನ್ನಾಧರಿಸಿ ಮೃತಳ ಕುಟುಂಬದ ಕಾನೂನುಬದ್ಧ ನೈಜ ವಾರಸುದಾರರಿಗೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ. ಧಾರವಾಡ ಜಿಲ್ಲಾಧಿಕಾರಿ ಖಾತೆಗೆ ಹಣ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಟಿ.ಎ.ಗೋಪಾಲ್ ಆದೇಶದಲ್ಲಿ ತಿಳಿಸಿದ್ದಾರೆ.

ಪರಿಹಾರ ಮಂಜೂರಾದ ಕುರಿತಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ. ಅಂಜಲಿ ಅಂಬಿಗೇರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಬಿಡುಗಡೆ ಆಗಿದೆ. ಅದನ್ನು ಶೀಘ್ರವೇ ಶಹರ ತಹಶೀಲ್ದಾರ್ ಅವರ ಮೂಲಕ ಪ್ರಕ್ರಿಯೆ ಪ್ರಕಾರ ಕುಟುಂಬಸ್ಥರಿಗೆ ವಿತರಿಸಲಾಗುವುದು ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.