ETV Bharat / state

ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ: 'ಮಗನೇ ಬಂದಷ್ಟು ಖುಷಿ' ಎಂದ ಕಾಶಿನಾಥಯ್ಯ - RENUKASWAMY WIFE DELIVERS BABY BOY

ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

renukaswamy
ರೇಣುಕಾಸ್ವಾಮಿ (ETV Bharat)
author img

By ETV Bharat Karnataka Team

Published : Oct 16, 2024, 11:29 AM IST

ಚಿತ್ರದುರ್ಗ: ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಕೀರ್ತಿ ಆಸ್ಪತ್ರೆಯಲ್ಲಿ ಸಹನಾಗೆ ಸಹಜ ಹೆರಿಗೆಯಾಗಿದೆ.

ಇಂದು ಬೆಳಗ್ಗೆ ಸಹನಾ ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗ ಹುಟ್ಟಿದ ಖುಷಿಯಲ್ಲಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಭಾವುಕರಾದರು. ಆಸ್ಪತ್ರೆ ಬಳಿ ಮಾತನಾಡಿದ ಅವರು, ಮಗ ರೇಣುಕಾಸ್ವಾಮಿಯೇ ಬಂದಷ್ಟು ಖುಷಿ ಆಗಿದೆ ಎಂದು ಕಣ್ಣೀರಿಟ್ಟರು.

ನಾರ್ಮಲ್ ಡೆಲೆವರಿ ಆಗಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ. ಕೀರ್ತಿ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡಿದ್ದಾರೆ. ಇದಕ್ಕಾಗಿ, ಡಾ.ಮಲ್ಲಿಕಾರ್ಜುನ ಹಾಗೂ ಇತರ ವೈದ್ಯರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಕಾಶಿನಾಥಯ್ಯ ತಿಳಿಸಿದರು.

ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ (ETV Bharat)

ಜೂನ್​ 9ರಂದು ರೇಣುಕಾಸ್ವಾಮಿ ಮೃತದೇಹ ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯ ಚರಂಡಿ ಪಕ್ಕದಲ್ಲಿ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಇತರರನ್ನು ಬಂಧಿಸಿದ್ದು, ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.