ETV Bharat / state

ಫ್ಲ್ಯಾಟ್​​, ನಿವೇಶನ ಖರೀದಿದಾರರಿಗೆ 'ರೇರಾ ಕಾಯ್ದೆ'ಯಿಂದಾಗುವ ಉಪಯೋಗವೇನು? ಇಲ್ಲಿದೆ ಸಂಪೂರ್ಣ ಮಾಹಿತಿ - RERA Act - RERA ACT

ಮುಂದೆ ನೀವು ನಿವೇಶನಗಳನ್ನು ತೆಗದುಕೊಳ್ಳುತ್ತೀರಾ ಎಂದಾದರೆ ರೇರಾ ಕಾಯ್ದೆ ಅಡಿ ನೋಂದಣಿಯಾಗಿರುವ ನಿವೇಶನಗಳನ್ನು ಖರೀದಿಸುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ತೊಂದರೆಗೆ ಸಿಲುಕಲಿದ್ದೀರಿ.

ETV Bharat
ಬೆಂಗಳೂರು ನಗರ (IANS)
author img

By ETV Bharat Karnataka Team

Published : Sep 8, 2024, 9:56 AM IST

Updated : Sep 8, 2024, 10:34 AM IST

ಬೆಂಗಳೂರು: ಮನೆ ಅಥವಾ ಬಡಾವಣೆ ಯೋಜನೆಯಲ್ಲಿ ಏಕಾಏಕಿ ಬದಲಾವಣೆ ಮಾಡುವುದು, ಮನಸ್ಸಿಗೆ ಬಂದಂತೆ ದರ ನಿಗದಿ, ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಸೇರಿದಂತೆ ಹಲವು ರೀತಿಯ ಆಟಗಳನ್ನು ಆಡುತ್ತಿದ್ದ ರಿಯಲ್​ ಎಸ್ಟೇಟ್ ಉದ್ಯಮಿಗಳಿಗೆ ಕಡಿವಾಣ ಹಾಕುವ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ "ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಜಾರಿಗೆ ಬಂದಿದೆ.

ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ರೇರಾ ಕಾಯ್ದೆ ಅಡಿ ನೋಂದಣಿಯಾಗಿರುವ ನಿವೇಶನಗಳನ್ನು ಗ್ರಾಹಕರು ಖರೀದಿಸುವುದು ಉತ್ತಮ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೊಂದರೆಗೆ ಸಿಲುಕುವಂತಾಗುತ್ತದೆ. ನಿವೇಶನ ಅಥವಾ ಮನೆ ಖರೀದಿಸುವವರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಹಾಗೂ ಅಕ್ರಮ ತಡೆಯಲು ಹಿಂದೆಯೇ ಈ ಕಾಯ್ದೆ ಅನುಷ್ಠಾನ ಮಾಡಲಾಗಿದೆ. ಕೆಲವರು ನಕಲಿ ರೇರಾ ಸಂಖ್ಯೆ ನೀಡಿ ವಂಚಿಸುತ್ತಿರುವ ಪ್ರಕರಣಗಳು ಅಗಾಗ ಬೆಳಕಿಗೆ ಬರುತ್ತಿವೆ. ಆದ್ದರಿಂದ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅನ್ನು ಖಚಿತಪಡಿಸಿಕೊಂಡೇ ವ್ಯವಹಾರ ನಡೆಸುವುದು ಸೂಕ್ತ ಎಂದು ರೆವಿನ್ಯೂ ಅಧಿಕಾರಿಗಳು ಹೇಳುತ್ತಾರೆ.

