ETV Bharat / state

ರಿಚ್ಮಂಡ್​​​​​ ಮೇಲ್ಸೇತುವೆಯಲ್ಲಿ ಆತ್ಮಹತ್ಯೆ ಯತ್ನ: ಟ್ರಾಫಿಕ್​​​ ಸಿಬ್ಬಂದಿಯಿಂದ ವ್ಯಕ್ತಿಯ ರಕ್ಷಣೆ

ರಿಚ್ಮಂಡ್​​​​ ಮೇಲ್ಸೇತುವೆಯಿಂದ ಕೆಳಗೆ ಜಿಗಿಯಲು ಪ್ರಯತ್ನಿಸಿದ್ಧ ವ್ಯಕ್ತಿಯನ್ನು ಕರ್ತವ್ಯದಲ್ಲಿದ್ದ ಟ್ರಾಫಿಕ್​​ ಕಾನ್​ಸ್ಟೇಬಲ್​ ರಕ್ಷಿಸಿ ಪ್ರಾಣ ಉಳಿಸಿದ್ದಾರೆ.​ ​​​

ರಿಚ್ಮಂಡ್​​​​​ ಮೇಲುಸೇತುವೆಯಿಂದ ಜಿಗಿದು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯ ರಕ್ಷಣೆ
ರಿಚ್ಮಂಡ್​​​​​ ಮೇಲುಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ (ETV Bharat)
author img

By ETV Bharat Karnataka Team

Published : 10 hours ago

ಬೆಂಗಳೂರು: ವೈಯಕ್ತಿಕ ಕಾರಣಕ್ಕಾಗಿ ಪತ್ನಿಯೊಂದಿಗೆ ಜಗಳವಾಡಿ ರಿಚ್ಮಂಡ್​​​​ ಮೇಲ್ಸೇತುವೆಯಿಂದ ಕೆಳಗೆ ಜಿಗಿಯಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ಅಶೋಕ್​ ನಗರ ಸಂಚಾರ ಠಾಣೆ ಪೊಲೀಸರು ರಕ್ಷಿಸಿದ್ದಾರೆ.

ಬುಧವಾರ ಸಂಜೆ ಕರ್ತವ್ಯದಲ್ಲಿದ್ದ ಟ್ರಾಫಿಕ್​​ ಕಾನ್​ಸ್ಟೇಬಲ್​​​ ಲೊಕೇಶ್​​ ಅವರಿಗೆ ಮೇಲ್ಸೇತುವೆಯಿಂದ ಮಹಿಳೆ ಕಿರುಚಾಡುತ್ತಿರುವುದನ್ನು ಕಂಡರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಮೇಲ್ಸೇತುವೆಯಿಂದ​ ಮೊಬೈಲ್​ ಎಸೆದು ಜಿಗಿಯಲು ಯತ್ನಿಸಿದ್ದ ವೆಂಕಟರಾಜು ಎಂಬುವರನ್ನು ತಡೆದು ರಕ್ಷಿಸಿದ್ದಾರೆ. ಬಳಿಕ ಸಮಾಧಾನಪಡಿಸಿ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿದರು. ಈ ಕುರಿತು ಮಾಹಿತಿ ನೀಡಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ.

"ಕೋಲಾರ ಮೂಲದ ವೆಂಕಟರಾಜು ಅವರಿದ್ದ ಕಾರಿನಲ್ಲಿ ಪತ್ನಿ ಹಾಗೂ ಭಾಮೈದ ಇದ್ದರು. ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ನಿನ್ನೆ ಸಂಜೆ 6.30 ಸುಮಾರಿಗೆ ಮನೆಗೆ ಹೋಗುವಾಗ ವೈಯಕ್ತಿಕ ಕಾರಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿದೆ‌‌. ಕಾರು ಓಡಿಸುವಾಗಲೇ ಕಾರಿನ ಕಿಟಕಿ ತೆರೆದು ಜಿಗಿಯಲು ವೆಂಕಟರಾಜು ಮುಂದಾಗಿದ್ದ‌".‌

ಆತಂಕಗೊಂಡ ಕಾರಿನ ಚಾಲಕ ರಿಚ್ಮಂಡ್ ಮೇಲ್ಸೇತುವೆ ಮೇಲೆ ಕಾರು ನಿಲ್ಲಿಸಿದ್ದಾರೆ. ಡೋರ್ ತೆಗೆದು ತಮ್ಮ ಬಳಿಯಿದ್ದ ಮೊಬೈಲ್​ ಎಸೆದು ವೆಂಕಟರಾಜು ಜಿಗಿಯಲು ಪ್ರಯತ್ನಿಸಿದ್ದ. ಈ ವೇಳೆ ಪತ್ನಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕಿರುಚಾಟ ಶಬ್ಧ ಕಂಡು ಕೂಡಲೇ ಟ್ರಾಫಿಕ್ ಸಿಬ್ಬಂದಿ ಲೊಕೇಶ್ ಅವರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ದುರಂತ: ಮೂವರ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.