ETV Bharat / state

ಬೆಳಗಾವಿ: ಕಾಳಜಿ ಕೇಂದ್ರದಲ್ಲಿರುವ ಪ್ರವಾಹ ಸಂತ್ರಸ್ತರಿಗೆ ಸಾಲಗಾರರ ಕಾಟ - Flood Victims Loan Burden

ಪ್ರವಾಹದಿಂದಾಗಿ ನೆಲೆ ಕಳೆದುಕೊಂಡು ಕಾಳಜಿ ಕೇಂದ್ರ ಸೇರಿದ್ದ ಗೋಕಾಕ್ ನಗರದ ಸಂತ್ರಸ್ತರು ಸಾಲಗಾರರ ಕಿರುಕುಳ ಎದುರಿಸುತ್ತಿದ್ದಾರೆ.

flood victims
ಪ್ರವಾಹ ಸಂತ್ರಸ್ತರು (ETV Bharat)
author img

By ETV Bharat Karnataka Team

Published : Aug 8, 2024, 5:51 PM IST

ಪ್ರವಾಹ ಸಂತ್ರಸ್ತರ ಬವಣೆ (ETV Bharat)

ಬೆಳಗಾವಿ: ಘಟಪ್ರಭಾ ನದಿ ಉಕ್ಕಿ ಹರಿದು ಮನೆಗಳು ಜಲಾವೃತವಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಗೋಕಾಕ್ ನಗರದ ಮಹಿಳೆಯರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಮನೆಯನ್ನು ಪ್ರವಾಹ ಕಸಿದುಕೊಂಡರೆ, ಮತ್ತೊಂದೆಡೆ ಸಂಘದ ಸಾಲ ಹೊರೆಯಾಗುತ್ತಿದೆ.‌ ಇವರು ಊಟ, ವಾಸ್ತವ್ಯಕ್ಕೆ ಕಾಳಜಿ ಕೇಂದ್ರವನ್ನು ಆಶ್ರಯಿಸಿದ್ದು, ಇಲ್ಲಿಗೂ ಸಂಘದ ಪ್ರತಿನಿಧಿಗಳು ಆಗಮಿಸಿ ವಾರದ ಕಂತು ತುಂಬುವಂತೆ ದುಂಬಾಲು ಬಿದ್ದಿದ್ದಾರೆ. ಈ ಕುರಿತು ಇಲ್ಲಿನ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

'ಈಟಿವಿ ಭಾರತ'ದ ಪ್ರತಿನಿಧಿ ಜೊತೆಗೆ ಮಾತನಾಡಿದ ತಂಗೆವ್ವಾ ಎಂಬ ಮಹಿಳೆ, "ಶಾಲೆಯಲ್ಲಿದ್ದರೂ ಸಂಘದವರು ಮತ್ತು ಸಾಲಗಾರರು ನಮ್ಮನ್ನು ಬಿಡುತ್ತಿಲ್ಲ. ಉದ್ಯೋಗ ಮಾಡಬೇಕೆಂದು ಬೇರೆ ಬೇರೆ ಸಂಘಗಳಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದೇವೆ. ಪ್ರತೀ ವಾರ 6 ಸಾವಿರ ರೂ ತುಂಬಬೇಕು. ಈಗ ನೋಡಿದರೆ ವ್ಯಾಪಾರವೂ ಇಲ್ಲ. ಹೇಗೆ ಸಾಲ ತುಂಬಬೇಕೋ ತಿಳಿಯುತ್ತಿಲ್ಲ.‌ ಆರು ತಿಂಗಳು ದುಡಿದು ಹೇಗೋ ಸಾಲ ತೀರಿಸಬೇಕೆನ್ನುವಷ್ಟರಲ್ಲಿ ನೆರೆ ಬರುತ್ತದೆ. ಪ್ರತೀ ವರ್ಷ ಇದು ನಮಗೆ ತಪ್ಪಿದ್ದಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದರು.