ನೋಂದಣಿ ಕಡ್ಡಾಯ: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಅಥವಾ ನಿರ್ಮಾಣ ಸಂಸ್ಥೆಗಳು ತಾವು ನಿರ್ಮಿಸುವ ವಸತಿ ಬಡಾವಣೆ, ಅಪಾರ್ಟ್‌ಮೆಂಟ್, ವಾಣಿಜ್ಯ ಸಮುಚ್ಚಯ ಸೇರಿದಂತೆ ಎಲ್ಲಾ ಬಗೆಯ ನಿರ್ಮಾಣ ಯೋಜನೆಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ರಿಯಲ್ ಎಸ್ಟೇಟ್ ಏಜೆಂಟರು ಕೂಡ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯೋಜನೆಗಳಿಗೆ ಗ್ರಾಹಕರಿಂದ ಮುಂಗಡ ಪಡೆಯುವ ಮೊತ್ತದಲ್ಲಿ ಶೇ.70ರಷ್ಟನ್ನು ಆ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಠೇವಣಿ ಇಡಬೇಕು. ಯೋಜನೆಯಲ್ಲಿ ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಮೂರನೇ ಎರಡಷ್ಟು ಗ್ರಾಹಕರ ಒಪ್ಪಿಗೆ ಕಡ್ಡಾಯವಾಗಿದೆ.

ನಿಯಮ ಉಲ್ಲಂಘಿಸಿದರೆ ಬ್ಯಾಂಕ್ ಖಾತೆ ಸ್ಥಗಿತ: ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ನಿರ್ಮಾಣ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬಹುದು. ಯೋಜನೆಯ ನಕ್ಷೆ ಮತ್ತು ವಿವರ ಅಪ್‌ಡೇಟ್ ಮಾಡದೇ ಇದ್ದರೆ ಯೋಜನಾ ವೆಚ್ಚದ ಶೇ.10ರಷ್ಟು ದಂಡ ವಿಧಿಸಬಹುದು. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ ಹೆಚ್ಚುವರಿಯಾಗಿ ಶೇ.10 ದಂಡ ವಿಧಿಸಬಹುದು. ನಿಯಮ ಉಲ್ಲಂಘಿಸುವ ಏಜೆಂಟರಿಗೂ ಅಪಾರ್ಟ್‌ಮೆಂಟ್‌ನ ಒಟ್ಟು ವೆಚ್ಚದ ಶೇ.10ರಷ್ಟು ದಂಡ ವಿಧಿಸುವ ಅವಕಾಶ ಇದೆ.

ರಾಜ್ಯದಲ್ಲಿ ರಿಯಲ್​ ಎಸ್ಟೇಟ್​ ಸಂಸ್ಥೆ ಅಥವಾ ನಿರ್ಮಾಣ ಸಂಸ್ಥೆಗಳು ತಾವು ನಿರ್ಮಿಸುವ ವಸತಿ ಬಡಾವಣೆ, ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಸಮುಚ್ಚಯ ಸೇರಿ ನಾನಾ ಬಗೆಯ ಯೋಜನೆಗಳು ರಿಯಲ್​ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ರಿಯಲ್ ಎಸ್ಟೇಟ್ ಕಂಪನಿಗಳು, ನಿರ್ಮಾಣ ಸಂಸ್ಥೆಗಳು, ಏಜೆಂಟ್​ರಿಂದ ಮೋಸವಾದರೆ ಕೂಡಲೇ ದೂರು ಸಲ್ಲಿಸಬಹುದು. ಹೊಸ ಮನೆ ಅಥವಾ ನಿವೇಶನ ಖರೀದಿಸುವ ವೇಳೆ ಸಂಬಂಧಪಟ್ಟ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕರ್ನಾಟಕದ ರಿಯಲ್ ಎಸ್ಟೇಟ್ ಪ್ರಾಧಿಕಾರದಡಿ ನೋಂದಣಿ ಆಗಿದೆಯೇ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.

