ETV Bharat / state

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 23 ಕೋಟಿ ಅಕ್ರಮ; ಎಸ್ಐಟಿ ತನಿಖೆಗೆ ಕೋರಿ ರಮೇಶ್ ಬಾಬು ಸಿಎಂಗೆ ಪತ್ರ - Bhagya lakshmi scam

author img

By ETV Bharat Karnataka Team

Published : Sep 5, 2024, 6:52 PM IST

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತನಿಖೆಗೆ ಕೋರಿ ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ರಮೇಶ್​ ಬಾಬು ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ramesh-babu-wrote-to-cm
ರಮೇಶ್ ಬಾಬು ಹಾಗೂ ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು : ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2010-11ನೇ ಸಾಲಿನಲ್ಲಿ ಸೀರೆ ವಿತರಣೆ ಸಂಬಂಧ ನಡೆದಿರುವ ಸುಮಾರು 23 ಕೋಟಿ ರೂಪಾಯಿ ಅವ್ಯವಹಾರವನ್ನು SIT ತನಿಖೆಗೆ ಕೋರಿ ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ರಮೇಶ್ ಬಾಬು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

2006ರ ಅನ್ವಯ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 2011ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಂದಿನ ಬಿಜೆಪಿ ಸರ್ಕಾರ ಸೀರೆ ವಿತರಿಸುವ ಕಾರ್ಯಕ್ರಮ ಜಾರಿಗೊಳಿಸಿ, ಸುಮಾರು 10,68,996 ಸೀರೆಗಳನ್ನು ಸರ್ಕಾರದಿಂದ ಕೊಳ್ಳಲಾಗಿದೆ.

ಕರ್ನಾಟಕದ ನೇಕಾರರನ್ನು ಹಾಗೂ ಸೀರೆ ಉತ್ಪಾದನೆಯ ಸಹಕಾರ ಸಂಘಗಳನ್ನು ನಿರ್ಲಕ್ಷ್ಯ ಮಾಡಿ, ಗುಜರಾತಿನ ಸೂರತ್ ನಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ನೀಡಿ ಸೀರೆಗಳನ್ನು ಕೊಳ್ಳಲಾಗಿರುತ್ತದೆ. ಈ ವಹಿವಾಟಿನಲ್ಲಿ ಅಂದಿನ ಬಿಜೆಪಿಯ ವಿಧಾನ ಪರಿಷತ್ತಿನ ಸದಸ್ಯರು, ಈಗಿನ ರಾಜ್ಯಸಭಾ ಸದಸ್ಯರು ಆದ ಲೆಹರ್ ಸಿಂಗ್ ಅವರು ಭಾಗಿಯಾಗಿರುವ ಆರೋಪಗಳಿರುತ್ತದೆ ಎಂದು ದೂರಿದ್ದಾರೆ.

ಮಾರುಕಟ್ಟೆಯಲ್ಲಿ 100 ರೂಪಾಯಿಗಳಿಗೆ ದೊರೆಯಬಹುದಾದ ಸೀರೆಗಳನ್ನು ಹೆಚ್ಚಿನ ದರ ನಮೂದಿಸಿ, ರಾಜ್ಯದ ಹೊರಭಾಗದಿಂದ ಅಂದಿನ ಬಿಜೆಪಿ ಸರ್ಕಾರ ಕೊಂಡಿರುತ್ತದೆ. ಈ ಸಂಬಂಧ ಮಾರ್ಚ್ 2011ರಲ್ಲಿ ಕಾಂಗ್ರೆಸ್ ಪಕ್ಷದ ಅಂದಿನ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಮೋಟಮ್ಮ, ಸದಸ್ಯ ಆರ್. ವಿ ವೆಂಕಟೇಶ್, ದಯಾನಂದ್ ಮುಂತಾದವರು ಚರ್ಚೆ ಮಾಡಿ, ಹಗರಣದ ತನಿಖೆಗೆ ಒತ್ತಾಯ ಮಾಡಿದ್ದರು. ಸದರಿ 23 ಕೋಟಿ ರೂಪಾಯಿಗಳ ಹಗರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದ್ದು, ಇದರ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದರು ಎಂದು ತಿಳಿಸಿದ್ದಾರೆ.

ಭಾಗ್ಯಲಕ್ಷ್ಮಿ ಸೀರೆ ವಿತರಣೆಗೆ ಗುಜರಾತಿನ ಸೂರತ್​ನಿಂದ ಸೀರೆಗಳನ್ನು ಹೆಚ್ಚು ಹಣ ನೀಡಿ ಪಡೆಯುವ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗಿ ರಾಜ್ಯ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಸಾರ್ವಜನಿಕ ಹಣ ಲೂಟಿ ಆಗಿದೆ ಎಂಬುವ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ತನಿಖೆ ಮಾಡುವ ಅವಶ್ಯಕತೆ ಇರುತ್ತದೆ.

ಇಲ್ಲಿನ ನೇಕಾರರಿಗೆ ಮೋಸ ಎಸಗಲಾಗಿದೆ: ಕರ್ನಾಟಕದಲ್ಲಿ ಸೀರೆಗಳ ಪೂರೈಕೆಗೆ ವಿಸ್ತಾರವಾದ ಅವಕಾಶವಿದ್ದು, ನಮ್ಮ ರಾಜ್ಯದಲ್ಲೇ ಸೀರೆಗಳನ್ನು ಕ್ರಯಕ್ಕೆ ಪಡೆದುಕೊಂಡಿದ್ದರೆ ಇಲ್ಲಿನ ನೇಕಾರರಿಗೆ ಮತ್ತು ಕೈ ಮಗ್ಗದ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಶಕ್ತಿ ಬರುತ್ತಿತ್ತು. ಹೊರ ರಾಜ್ಯದಿಂದ ಸೀರೆಗಳನ್ನು ಹೆಚ್ಚು ದರಕ್ಕೆ ಪಡೆಯುವುದರ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ವಿಶೇಷವಾಗಿ ಇಲ್ಲಿನ ನೇಕಾರರಿಗೆ ಮೋಸ ಎಸಗಲಾಗಿದೆ. ಆದುದರಿಂದ ರಾಜ್ಯದ ಮತ್ತು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾಗ್ಯಲಕ್ಷ್ಮಿ ಯೋಜನೆಯ 2011ರ ಬಿಜೆಪಿ ಸರ್ಕಾರದ 23 ಕೋಟಿ ರೂಪಾಯಿಗಳ ಸೀರೆ ಹಗರಣವನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆ ಮಾಡುವಂತೆ ಕೋರಿದ್ದಾರೆ.

ಇದನ್ನೂ ಓದಿ : ಭಾಗ್ಯಲಕ್ಷ್ಮಿ ಯೋಜನೆಯನ್ನು ಎಲ್​ಐಸಿ ಮೂಲಕ ಜಾರಿಗೊಳಿಸಲು ಸಿಎಂಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.