ಯಲ್ಲವ್ವ ಮುರಕಿಭಾವಿ ಎಂಬವರು ಮಾತನಾಡಿ, "ನಾನು ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ಕಾಯಿಪಲ್ಲೆ ವ್ಯಾಪಾರ ಮಾಡುತ್ತೇನೆ. ಎರಡು ಸಂಘಗಳಲ್ಲಿ ಸಾಲ ಪಡೆದಿದ್ದೇನೆ. ತಿಂಗಳಿಗೆ ಒಂದು ಸಂಘಕ್ಕೆ 1,630 ರೂ ಮತ್ತು ಇನ್ನೊಂದು ಸಂಘಕ್ಕೆ ವಾರಕ್ಕೆ 1,220 ರೂ. ಕಂತು ಕಟ್ಟಬೇಕು. ನೀವು ಏನು ಮಾಡುತ್ತೀರೋ ನಮಗೆ ಗೊತ್ತಿಲ್ಲ, ಸಾಲ ತುಂಬಲೇಬೇಕು ಅಂತಾ ಸಂಘದವರು ಹೇಳಿದ್ದಾರೆ. ಶನಿವಾರವರೆಗೆ ನಮಗೆ ಟೈಂ ಕೊಟ್ಟಿದ್ದಾರೆ. ಆದರೆ, ಇಂಥ ಪರಿಸ್ಥಿತಿಯಲ್ಲಿ ಹೇಗೆ ತುಂಬಬೇಕು? ನಮಗೆ ಆಗುವುದಿಲ್ಲ" ಎಂದು ತಿಳಿಸಿರುವುದಾಗಿ ಬೇಸರ ಹೊರಹಾಕಿದರು.

"ವಾರಕ್ಕೆ 1,450 ರೂ. ತುಂಬಬೇಕು. ಈಗ ನನಗೆ ಆರಾಮಿಲ್ಲ. ಜ್ವರ‌ ಬಂದಿದೆ. ನಿಂತು ಮಾತಾಡಲೂ ಆಗದು. ಹೊರಹೋಗಿ ದವಾಖಾನಿಗೆ ತೋರಿಸಬೇಕೆಂದರೂ ನಮ್ಮ ಬಳಿ ಹಣವಿಲ್ಲ. ಸಂಘದವರು ನೋಡಿದರೆ ನೀವು ಏನಾದರೂ ಒತ್ತೆ ಇಟ್ಟಾದರೂ ಸಾಲದ ಕಂತು ತುಂಬುವಂತೆ ಪೀಡಿಸುತ್ತಿದ್ದಾರೆ. ಏನಾದರೂ ಇಡಬೇಕೆಂದರೂ‌ ನಮ್ಮ ಬಳಿ ಏನೂ ಇಲ್ಲ. ಎರಡು ವಾರ ಕಾಲಾವಕಾಶ ಕೊಡಿ ಎಂದರೂ ಕೇಳುತ್ತಿಲ್ಲ. ಕಾಳಜಿ ಕೇಂದ್ರದಲ್ಲಿನ ಅನ್ನ, ಸಾರು ಊಟ ನಮ್ಮ ಹೊಟ್ಟೆಗೆ ಸೇರುತ್ತಿಲ್ಲ" ಎಂದು ಮತ್ತೋರ್ವ ಸಂತ್ರಸ್ತೆ ರೇಷ್ಮಾ ನೊಂದು ನುಡಿದರು.

ಈ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಸಂಘಗಳ ಸಾಲದ ಸಮಸ್ಯೆ ಇರುವ ಸಂತ್ರಸ್ತರು ಒಟ್ಟಾಗಿ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರೆ, ಪರಿಶೀಲನೆ ನಡೆಸಿ, ಯಾವ ರೀತಿ ಸಹಾಯ ಮಾಡಬೇಕೆಂದು ಯೋಚಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ 46 ಗ್ರಾಮಗಳು ಜಲಾವೃತ: ಐವರು ಸಾವು, 10,304 ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ - 46 villages of Belagavi are flooded

ETV Bharat Logo

Copyright © 2024 Ushodaya Enterprises Pvt. Ltd., All Rights Reserved.