ETV Bharat / state

ಮುಸ್ಲಿಮರ ಓಲೈಕೆ, ಹಿಂದೂಗಳ ಕಡೆಗಣನೆ ನೋಡಿ ಶೆಟ್ಟರ್ ವಾಪಸ್: ಆರ್​.ಅಶೋಕ್ - r ahsok

ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿರುವುದನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇವೆ ಎಂದು ಆರ್​ ಅಶೋಕ್​ ಹೇಳಿದ್ದಾರೆ.

ಕಾಂಗ್ರೆಸ್​ ವಿರುದ್ದ ಆರ್​ ಅಶೊಕ್ ವಾಗ್ದಾಳಿ
ಕಾಂಗ್ರೆಸ್​ ವಿರುದ್ದ ಆರ್​ ಅಶೊಕ್ ವಾಗ್ದಾಳಿ
author img

By ETV Bharat Karnataka Team

Published : Jan 25, 2024, 7:14 PM IST

Updated : Jan 25, 2024, 7:44 PM IST

ಬೆಂಗಳೂರು: ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದೇನೂ ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾರದೇ ಶೆಟ್ಟರ್ ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನೂ ಆಪರೇಷನ್ ಕಮಲ ಅಲ್ಲ. ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿಬಿಟ್ಟಿದ್ದರು‌. ರಾಮ ನವಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿರುವುದನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇವೆ ಎಂದರು.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ. ಇನ್ನೇನಿದ್ದರೂ ಕಾಂಗ್ರೆಸ್ ಚೋಡೊ ಎಂಬ ಘೋಷಣೆ ಕೇಳಿ ಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿ ಅವರ ಪಕ್ಷ ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿದೆ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಿಂದಲೂ ಹೊರಗೆ ಹಾಕಲಾಗುತ್ತದೆ‌. ಈ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದು ಹೇಳಿದರು.

ಬಿಜೆಪಿಯವರು ನಮ್ಮಲ್ಲಿಗೆ ಬಂದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರು. ಈಗ ಆ ಮಾತುಗಳು ನಿಲ್ಲಲಿದೆ. ಕಾಂಗ್ರೆಸ್​ನಲ್ಲಿ ನಾಯಕರ ಗತಿ ಇಲ್ಲವಾಗಿರುವುದರಿಂದ ನಮ್ಮ ನಾಯಕರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದ ಅಶೋಕ್, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿಯ ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಜಗದೀಶ್ ಶೆಟ್ಟರ್ ಆಗಮನ ಅತ್ಯಂತ ಸಂತೋಷ ತಂದಿದೆ. ಉತ್ತರ ಕರ್ನಾಟಕದ ಒಬ್ಬ ಪ್ರಭಾವಿ ಕಟ್ಟಾಳು. ಅವರ ತಂದೆ ಕಾಲದಿಂದಲೂ ಸಂಘದಲ್ಲಿದ್ದು, ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸಿ, ಸಿಎಂ ಆಗಿ ಬಿಜೆಪಿಗೆ ಕೊಡುಗೆ ನೀಡಿದ್ದಾರೆ, ಬೇರೆ ಬೇರೆ ಕಾರಣದಿಂದ ಅವರು ಕಾಂಗ್ರೆಸ್ ಸೇರಿದ್ದರು. ಹಲವು ದಿನಗಳಿಂದ ಬಿಜೆಪಿ ಸೇರ್ತಾರೆ ಅನ್ನೋ ವಿಚಾರ ಇತ್ತು.

ಯಡಿಯೂರಪ್ಪ, ವಿಜಯೇಂದ್ರ ಹಾಗೂ ಕೇಂದ್ರದ ಅನೇಕ ನಾಯಕರ ಸಮ್ಮುಖದಲ್ಲಿ ಅವರೀಗ ಪಕ್ಷ ಸೇರಿದ್ದಾರೆ. ಶೆಟ್ಟರ್ ವಾಪಸ್ ಪಕ್ಷಕ್ಕೆ ಸೇರಿರೋದು ಸಂತಸ ತಂದಿದೆ. ಈಗ ಯಾಕೆ ಬಂದರು ಅಂತ ಕಾರಣ ಹುಡುಕೋ ಸಮಯ ಅಲ್ಲ. ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂದರು. ಕಾಂಗ್ರೆಸ್ ಬಿಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ, ಈಗ ಶೆಟ್ಟರ್ ವಾಪಸ್ ಬಂದಿದ್ದಾರೆ. ಬೇರೆ ಯಾರು ಬರ್ತಾರೆ ಅಂತಾ ಗೊತ್ತಿಲ್ಲ. ಕಾಂಗ್ರೆಸ್ ಆಪರೇಷನ್ ನೂರಕ್ಕೆ ನೂರು ಉಲ್ಟಾ ಆಗಲಿದೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ರೈತರ, ಮಹಿಳೆಯರ ಶಾಪದಿಂದ ಸರ್ಕಾರ ಬೀಳಲಿದೆ. ಈ ರಾಜ್ಯದಲ್ಲಿ ಸರ್ಕಾರಕ್ಕೆ ಆಪತ್ತು ಕಾದಿದೆ. ರಾಜ್ಯ ಸರ್ಕಾರ ಉರುಳಲಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಭವಿಷ್ಯದ ನುಡಿದರು.

ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ಇಂದು ಬಿಜೆಪಿಗೆ ಸಂತೋಷದ ದಿನ. ನಮ್ಮಿಂದ ದೂರವಾಗಿದ್ದ ಜಗದೀಶ್ ಶೆಟ್ಟರ್ ಅವರು ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮೋದಿ ಅವರ ನಾಯಕತ್ವ ಮೆಚ್ಚಿ ವಾಪಸ್ ಬಂದಿದ್ದಾರೆ. ಲೋಕಸಭಾ ಚುನಾವಣೆಗೆ ಶಕ್ತಿ ಬಂದಿದೆ ಎಂದರು.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆ ಆಗಿರೋದು ಸಂತಸ ತಂದಿದೆ. ಶೆಟ್ಟರ್ ಅವರ ಮರು ಸೇರ್ಪಡೆಯಿಂದ ಬಹು ದೊಡ್ಡ ಶಕ್ತಿ ಬಂದಂತಾಗಿದೆ. ಕಾಂಗ್ರೆಸ್‌ಗೆ ಮರ್ಮಾಘಾತ ಆಗಿದೆ. ಶೆಟ್ಟರ್ ಅವರ ದೇಹ ಅಲ್ಲಿ, ಮನಸ್ಸು ಇಲ್ಲಿ ಎಂಬಂತಾಗಿತ್ತು. ಸಣ್ಣ ಮಿಸ್ ಕಮ್ಯುನಿಕೇಷನ್​​ನಿಂದಾಗಿ ಅವರು ಕಾಂಗ್ರೆಸ್​​ಗೆ ಹೋಗಿದ್ದರು ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಾತನಾಡಿ, ಜಗದೀಶ್ ಶೆಟ್ಟರ್ ಕೂಡ ಕಾರ್ಯಕಾರಿಣಿ ಸಭೆಗೆ ಬರ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ. ಶೆಟ್ಟರ್ ಹಿರಿಯರಾಗಿದ್ದು, ಪಕ್ಷ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದರು.

ಇದನ್ನೂ ಓದಿ: ಶೆಟ್ಟರ್ ಮನೆಯಲ್ಲಿ ಮತ್ತೆ ಸ್ಥಾನ ಪಡೆದ ಬಿಜೆಪಿ ನಾಯಕರ ಫೋಟೋಗಳು

Last Updated : Jan 25, 2024, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.