ETV Bharat / state

ಮೇ.2ರಂದು ಶಿವಮೊಗ್ಗಕ್ಕೆ ರಾಹುಲ್​ ಗಾಂಧಿ ಆಗಮನ: ಮಧು ಬಂಗಾರಪ್ಪ - Rahul Gandhi to Visit Shivamogga - RAHUL GANDHI TO VISIT SHIVAMOGGA

ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್​ ಪರ ಪ್ರಚಾರ ನಡೆಸಲು ರಾಹುಲ್​ ಗಾಂಧಿ ಮೇ 2ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

rahul-gandhi-will-visit-to-shivamogga-on-may-2-says-madhu-bangarappa
ಮೇ 2ರಂದು ಶಿವಮೊಗ್ಗಕ್ಕೆ ರಾಹುಲ್​ ಗಾಂಧಿ ಆಗಮನ: ಮಧು ಬಂಗಾರಪ್ಪ
author img

By ETV Bharat Karnataka Team

Published : Apr 26, 2024, 6:18 PM IST

Updated : Apr 26, 2024, 6:24 PM IST

ಮಧು ಬಂಗಾರಪ್ಪ

ಶಿವಮೊಗ್ಗ: ರಾಹುಲ್​ ಗಾಂಧಿ ಮೇ.2ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್​ ಗಾಂಧಿ 12 ಗಂಟೆಯಿಂದ 1:30ರ ತನಕ ಸಮಯ ಕೊಟ್ಟಿದ್ದಾರೆ. ಸಮಾವೇಶವನ್ನು ದೊಡ್ಡ ಮಟ್ಟದಲ್ಲಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಅಂದು ಶಿವಮೊಗ್ಗ ನಗರ, ಗ್ರಾಮಾಂತರ, ಶಿಕಾರಿಪುರ ಮತ್ತು ಭದ್ರಾವತಿಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಸೇರಲಿದ್ದಾರೆ ಎಂದರು.

ಫಿಲ್ಮ್ ಚೇಂಬರ್ ಪಕ್ಷಾತೀತವಾಗಿ ಗೀತಾ ಶಿವರಾಜ್​ಕುಮಾರ್​ ಅವರಿಗೆ ಬೆಂಬಲ ಘೋಷಿಸಿದೆ. ಅವರು ಕೂಡಾ ಮೇ.29ರಿಂದ ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಪಕ್ಷಾತೀತವಾಗಿ ಗೀತಾ ಶಿವರಾಜ್​ಕುಮಾರ್​ ಅವರನ್ನು ಬೆಂಬಲಿಸುವುದಾಗಿ ಕೆಲವು ಫಿಲ್ಮ್ ಸ್ಟಾರ್​ಗಳು ಹೇಳಿದ್ದಾರೆ. ನಮಗಿರುವ ಮಾಹಿತಿ ಪ್ರಕಾರ ದುನಿಯಾ ವಿಜಯ್​, ಡಾಲಿ ಧನಂಜಯ್, ಧ್ರುವ ಸರ್ಜಾ, ಚಿಕ್ಕಣ್ಣ, ವಿಜಯ್​ ರಾಘವೇಂದ್ರ, ನೆನಪಿರಲಿ ಪ್ರೇಮ್ ಹಾಗೂ ಅನುಶ್ರೀ, ನಿಧಿ ಸುಬ್ಬಯ್ಯ, ನಿಶ್ಚಿಕಾ ನಾಯ್ಡು ಸೇರಿದಂತೆ ಅನೇಕರು ಶಿವಮೊಗ್ಗಕ್ಕೆ ಆಗಮಿಸಿ ಪ್ರಚಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಪಕ್ಷಕ್ಕಿಂತ ಬಿಜೆಪಿ ಹಾಗೂ ಮೋದಿ ಅವರ ವಿರುದ್ಧವೇ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಗ್ಯಾರಂಟಿಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತಿದೆ. 20 ಅಂಶದ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್, ಬಿಜೆಪಿ ಧರ್ಮದ ಅಮಲು ಏರಿಸಿದ್ದರು‌. ಈಗ ಅದು ಜನರಿಗೆ ಇಳಿದು ಹೋಗಿದೆ. ನಮ್ಮ ಪಕ್ಷಕ್ಕೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ಗೀತಾ ಶಿವರಾಜ್​ಕುಮಾರ್ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭಯಗೊಂಡಿದ್ದಾರೆ, ವೇದಿಕೆ ಮೇಲೆ ಕಣ್ಣೀರು ಹಾಕುವ ಸಾಧ್ಯತೆ ಇದೆ: ರಾಹುಲ್ ಗಾಂಧಿ - Rahul Gandhi

Last Updated : Apr 26, 2024, 6:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.