ETV Bharat / state

ಅನುಚಿತ ವರ್ತನೆ ತೋರಿದ ವ್ಯಕ್ತಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮನವಿ: ಶಾಸಕ ಶಿವರಾಜ್​ ಪಾಟೀಲ್​ - Shivaraj Patil - SHIVARAJ PATIL

ಅದು ಹಲ್ಲೆಯೇ ಅಲ್ಲ, ಆದರೂ ವ್ಯಕ್ತಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸ್​ಪಿ ಅವರಿಗೆ ತಿಳಿಸಿದ್ದೇನೆ ಎಂದು ಶಾಸಕ ಶಿವರಾಜ್​ ಪಾಟೀಲ್​ ತಿಳಿಸಿದ್ದಾರೆ.

MLA Shivaraj Patil
ಶಾಸಕ ಶಿವರಾಜ್​ ಪಾಟೀಲ್​
author img

By ETV Bharat Karnataka Team

Published : Apr 1, 2024, 7:13 PM IST

Updated : Apr 1, 2024, 7:50 PM IST

ರಾಯಚೂರು: ಶಾಸಕ ಡಾ. ಶಿವರಾಜ್​ ಪಾಟೀಲ್​ ವಿವಾಹ ಸಮಾರಂಭಕ್ಕೆ ತೆರಳಿದ ವೇಳೆ ಅನುಚಿತ ವರ್ತನೆ ತೋರಿದ ವ್ಯಕ್ತಿಯೋರ್ವನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಬಳಿಕ ವರದಿ ನೀಡುವುದಾಗಿ ತಿಳಿಸಿದ್ದಾರೆ. "ಈ ಬಗ್ಗೆ ಸೂಕ್ತ ತನಿಖೆ ಮಾಡಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ" ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಶಾಸಕ ಶಿವರಾಜ್​ ಪಾಟೀಲ್​

