ETV Bharat / state

ಹಾಸನ: ಹಾಡಹಗಲೇ ಮನೆ ಬಾಗಿಲು ಮುರಿದು 15 ಲಕ್ಷ ನಗದು, 130 ಗ್ರಾಂ ಚಿನ್ನಾಭರಣ ಕಳ್ಳತನ - HASSAN ROBBERY CASE

ಹಾಸನ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳ, ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ದೋಚಿದ್ದಾನೆ.

robbery in Hassan city  Hassan  theft  ಮನೆಗಳ್ಳತನ
ಕದ್ದ ಮಾಲಿನೊಂದಿಗೆ ಬೈಕ್‌ ಹತ್ತಿ ಪರಾರಿಯಾಗುತ್ತಿರುವ ಕಳ್ಳ- ಸಿಸಿಟಿವಿ ದೃಶ್ಯ (ETV Bharat)
author img

By ETV Bharat Karnataka Team

Published : 4 hours ago

ಹಾಸನ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳ 15 ಲಕ್ಷ ರೂಪಾಯಿ ನಗದು ಮತ್ತು 7 ಲಕ್ಷ ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹಾಸನದಲ್ಲಿ ಶುಕ್ರವಾರ ನಡೆದಿದೆ.

ಹೊಸ ಬಸ್ ನಿಲ್ದಾಣದ ಎದುರಿನ ಕೆ.ಹೆಚ್‌.ಬಿ.ಬಡಾವಣೆಯ ಸಚಿನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.

ಸಚಿನ್ ಅವರ ಪತ್ನಿ ಸರ್ಕಾರಿ ನೌಕರರಾಗಿದ್ದು ಬೆಳಗ್ಗೆ ಕೆಲಸಕ್ಕೆ ತೆರಳಿದ್ದರು. ನಂತರ ಸಚಿನ್ ಮನೆಗೆ ಬೀಗ ಹಾಕಿಕೊಂಡು ಹೊರಹೋಗಿದ್ದು, ಸಂಜೆ ವಾಪಸ್ ಆಗಿದ್ದಾರೆ. ಈ ವೇಳೆ ಮನೆ ಮುಂದಿನ ಬಾಗಿಲು ತೆರೆದಿತ್ತು. ಸಚಿನ್ ಆತಂಕದಿಂದ ಒಳಹೋಗಿ ನೋಡಿದಾಗ ಎರಡೂ ರೂಮ್​ನಲ್ಲಿದ್ದ ವಾರ್ಡ್ರೋಬ್​ ತೆರೆದುಕೊಂಡಿದ್ದವು. ಒಂದು ರೂಮಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಲು 15 ಲಕ್ಷ ರೂ. ಇಡಲಾಗಿತ್ತು. ಮತ್ತೊಂದು ರೂಮಿನಲ್ಲಿ 38 ಗ್ರಾಂ ಚಿನ್ನದ ಸರ, 32 ಗ್ರಾಂ ತೂಕದ ಚಿನ್ನದ ಬಳೆ, 15 ಗ್ರಾಂ ತೂಕದ ಚಿನ್ನದ ಓಲೆ, 5 ಗ್ರಾಂ ವಜ್ರದ ಓಲೆ, 15 ಗ್ರಾಂ ತೂಕದ ಚಿನ್ನದ ಬಳೆ ಸೇರಿದಂತೆ 7 ಲಕ್ಷ ರೂ. ಮೌಲ್ಯದ ಆಭರಣವಿತ್ತು. ಇವೆಲ್ಲವನ್ನೂ ಕಳ್ಳ ಹೊತ್ತೊಯ್ದಿದ್ದಾನೆ.

ಹೆಲ್ಮೆಟ್ ಧರಿಸಿ ಬಂದಿರುವ ಕಳ್ಳ ಮನೆಯ ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದಾನೆ. ಸಿಸಿಟಿವಿ ಇಲ್ಲದ ಜಾಗ ನೋಡಿ ಆ ಕಡೆಯಿಂದ ಒಳಗೆ ಬಂದಿದ್ದಾನೆ. ಕದ್ದ ಮಾಲಿನೊಂದಿಗೆ ಆರೋಪಿ ಬೈಕ್ ಹತ್ತಿ ಪರಾರಿಯಾಗುವ ದೃಶ್ಯಗಳು ಕೆಲವು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನಗರಠಾಣೆಯ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನಿಗೆ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸ್ಕೂಟಿಗೆ ತಾಗಿದ ಬಿಎಂಟಿಸಿ ಬಸ್:​ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ- ಸಿಸಿಟಿವಿ ವೀಡಿಯೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.