ETV Bharat / state

ಸದ್ದಿಲ್ಲದೇ ಪರಿಷ್ಕರಣೆಯಾದ ಪಠ್ಯಪುಸ್ತಕ: ಬರುವ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪುಸ್ತಕ ವಿತರಣೆ - academic year

ಕಳೆದ ಬಾರಿ ಸಾಹಿತಿ ದೇವನೂರು ಮಹಾದೇವ ಅವರ ಮನವಿ ಮೇರೆಗೆ ತೆಗೆದುಹಾಕಿದ್ದ ಅವರ 'ಎದೆಗೆ ಬಿದ್ದ ಅಕ್ಷರ' ಪಠ್ಯವನ್ನು ಇದೀಗ ಮತ್ತೆ ಸೇರ್ಪಡೆಗೊಳಿಸಲಾಗಿದೆ.

Education Department
ಶಿಕ್ಷಣ ಇಲಾಖೆ
author img

By ETV Bharat Karnataka Team

Published : Mar 6, 2024, 3:06 PM IST

Updated : Mar 6, 2024, 5:50 PM IST

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಪರಿಷ್ಕರಣೆಗೊಂಡಿದ್ದ ಪಠ್ಯಪುಸ್ತಕವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪುನರ್ ಪರಿಷ್ಕರಣೆ ಮಾಡಿದೆ. 2024-25 ಸಾಲಿನ ಪಠ್ಯಪುಸ್ತಕವನ್ನು ಡಾ.ಮಂಜುನಾಥ್ ಹೆಗಡೆ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದು, ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಪಠ್ಯ ಪರಿಷ್ಕರಣೆ ಮಾಹಿತಿ ನೀಡಿದೆ.

2023-2024 ಸಾಲಿನಲ್ಲೂ ಹಲವು ತಿದ್ದುಪಡಿ ಮಾಡಿತ್ತು. ಇದರಂತೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದೆ. ಕೆಲವು ಪಾಠಗಳಿಗೆ ಕೊಕ್ ನೀಡಿ ಹಲವು ಪಾಠಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಆದರೆ ಟಿಪ್ಪು ಜಯಂತಿ ವಿಚಾರದಿಂದ ದೂರ ಇರುವ ಸರ್ಕಾರ ಪಠ್ಯದಲ್ಲಿಯೂ ಅದೇ ನಿಲುವು ತಳೆದಿದ್ದು, ಸದ್ಯದ ಮಟ್ಟಿಗೆ ಟಿಪ್ಪು ಪಾಠದ ವಿಚಾರದಲ್ಲಿ ತಟಸ್ಥವಾಗಿ ಉಳಿದಿದೆ. 1 ರಿಂದ 10ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರ ಜೊತೆಗೆ 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ.

ಪಠ್ಯ ಪರಿಷ್ಕರಣೆಗೆ ವಿಷಯವಾರು ತಜ್ಞರ ಸಮಿತಿಯನ್ನು ಹಾಗೂ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯನಿರ್ವಹಿಸುವ ಸಮಿತಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವ ಉದ್ದೇಶಕ್ಕಾಗಿ ರಚಿಸಲಾಗಿದ್ದ ನಿವೃತ್ತ ಪ್ರಾಧ್ಯಾಪಕ ಮಂಜುನಾಥ ಜಿ. ಹೆಗಡೆ ನೇತೃತ್ವದ ಪರಿಷ್ಕರಣಾ ಸಮಿತಿ ನೀಡಿದ್ದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು, ಹಲವು ಅಂಶಗಳಿಗೆ ಆದ್ಯತೆಯನ್ನು ನೀಡಿ, ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ.

ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗದಂತೆ ಪರಿಷ್ಕರಣೆಗೆ ಒಳಪಟ್ಟ ಪಠ್ಯಪುಸ್ತಕಗಳ ಮೂಲ ಸ್ವರೂಪ ಬದಲಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ಈ ಪರಿಷ್ಕರಣೆಯನ್ನು ನಡೆಸಲಾಗಿದೆ. 2024-25ನೇ ಸಾಲಿನಿಂದ ಜಾರಿಗೆ ತರಲು ಪರಿಷ್ಕೃತ ಪಠ್ಯಗಳನ್ನು ಮುದ್ರಣಕ್ಕೆ ಕಳುಹಿಸಿದೆ ಎಂದು ಪ್ರಕಟಣೆ ಮೂಲಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ವಿವಾದಿತ ಟಿಪ್ಪು ವಿಚಾರಕ್ಕೆ ಸರ್ಕಾರ ಕೈಹಾಕಿಲ್ಲ. ಮತ್ತೆ ಕೆಲವು ವಿವಾದಿತ ಪಠ್ಯವನ್ನೂ ಮುಟ್ಟಿಲ್ಲ. ಆದರೆ ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಕೆಲವು ಪಠ್ಯಗಳನ್ನು ಮುಂದಿನ ತರಗತಿಗಳಿಗೆ ಸ್ಥಳಾಂತರಿಸುವ ಜೊತೆಗೆ ಮತ್ತೆ ಕೆಲ ಪಠ್ಯವನ್ನು ತೆಗೆದು ಹಾಕಿ ಹೊಸ ಪಠ್ಯವನ್ನು ಸೇರಿಸಿದೆ. ಸಾಹಿತಿ ದೇವನೂರು ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಪಠ್ಯವನ್ನು ಮತ್ತೆ ಸೇರ್ಪಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ವೇಳೆ ಅಂದಿನ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಪಠ್ಯವನ್ನು ತೆಗೆದುಹಾಕಲು ಮನವಿ ಮಾಡಿದ್ದರು. ಅದರಂತೆ ತೆಗೆದುಹಾಕಲಾಗಿತ್ತು. ಆದರೆ ಇದೀಗ ಮತ್ತೆ ಆ ಪಠ್ಯ ಶಾಲಾ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

