ETV Bharat / state

ಆನೇಕಲ್​: ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ ಆತ್ಮಹತ್ಯೆ - Rowdy Sheeter Suicide - ROWDY SHEETER SUICIDE

ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಪಟ್ಟಣದ ದಿನ್ನೂರಿನಲ್ಲಿ ನಡೆದಿದೆ.

ಆನೇಕಲ್​: ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್‌ ಆತ್ಮಹತ್ಯೆಗೆ ಶರಣು

author img

By ETV Bharat Karnataka Team

Published : Apr 7, 2024, 10:14 PM IST

ಆನೇಕಲ್(ಬೆಂಗಳೂರು): ರೌಡಿಶೀಟರ್​ವೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ಪಟ್ಟಣದ ದಿನ್ನೂರಿನಲ್ಲಿ ನಡೆದಿದೆ. ಅರುಣ್ (28) ಸಾವನ್ನಪ್ಪಿದ ರೌಡಿಶೀಟರ್. ಆರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ 2019ರಲ್ಲಿ ಲೋಕನಾಥ್ ಎಂಬಾತನ ಕೊಲೆ ಪ್ರಕರಣದಲ್ಲಿ ಅರುಣ್‌ ಜೈಲುಪಾಲಾಗಿದ್ದ. ನಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಅರುಣ್ ಕಾಟ ತಾಳಲಾರದೆ ಹೆಂಡತಿ ಎರಡು ವರ್ಷದ ಹಿಂದೆ ತವರುಮನೆ ಸೇರಿದ್ದರು.

ಇತ್ತೀಚಿಗೆ ಅರುಣ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. "ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಯಲ್ಲಿ ಓಡಾಡಿಕೊಂಡಿದ್ದ. ನಂತರ ನೀರು ಹಿಡಿಯಲು ಮಗನನ್ನು ಕರೆದಿದ್ದಾನೆ. ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಕೊಣೆಗೆ ಹೋಗಿ ನೋಡಿದಾಗ ಅರುಣ್​ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ" ಎಂದು ಅರುಣ್​ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕಾರು ಬಾಡಿಗೆಗೆ ಪಡೆದು ಗಿರವಿಗೆ ಇಟ್ಟ ಕಿಡಿಗೇಡಿಗಳು: ಮನನೊಂದ ಮಾಲೀಕ‌ ಆತ್ಮಹತ್ಯೆ - Suicide Case

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.