ETV Bharat / state

ಜನ್ಮದಿನ ಆಚರಣೆ ವೇಳೆ ಗಾಳಿಯಲ್ಲಿ ಗುಂಡು: ರಿಯಲ್ ಎಸ್ಟೇಟ್ ಉದ್ಯಮಿ ಬಂಧನ - Air fire at Birthday Celebration - AIR FIRE AT BIRTHDAY CELEBRATION

ಜನ್ಮದಿನ ಸಮಾರಂಭದಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್​ ಎಸ್ಟೇಟ್​ ಉದ್ಯಮಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

REAL ESTATE BUSINESSMAN  BUSINESSMAN ARREST  BENGALURU  BIRTHDAY CELEBRATION
ರಿಯಲ್ ಎಸ್ಟೇಟ್ ಉದ್ಯಮಿ (ETV Bharat)
author img

By ETV Bharat Karnataka Team

Published : Oct 2, 2024, 10:21 AM IST

ಬೆಂಗಳೂರು : ಜನ್ಮದಿನ ಸಮಾರಂಭದಲ್ಲಿ ಏರ್​ ಫೈರ್ ಮಾಡಿದ್ದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಅಲ್ತಾಫ್ ಅಹಮದ್ (59) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 22ರಂದು ಬನ್ನೇರುಘಟ್ಟ ರಸ್ತೆಯ ಗುಜುರಿ ಗೋದಾಮಿನಲ್ಲಿ ಮೊಯೀನ್ ಖಾನ್ ಎಂಬಾತನ ಜನ್ಮದಿನ ಸಂಭ್ರಮಾಚರಣೆ ನಡೆದಿತ್ತು. ಆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಆರೋಪಿ ಅಲ್ತಾಫ್ ಅಹಮದ್, ತನ್ನ ಬಳಿಯಿದ್ದ ಪರವಾನಗಿ ಹೊಂದಿರುವ ಪಿಸ್ತೂಲ್ ತೆಗೆದು 6 ಸುತ್ತು ಏರ್ ಫೈರ್ ಮಾಡಿದ್ದಾನೆ. ಏರ್ ಫೈರ್ ಮಾಡುವ ವಿಡಿಯೋವನ್ನು ಜುಬೇರ್ ಖಾನ್ ಲಿಮ್ರಾ ಎಂಬ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೋಸ್ಟ್​​ ಗಮನಿಸಿದ್ದ ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗ ತಕ್ಷಣವೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡು‌ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಓದಿ: ಪುಣೆಯಲ್ಲಿ ಹೆಲಿಕಾಪ್ಟರ್​ ಪತನ: ಇಂಜಿನಿಯರ್, ಇಬ್ಬರು ಪೈಲಟ್​ಗಳು ಸಾವನ್ನಪ್ಪಿರುವ ಶಂಕೆ - HELICOPTER CRASH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.