ETV Bharat / state

ರಾಮೇಶ್ವರಂ ಕೆಫೆ ಸ್ಫೋಟ ಖಂಡಿಸಿದ ಬಳಿಕ ಜೀವ ಬೆದರಿಕೆ: ಪ್ರಶಾಂತ್ ಸಂಬರಗಿ ದೂರು - Rameswaram Cafe Blast - RAMESWARAM CAFE BLAST

ರಾಮೇಶ್ವರಂ ಕೆಫೆ ಸ್ಫೋಟವನ್ನು ಖಂಡಿಸಿದ್ದ ಬಳಿಕ ತನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್​ಗಳಿಂದ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಶಾಂತ್ ಸಂಬರಗಿ ದೂರು ದಾಖಲಿಸಿದ್ದಾರೆ.

prashant sambargi
ಪ್ರಶಾಂತ್ ಸಂಬರ್ಗಿ
author img

By ETV Bharat Karnataka Team

Published : Mar 29, 2024, 9:13 PM IST

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟವನ್ನ ಖಂಡಿಸಿದ್ದ ಬಳಿಕ ತನಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್​ಗಳಿಂದ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಾಟ್ಸ್​ಆ್ಯಪ್​ ​ ಹಾಗೂ ಇ - ಮೇಲ್​ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಮಾರ್ಚ್ 8ರಂದು ಐಟಿಪಿಎಲ್ ಮುಖ್ಯರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿದ್ದ ನಾನು ನಂತರ ಕೆಫೆಯ ಪುನಾರಂಭಕ್ಕೂ ಹೋಗಿದ್ದೆನು. ಈ ನಡುವೆ ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದ್ದವು. ಆರಂಭದಲ್ಲಿ ಅವುಗಳನ್ನು ನಿರ್ಲಕ್ಷಿಸಿದ್ದೆ. ಆದರೆ, ನಂತರದ ದಿನಗಳಲ್ಲಿ ನನ್ನ ಕುಟುಂಬಸ್ಥರಿಗೂ ಬೆದರಿಕೆ ಸಂದೇಶಗಳು‌ ಬರಲಾರಂಭಿಸಿದ್ದು, ನನ್ನ ಮತ್ತು ಮಕ್ಕಳನ್ನು ಸಹ ಟಾರ್ಗೆಟ್ ಮಾಡಲಾಗುತ್ತಿದೆ.

ಆದ್ದರಿಂದ ಸಂದೇಶ ಬಂದಿರುವ ನಂಬರ್​ಗಳ ಮೂಲವನ್ನು ಪರಿಶೀಲಿಸಿದಾಗ ಅಮೆರಿಕ, ಕ್ರೊಯೇಷಿಯಾ ಮುಂತಾದ ದೇಶಗಳ ವಾಟ್ಸ್​​ಆ್ಯಪ್​ ಸಂಖ್ಯೆಗಳನ್ನು ಬಳಸಿರುವುದು ತಿಳಿದು ಬಂದಿದೆ. ಆದ್ದರಿಂದ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್​ ಸಂಬರಗಿ ಅವರು ಮನವಿ ಮಾಡಿಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ನೀಡಿರುವ ದೂರಿನ ಅನ್ವಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ಕೆಫೆ ಸ್ಫೋಟ: ಇಬ್ಬರು ಪ್ರಮುಖ ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ; ಎನ್ಐಎ - 10 lakh cash reward

ETV Bharat Logo

Copyright © 2024 Ushodaya Enterprises Pvt. Ltd., All Rights Reserved.