ETV Bharat / state

ಬೆಂಗಳೂರಿಗೆ ಮಳೆ ಸಿಂಚನ: ಬಿಸಿಲಿಂದ ಕಂಗೆಟ್ಟ ಜನರಿಗೆ ತಂಪೆರೆದ ವರುಣ - Rain In Bengaluru - RAIN IN BENGALURU

ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಸಂಜೆ ವೇಳೆಗೆ ಕೆಲಕಾಲ ಮಳೆಯಾಗಿದೆ.

Rain in many parts of Bengaluru
ಬೆಂಗಳೂರಿನ ಹಲವೆಡೆ ಮಳೆ (Etv Bharat)
author img

By ETV Bharat Karnataka Team

Published : May 2, 2024, 9:23 PM IST

Updated : May 2, 2024, 9:31 PM IST

ಬೆಂಗಳೂರಿಗೆ ಮಳೆ ಸಿಂಚನ (Etv Bharat)

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಗುರುವಾರ ಸಂಜೆ ವೇಳೆಗೆ ಗಾಳಿಸಹಿತ ಮಳೆ ಆಗಿದ್ದು, ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೆಂಗಳೂರಿನ ಕೆ.ಆರ್.ಸರ್ಕಲ್, ಮಾರ್ಕೆಟ್, ವಸಂತ ನಗರ, ಮೆಜಸ್ಟಿಕ್, ವೈಟ್ ಫೀಲ್ಡ್, ಕಾಡುಗೋಡಿ, ಹೋಫಾರಂ ಸೇರಿದಂತೆ ವಿವಿಧೆಡೆ ಕೆಲಕಾಲ ಮಳೆ ಸುರಿದಿದೆ. ಮಳೆಯಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಮೇಲ್ಚಾವಣಿ ಶೀಟ್ ಬಿದ್ದು ಅವಾಂತರ ಸೃಷ್ಟಿಯಾಗಿತ್ತು.

ಏಕಾಏಕಿ ವರುಣಾಗಮನ ಹಿನ್ನೆಲೆಯಲ್ಲಿ ಜನರು ಮಳೆಯಲ್ಲಿ ಮಿಂದೆದ್ದರು. ಮಳೆ ನೀರಿನಲ್ಲಿ ನೆನೆದುಕೊಂಡೇ ಮನೆಗಳತ್ತ ಸಾಗಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ; ಹೆಚ್ಚಿದ ಆತಂಕ - Temperature Continue To Rise

Last Updated : May 2, 2024, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.