ETV Bharat / state

'ಲಕ್ಷ್ಮೀ ಹೆಬ್ಬಾಳ್ಕರ್ ಸುಧಾರಿಸಿಕೊಳ್ಳಬೇಕು, ಬಿಜೆಪಿ ರಾಜ್ಯ ನಾಯಕರು ಅಹಂಕಾರ ಬಿಡಬೇಕು': ರಮೇಶ್ ಜಾರಕಿಹೊಳಿ - Ramesh Jarkiholi

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಝುಂಜರವಾಡ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Ramesh Jarkiholi
ಮಾಜಿ ಸಚಿವ ರಮೇಶ್ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Jun 6, 2024, 7:44 AM IST

ಮಾಜಿ ಸಚಿವ ರಮೇಶ್ ಜಾರಕಿಹೊಳಿ (ETV Bharat)

ಬೆಳಗಾವಿ: ಚುನಾವಣೆ ಪೂರ್ವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ದರ್ಪ ನೋಡಿ ಜನರು ಬೇಸತ್ತು ಹೋಗಿದ್ದರು. ಅವರಿಗೆ ತಕ್ಕ ಉತ್ತರವನ್ನು ಮತದಾರರು ನೀಡಿದ್ದಾರೆ. ಇನ್ನಾದರೂ ಸುಧಾರಿಸಿಕೊಳ್ಳಲಿಲ್ಲ ಎಂದರೆ, ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟ ಎದುರಾಗಬಹುದು. ಅವರು ಸುಧಾರಣೆ ಆಗಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಸಿದರು.

ಬುಧವಾರದಂದು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರಿದ್ದಾರೆ, ಅವರ ಆಟದೆದುರು ಮನುಷ್ಯನ ಆಟ ನಡೆಯುವುದಿಲ್ಲ. ಕಳೆದ ಮೂರು ತಿಂಗಳಿನಿಂದ ಚುನಾವಣೆ ಸಂದರ್ಭ ಅವರ ಮಾತಿನ ದರ್ಪ ನಡೆಯುತಿತ್ತು. ಜನರು ಎಲ್ಲವನ್ನೂ ನೋಡಿ ಅವರಿಗೆ ಬುದ್ಧಿ ಕಲಿಸಿದ್ದಾರೆ. ನಮ್ಮ ತಂದೆ 60 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ನಾವು ಒಂದು ಗಾಡಿ ತೆಗೆದುಕೊಳ್ಳಲು ಯೋಚಿಸುತ್ತೇವೆ. ಆದರೆ ಹೆಬ್ಬಾಳ್ಕರ್ ಕುಟುಂಬ ಹಣ ಎಲ್ಲಿಂದ ತರುತ್ತದೆ ಎಂಬುದು ಜನರಿಗೆ ಈಗಾಗಲೇ ಗೊತ್ತಾಗಿದೆ. ಮತದಾರರು ಬುದ್ಧಿವಂತರಾಗಿದ್ದಾರೆ. ಅವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರು ಸುಧಾರಣೆ ಆಗ್ಲಿಲ್ಲ ಎಂದರೆ ಇನ್ನೂ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದು ತಿಳಿಸಿದರು.

ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಹೆಚ್ಚಲಿದೆ. ಮೋದಿ ಅವರು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂಬುದು ಊಹಾಪೋಹಗಳಷ್ಟೇ. ಕಾಂಗ್ರೆಸ್​​​​ಗೆ 60 ಸೀಟು ಬರಬೇಕಿತ್ತು. ಆದರೆ 30 ಜಾಸ್ತಿ ಆಗುತ್ತಿದ್ದಂತೆ ಭ್ರಮೆಗೆ ಹೋಗಿದ್ದಾರೆ. ಜಗತ್ತು ಗೆದ್ದಂತೆ ಭಾವಿಸಿದ್ದಾರೆ. ಆದರೆ, ಇನ್ನೂ 20 ವರ್ಷ ಬಿಜೆಪಿಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್ ಕಾರಿಡಾರ್ ಮಾರ್ಗದಲ್ಲಿ ಮೇಲ್ಸೇತುವೆ ಮನವಿ ಪರಿಗಣಿಸಲು ಸೂಚಿಸಿದ ಹೈಕೋರ್ಟ್ - High Court

ರಾಜ್ಯದಲ್ಲಿ ಡಿ.ಕೆ ಬ್ರದರ್ಸ್ಸ್​ ದರ್ಪ ನಡೆಯುವುದಿಲ್ಲ. ಅವರ ಹೊಂದಾಣಿಕೆ ರಾಜಕಾರಣ ನಡೆಯುವುದಿಲ್ಲ., ಹೊಂದಾಣಿಕೆ ರಾಜಕಾರಣ ಮಾಡಿ ಅವರು ಇಷ್ಟು ದಿನ ಯಶಸ್ವಿಯಾಗಿ ಬಂದಿದ್ದರು. ಇನ್ನು ಮುಂದಿನ ದಿನದಲ್ಲಿ ದರ್ಪ ಮಾಡಿದರೆ ನಡೆಯುವುದಿಲ್ಲ. ಜನರು ಯಾವಾಗ ಬುದ್ಧಿ ಕಲಿಸಬೇಕೋ ಆಗ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಅಣ್ಣಾಸಾಹೇಬ್​​​ ಜೊಲ್ಲೆ ಸೋಲು ನೋವು ತಂದಿದೆ. ನಾವು ರಾಜ್ಯ ನಾಯಕರ ಜೊತೆ ಚರ್ಚೆ ನಡೆಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಟಿಕೆಟ್ ಕೇಳುತ್ತಾರೆ. ಟಿಕೆಟ್ ಸಿಕ್ಕ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣನಿಗೆ ಪುರುಷತ್ವ ಪರೀಕ್ಷೆ: ಇನ್ನೊಂದು ವಾರದಲ್ಲಿ ಎಸ್​​​ಐಟಿ ಕೈ ಸೇರಲಿದೆ ವರದಿ - Prajwal Revanna medical test

ಸ್ವಪಕ್ಷದ ವಿರುದ್ಧ ಗುಡುಗಿದ ರಮೇಶ್ ಜಾರಕಿಹೊಳಿ: ಈ ಫಲಿತಾಂಶದಿಂದ ನಮಗೆ ಎಚ್ಚರಿಕೆ ಗಂಟೆ ರವಾನೆಯಾಗಿದೆ. ನಮ್ಮ ರಾಜ್ಯ ನಾಯಕರು ಅಹಂಕಾರ ಬಿಡಬೇಕು. ಕರ್ನಾಟಕ ನಾಯಕರು ಕೆಳ ಹಂತದ ನಾಯಕರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ಭವಿಷ್ಯ ಇದೆ ಎಂದರು. ಇನ್ನೂ, ದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತಾ ಎಂಬ ಪ್ರಶ್ನೆಗೆ, ಇದು ಸೂಕ್ತ ಸಮಯ ಅಲ್ಲ ಎಂದು ಪ್ರತಿಕ್ರಿಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.