ನಗರದ ಗದ್ವಾಲ್ ರಸ್ತೆಯಲ್ಲಿ ಶನಿವಾರ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದ ಸಂದರ್ಭ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಮುಂದೆ ವ್ಯಕ್ತಿಯೋರ್ವ ಅನುಚಿತ ವರ್ತನೆ ತೋರಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಸಕರು, "ಮದುವೆ ಸಮಾರಂಭಕ್ಕೆ ಹೋದಾಗ ವ್ಯಕ್ತಿಯೋರ್ವ ನಾನು ಕಾರಿನಿಂದ ಇಳಿಯುತ್ತಿದ್ದಂತೆ ಹತ್ತಿರ ಬಂದಿದ್ದ. ಆಗ ವ್ಯಕ್ತಿ ಕುಡಿದಿರುವುದು ಗೊತ್ತಾಗಿ, ಅಂಗರಕ್ಷಕರು, ಮುಖಂಡರು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಆ ವ್ಯಕ್ತಿಯ ಬಳಿ ಚೂರಿ ಇತ್ತು ಅಂತ ಬೆಂಬಲಿಗರು ಹೇಳಿದ್ರು. ನಮ್ಮ ಬೆಂಬಲಿಗರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಮ್ಮ ತಂಡದವರು ವಿಚಾರಿಸಿದಾಗ, ಆ ವ್ಯಕ್ತಿ ಮದ್ಯ ವ್ಯಸನಿಯಾಗಿದ್ದ, ಮನೆಯಲ್ಲಿ ಹೆಂಡತಿ, ಮಕ್ಕಳಿಗೆ ಹಿಂಸೆ ಕೊಡುತ್ತಿದ್ದ ಎನ್ನುವುದು ಸ್ಥಳೀಯರಿಂದ ಗೊತ್ತಾಯಿತು. ಭಾನುವಾರ ಎಸ್​ಪಿ ಕರೆ ಮಾಡಿ ವಿಚಾರಿಸಿದ್ದರು. ವ್ಯಕ್ತಿ ಕುಡಿದ ಅಮಲಿನಲ್ಲಿ ಆ ರೀತಿ ಮಾಡಿರಬಹುದು. ಆದರೂ ಈ ಬಗ್ಗೆ ಎಲ್ಲಾ ಆ್ಯಂಗಲ್​ನಿಂದಲೂ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ವರದಿ ಕೊಡುತ್ತೇವೆ ಎಂದು ಎಸ್​ಪಿ ಹೇಳಿದ್ದಾರೆ. ಅಂತಹ ದೊಡ್ಡ ಘಟನೆಯೇನಲ್ಲ ಅಂತ ನನಗನಿಸುತ್ತದೆ. ಕುಡಿತದ ಚಟದಿಂದ ಆ ರೀತಿ ಮಾಡಿದ್ದಾನೆ ಎಂದು ನಾನು ಭಾವಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರ ಮೇಲೆ ಹಲ್ಲೆ ಎಂದು ಬಿಂಬಿಸಲಾಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅಷ್ಟಕ್ಕೂ ಅದು ಹಲ್ಲೆಯೇ ಅಲ್ಲ. ಯಾಕೆಂದರೆ ನಾನು ಆ ಮದುವೆ ಸಮಾರಂಭಕ್ಕೆ ಮ. 3.30 ಕ್ಕೆ ಹೋಗುತ್ತೇನೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ನಾನು ಅಲ್ಲಿ ಹೋಗಿ ನಿಂತಂತ ಸಮಯದಲ್ಲಿ ಅವನು ಬಂದು ನಿಲ್ಲಬೇಕಾದರೆ ಅವನಿಗೆ ನಾನು ಬರುವ ಸಮಯ ಗೊತ್ತಿರಬೇಕು ಅಲ್ವಾ? ನಾನು ಬೆಳಗ್ಗೆ ಮನೆ ಬಿಟ್ಟರೆ ಸಂಜೆ 5.30ಕ್ಕೆ ಮನೆಗೆ ವಾಪಸಾಗುತ್ತೇನೆ. ಯಾವ ಯಾವ ಕಾರ್ಯಕ್ರಮಕ್ಕೆ ಯಾವ ಸಮಯಕ್ಕೆ ಹೋಗುತ್ತೇನೆ ಎನ್ನುವುದು ಗೊತ್ತಿರುವುದಿಲ್ಲ. ಎಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ಆ ಸಮಾರಂಭಕ್ಕೆ ಹೋದೆ. ಅಲ್ಲಿ ಹೋಗಿ ಗಾಡಿ ನಿಲ್ಲಿಸಿದಾಗ ಆತ ಅಲ್ಲಿ ನಿಂತಿದ್ದ. ನಾನು ಅಲ್ಲೇ ಗಾಡಿ ನಿಲ್ಲಿಸುತ್ತೇನೆ ಎನ್ನುವುದು ಆತನಿಗೆ ಕನಸು ಬಿದ್ದಿತ್ತಾ? ಹಾಗಾಗಿ ಇದೇನು ದೊಡ್ಡ ವಿಷಯವಲ್ಲ" ಎಂದು ಹೇಳಿದ್ದಾರೆ. ಅನುಚಿತ ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಲಂ 110ರ ಅಡಿ ಪ್ರಕರಣ ದಾಖಲಿಸಲಾಗಿದೆ.

ರಾಯಚೂರು ಲೋಕಸಭಾ ಚುನಾವಣೆ ಟಿಕೆಟ್ -ಬಂಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, "ಬೆಂಗಳೂರಿಗೆ ಹೋದಂತಹ ಸಂದರ್ಭದಲ್ಲಿ ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಅವರು ಒಂದು ತಂಡವನ್ನು ಕಳಿಸಿದ್ದಾರೆ. ಇನ್ನೊಂದು ತಂಡವನ್ನು ಕಳಿಸಿ ಮಾತನಾಡಬೇಕು ಎಂದು ಹೇಳಿದ್ದೇನೆ. ಆ ತಂಡ ಕೂಡ ಇನ್ನೆರಡು ದಿನಗಳಲ್ಲಿ ಬಂದು ಮಾತನಾಡಲಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ವೈರಲ್​ ಆಡಿಯೋ ಬಗ್ಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಸ್ಪಷ್ಟನೆ

Last Updated : Apr 1, 2024, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.