ಬೆಂಗಳೂರು: ಗೋಲ್ಡ್ ಕಂಪನಿಯೊಂದಕ್ಕೆ ನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಬುಧವಾರ ತಡರಾತ್ರಿ ಎನ್.ಆರ್. ಕಾಲೊನಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಬೆನಕ ಗೋಲ್ಡ್ ಕಂಪನಿಯಲ್ಲಿ ನಡೆದಿದೆ. ರಾತ್ರಿ ಕಬ್ಬಿಣದ ಗೇಟ್ ಬೀಗ ಮುರಿದ ಕಳ್ಳರು 250 ಗ್ರಾಂ ಚಿನ್ನಾಭರಣ ಹಾಗೂ 1.8 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಬುಧವಾರ ಎಂದಿನಂತೆ ವಹಿವಾಟು ನಡೆಸಿದ್ದ ಕಂಪನಿ ಸಿಬ್ಬಂದಿ, ಗ್ರಾಹಕರಿಂದ ಪಡೆದ ಚಿನ್ನಾಭರಣ, ಹಣವನ್ನು ಲಾಕರ್ನಲ್ಲಿಟ್ಟು ತೆರಳಿದ್ದರು. ಆದರೆ ರಾತ್ರಿ ಕಚೇರಿಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ. ಅಲ್ಲಿಂದ ತೆರಳುವ ವೇಳೆ ಕಂಪನಿಯ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಒಡೆದು ಪುಡಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಸವನಗುಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಡೆದು ಹೋಗಿದ್ದ ಡಿವಿಆರ್ಯಿಂದ ಫೂಟೇಜ್ ರಿಕವರ್ ಮಾಡಲಾಗಿದ್ದು, ದೃಶ್ಯದಲ್ಲಿ ಇಬ್ಬರು ವ್ಯಕ್ತಿಗಳು ಬೀಗ ಒಡೆದು ಕಚೇರಿಯೊಳಗೆ ನುಗ್ಗುತ್ತಿರುವುದು, ಅಲ್ಲಿರುವ ಚಿನ್ನಾಭರಣಗಳನ್ನು ಹಾಗೂ ಹಣವನ್ನು ಕದಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಮಾತ್ರವಲ್ಲದೆ ದೃಶ್ಯದಲ್ಲಿ ಆರೋಪಿಗಳ ಮುಖಗಳು ಸ್ಪಷ್ಟವಾಗಿ ಸೆರೆಯಾಗಿವೆ.
ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್ ನಿವಾಸದಲ್ಲಿ ದರೋಡೆ