6-10ನೇ ತರಗತಿಗಳ ಸಮಾಜ ವಿಜ್ಞಾನ ವಿಷಯದ 70 ಪರಿಷ್ಕೃತ ಪಠ್ಯಪುಸ್ತಕ ಹಾಗು 1-10ನೇ ತರಗತಿಗಳ ಕನ್ನಡ ಭಾಷಾ ವಿಷಯದ 44 ಪರಿಷ್ಕೃತ ಪಠ್ಯಪುಸ್ತಕ ಸೇರಿದಂತೆ ಒಟ್ಟು 114 ಪಠ್ಯ ಪುಸ್ತಕಗಳು ಪರಿಷ್ಕರಣೆಯಾಗಿದ್ದು, ಬರಲಿರುವ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯದಂತೆ ಬೋಧನೆ ನಡೆಸಲಾಗುತ್ತದೆ. ಅದಕ್ಕೆ ಪೂರಕವಾಗಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಪಠ್ಯಪುಸ್ತಕಗಳು ಮುದ್ರಣಕ್ಕೆ ಹೋಗಿವೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಪರಿಷ್ಕೃತ ಪಠ್ಯದ ಪ್ರಮುಖ ಅಂಶಗಳು:

  • 6ನೇ ತರಗತಿ ಸಮಾಜ ವಿಜ್ಞಾನ: ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ.
  • 7ನೇ ತರಗತಿ ಸಮಾಜ ವಿಜ್ಞಾನ: ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಿದೆ.
  • 8ನೇ ತರಗತಿ ಇತಿಹಾಸ: ಸನಾತನ ಧರ್ಮ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾಗಿ ನಿರೂಪಣೆ ಮಾಡಿದೆ.
  • 9ನೇ ತರಗತಿ ಇತಿಹಾಸ: ಭಕ್ತಿಪಂಥ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ಮಾಹಿತಿ ಸೇರ್ಪಡೆ
  • 10ನೇ ತರಗತಿ ಇತಿಹಾಸ: ಸಾರ್ವಜನಿಕ ಆಡಳಿತ ಎಂಬ ಹೊಸ ಅಧ್ಯಾಯ ಸೇರ್ಪಡೆ
  • 1-5ನೇ ತರಗತಿ ಕನ್ನಡ: ಕೆ.ವಿ. ತಿರುಮಲೇಶ್‌, ವಿ.ಜಿ. ಭಟ್ಟರ ಮಕ್ಕಳ ಕವನಗಳ ಸೇರ್ಪಡೆ
  • ಕಂಬಾರ-'ಸೀಮೆ', ಕಾರ್ನಾಡ್‌- 'ಅಧಿಕಾರ', ದೇವಿದಾಸ- 'ಚಕ್ರಗ್ರಹಣ', ಮರಿಯಪ್ಪ ಭಟ್ಟ- 'ನಮ್ಮ ಭಾಷೆ', ಎ.ಎನ್‌.ಮೂರ್ತಿರಾವ್‌- 'ವ್ಯಾಘ್ರ ಗೀತೆ', ದೇವನೂರು ಮಹಾದೇವ- 'ಎದೆಗೆ ಬಿದ್ದ ಅಕ್ಷರ', ಅಕ್ಕಮಹಾದೇವಿ- 'ವಚನಗಳು' ಸೇರ್ಪಡೆ
  • 9-10ನೇ ತರಗತಿ ಕನ್ನಡ: ಕೈಬಿಟ್ಟಿದ್ದ ನಾಗೇಶ್‌ ಹೆಗಡೆ, ಪಿ.ಲಂಕೇಶ್‌, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ: 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಪಡಿಸಿದ ಹೈಕೋರ್ಟ್

Last Updated : Mar 6, 2024, 5:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.