ETV Bharat / state

ಕೃತಿ ಚೌರ್ಯ ಆರೋಪ: ಬಂಧನ ಭೀತಿ, ಕೋರ್ಟ್​ ಮೊರೆ ಹೋದ ರಕ್ಷಿತ್​ ಶೆಟ್ಟಿ - Rakshit Shetty Petition - RAKSHIT SHETTY PETITION

ಹಾಡೊಂದರ ಕೃತಿ ಚೌರ್ಯ ಆರೋಪದ ಹಿನ್ನೆಲೆಯಲ್ಲಿ ನಟ ರಕ್ಷಿತ್​ ಶೆಟ್ಟಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

rakshit shetty
ರಕ್ಷಿತ್​ ಶೆಟ್ಟಿ (ETV Bharat)
author img

By ETV Bharat Karnataka Team

Published : Jul 20, 2024, 8:38 PM IST

ಬೆಂಗಳೂರು: 'ಬ್ಯಾಚುಲರ್ಸ್​ ಪಾರ್ಟಿ' ಚಿತ್ರಕ್ಕೆ 'ನ್ಯಾಯ ಎಲ್ಲಿದೆ..' ಎಂಬ ಹಾಡನ್ನು ಬಳಕೆ ಮಾಡಿ, ಕೃತಿ ಚೌರ್ಯ ಆರೋಪದ ಮೇಲೆ ಬಂಧನ ಭೀತಿಯಲ್ಲಿರುವ ನಟ, ನಿರ್ದೇಶಕ ರಕ್ಷಿತ್​ ಶೆಟ್ಟಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ರಕ್ಷಿತ್​ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 61ನೇ ಸೆಷನ್ಸ್​ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ವಿವಾದಿತ ಹಾಡನ್ನು ಬಳಕೆ ಮಾಡುವ ಸಂಬಂಧ ಚರ್ಚೆ ನಡೆದಿತ್ತು. ಆದರೆ, ಅದು ಪೂರ್ಣಗೊಂಡಿರಲಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ರಕ್ಷಿತ್​ ಶೆಟ್ಟಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ರಕ್ಷಿತ್​ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋ 'ಬ್ಯಾಚುಲರ್ಸ್ ಪಾರ್ಟಿ' ಚಿತ್ರ ನಿರ್ಮಿಸಿತ್ತು. ಈ ಸಿನಿಮಾದಲ್ಲಿ ಹಳೆಯ ಚಲನಚಿತ್ರ ಗಾಳಿಮಾತು ಸಿನಿಮಾದ ಹಾಡನ್ನು ಬಳಕೆ ಮಾಡಿದ್ದರು. ಇದಕ್ಕಾಗಿ ಯಾವುದೇ ಅನುಮತಿ ಪಡೆದುಕೊಳ್ಳದೆ ಅನಧಿಕೃತವಾಗಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಾಡಿನ ಹಕ್ಕು ಹೊಂದಿರುವ ಎಂಆರ್​ಟಿ ಮ್ಯೂಸಿಕ್​ ಸಂಸ್ಥೆಯ ನವೀನ್ ಕುಮಾರ್ ಯಶ್ವಂತಪುರ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕೃತಿ ಚೌರ್ಯ ಕಾಯಿದೆಯಡಿ ಎಫ್​ಐಆರ್​ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್​ ಅರ್ಜಿ: ಎಸ್​ಐಟಿಗೆ ಕೋರ್ಟ್​​ ನೋಟಿಸ್​ - Darshan Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.