ಗ್ರಾಹಕರಿಗಾಗಿ ನ್ಯಾಯಮಂಡಳಿ: ರಿಯಲ್ ಎಸ್ಟೇಟ್ ಕಂಪನಿಗಳು, ನಿರ್ಮಾಣ ಸಂಸ್ಥೆಗಳು ಹಾಗೂ ಏಜೆಂಟರಿಂದ ಯಾವುದೇ ಬಗೆಯ ಮೋಸವಾದರೆ ಗ್ರಾಹಕರು ಕೂಡಲೇ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಬಹುದು. ರಾಜ್ಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಅದಕ್ಕೆ ಪೂರಕವಾದ ನ್ಯಾಯಮಂಡಳಿ ರಚನೆ ಮಾಡಲಾಗುತ್ತದೆ. ಈ ಪ್ರಾಧಿಕಾರವೇ ದೂರುಗಳನ್ನು ನಿರ್ವಹಿಸಲಿದೆ. ದೂರು ಸಲ್ಲಿಕೆಯಾದ 60 ದಿನಗಳಲ್ಲೇ ಪ್ರಕರಣ ಇತ್ಯರ್ಥಪಡಿಸಬೇಕು. ಅಲ್ಲಿ ಪ್ರಕರಣ ಇತ್ಯರ್ಥಗೊಂಡ ನಂತರ ಬೇಕಿದ್ದರೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ರೇರಾ ವೆಬ್‌ಸೈಟ್‌ನಲ್ಲಿ ಸಂಪೂರ್ಣ ವಿವರ: ರೇರಾ ವೆಬ್‌ಸೈಟ್‌ನಲ್ಲಿ ವಿವರಗಳು, ಕೆ-ಆರ್‌ಇಎಟಿ, ನೋಂದಣಿ, ಸೇವೆಗಳು, ದೂರುಗಳು, ಸಹಾಯವಾಣಿ, ನೋಂದಾಯಿಸದ ಯೋಜನೆಗಳು ಮತ್ತಿತರ ವಿಭಾಗಗಳು ಇರುತ್ತವೆ. ಅವುಗಳಿಂದ ಸಹಾಯ ಪಡೆಯಬಹುದು. ನಿವೇಶನಗಳು, ಅಪಾರ್ಟ್ ಮೆಂಟ್‌ಗಳು ಹಾಗೂ ಮನೆಗಳು ಸೇರಿ ಇತರ ಆಸ್ತಿ ಖರೀದಿ ವೇಳೆ ಮುಖ್ಯವಾದ ಅಂಶಗಳನ್ನು ಪರಿಶೀಲಿಸಬೇಕು. ಟೈಟಲ್ ಡೀಡ್ಸ್, ಕ್ರಯಪತ್ರ, ತೆರಿಗೆ ಪಾವತಿ ರಸೀದಿ, ಋಣಭಾರ ಪ್ರಮಾಣಪತ್ರ, ಅಡವಿಟ್ಟ ಜಮೀನು, ಎನ್‌ಆ‌ರ್ ಐಗಳಿಂದ ಆಸ್ತಿ ಖರೀದಿ, ಕರಾರು, ಮುದ್ರಾಂಕ ಶುಲ್ಕ, ನೋಂದಣಿ ಹಾಗೂ ಹೆಸರು ಬದಲಾವಣೆ ಇತರ ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಆಸ್ತಿ ಖರೀದಿಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನಿವೇಶನ ಅಥವಾ ಅಪಾರ್ಟ್ ಮೆಂಟ್ ಫ್ಲ್ಯಾಟ್ ಖರೀದಿಸುವವರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಹಾಗೂ ಅಕ್ರಮ ತಡೆಯಲು ಈ ರೇರಾ ಕಾಯ್ದೆ ಜಾರಿಗೆ ಬಂದಿರುವುದು ಒಳ್ಳೆಯದೆ, ಗ್ರಾಹಕರಿಗೆ ನಂಬಿಕೆ ಬರುತ್ತದೆ. ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಹೆಚ್ಚುತ್ತದೆ' ಎಂದು ರಿಯಲ್​ ಎಸ್ಟೇಟ್ ಉದ್ಯಮಿ ಶಶಿಧರ್ ರೇರಾ ಕಾಯ್ದೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ನಿಮ್ಮ ಆಸ್ತಿಗಳ ಮೌಲ್ಯ ಹೆಚ್ಚು ಮಾಡುತ್ತೇನೆ, ಮಾರಬೇಡಿ': ಕನಕಪುರ ಜನರಿಗೆ ಡಿಸಿಎಂ ಡಿಕೆಶಿ ಮನವಿ - increase property value

Last Updated : Sep 8, 2024, 10:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.