ETV Bharat / state

ಕಿಮ್ಸ್ ಆಸ್ಪತ್ರೆಯಲ್ಲಿ ರೌಡಿ ಡೇವಿಡ್​ನ​ ಪುಂಡಾಟ: ರೋಗಿಗಳು ಹೈರಾಣ - HUBBALLI ROWDY SHEETER - HUBBALLI ROWDY SHEETER

ರೌಡಿಶೀಟರ್​ವೊಬ್ಬ ಆಸ್ಪತ್ರೆಯಲ್ಲಿ ಪುಂಡಾಟ ಮೆರೆದು ಗಾಜು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ.

HUBBALLI ROWDY SHEETER
ಕಿಮ್ಸ್ ಆಸ್ಪತ್ರೆಯಲ್ಲಿ ರೌಡಿ ಡೇವಿಡ್​ನ​ ಪುಂಡಾಟ (ETV Bharat)
author img

By ETV Bharat Karnataka Team

Published : May 20, 2024, 1:02 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿ ರೌಡಿಗಳು ಬಾಲ ಬಿಚ್ಚಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆ ರೌಡಿ ಗ್ಯಾಂಗ್​ವೊಂದು ಮತ್ತೊಬ್ಬ ರೌಡಿಶೀಟರ್ ಮೇಲೆ ದಾಳಿ ನಡೆಸಿರುವ ಘಟನೆ ಮಂಟೂರ್ ರಸ್ತೆಯಲ್ಲಿ ನಡೆದಿದೆ.

ರೌಡಿ ಶೀಟರ್ ಡೇವಿಡ್ ಯಮಾರ್ಥಿ ಮೇಲೆ ದಾವೂದ್ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಹಲ್ಲೆಗೊಳಗಾದ ಡೇವಿಡ್ ಆರೋಪಿಸಿದ್ದಾನೆ. ಈ ಹಿಂದೆ ಹುಬ್ಬಳ್ಳಿಯ ಸಬ್ ಜೈಲಿನಲ್ಲಿ ಜಗಳ ನಡೆದಿತ್ತು. ಆಗಿನಿಂದಲೂ ನನ್ನ ಮೇಲೆ ಸೇಡು ಇಟ್ಟುಕೊಂಡು 8 ರಿಂದ 10 ಜನರ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದು, ಡೇವಿಡ್ ತಲೆಗೆ ಗಂಭೀರವಾದ ಗಾಯವಾಗಿದೆ.

ಆಸ್ಪತ್ರೆಯಲ್ಲಿ ಪುಂಡಾಟ: ಗಾಯಗೊಂಡು ಡೇವಿಡ್ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದಾಗಲೂ ಹುಚ್ಚಾಟ ನಡೆಸಿದ್ದಾನೆ. ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಜೊತೆ ಕಿರಿಕ್​ ಮಾಡಿಕೊಂಡು ಆಸ್ಪತ್ರೆಯ ಗಾಜು, ಪೀಠೋಪಕರಣ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಡೇವಿಡ್​ನ ಪುಂಡಾಟ ನಿಯಂತ್ರಿಸಲು ಮುಂದಾದ ಪೊಲೀಸರಿಗೂ ಅವಾಜ್ ಹಾಕಿದ್ದಾನೆ. ರೌಡಿ ಪುಂಡಾಟಿಕೆಯಿಂದ ಆಸ್ಪತ್ರೆಯಲ್ಲಿ ರೋಗಿಗಳು ಹೈರಾಣಾಗಿದ್ದಾರೆ. ಈ ಸಂಬಂಧ ಕಿಮ್ಸ್​ನಲ್ಲಿ ಎಂಎಲ್‌ಸಿ ಕೇಸ್ ದಾಖಲಾಗಿದ್ದು, ಬೆಂಡಿಗೇರಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಚ್ಚು ಹಿಡಿದು ಮಹಿಳೆಗೆ ಪ್ರಾಣ ಬೆದರಿಕೆ ಆರೋಪ; ಪುಂಡಾಟ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.