ETV Bharat / state

ಮತಕ್ಕಾಗಿ ಗ್ಯಾರಂಟಿ ಪ್ರಕಟಿಸದೇ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದೆ: ಆರ್.ಅಶೋಕ್ - R Ashok

ಇಂದು ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

R Ashok on Budget
ಬಜೆಟ್​ ಬಗ್ಗೆ ಆರ್​ ಅಶೋಕ್ ಪ್ರತಿಕ್ರಿಯೆ
author img

By ETV Bharat Karnataka Team

Published : Feb 1, 2024, 2:06 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದರೂ ಮತಕ್ಕಾಗಿ ರಾಜಕಾರಣ ಮಾಡದೇ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಂಡಿಸಿದ ಬಜೆಟ್ ಇದಾಗಿದೆ. ಮತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿಲ್ಲ. ದೇಶದ ಜನರ, ಮಧ್ಯಮ ವರ್ಗದವರ ದೃಷ್ಟಿಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೂರಕ ಬಜೆಟ್ ಕೊಟ್ಟಿದ್ದಾರೆ. ಇದು ಬಡವರ ಪರವಾಗಿದೆ, ಅಭಿವೃದ್ಧಿಗೆ ಪೂರಕವಾಗಿದೆ, ತಂತ್ರಜ್ಞಾನ ಬಳಕೆಗೆ ಅನುಕೂಲಕರವಾಗಿದೆ ಮತ್ತು ಭಾರತದ ಏಳಿಗೆಗೆ ಪೂರಕವಾಗಿರುವ ಬಜೆಟ್. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಇದು ಪೂರಕ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯದಂತೆ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.

7 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ತೆರಿಗೆ ಇಲ್ಲದಿರುವುದು ಮಧ್ಯಮವರ್ಗಕ್ಕೆ ಪೂರಕವಾಗಿದೆ. ಸ್ವಸಹಾಯ ಮಹಿಳಾ ಗುಂಪುಗಳ 9 ಕೋಟಿ ಮಹಿಳೆಯರಿಗೆ ಅನುಕೂಲವಾಗಿದೆ. 1 ಕೋಟಿ ಮನೆಗಳಿಗೆ ಸೋಲಾರ್, ಗರ್ಭಕೋಶ ಕ್ಯಾನ್ಸರ್​ಗೆ ಉಚಿತ ಲಸಿಕೆ, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಯುಷ್ಮಾನ್ ಯೋಜನೆ, ಸಣ್ಣ ಆದಾಯ ಪಡೆಯುವವರಿಗೆ ಅನುಕೂಲಕರ ಯೋಜನೆ, ಮಧ್ಯಮವರ್ಗದವರಿಗೆ ಮನೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ರೈಲು ಸಂಚಾರದಟ್ಟಣೆ ತಗ್ಗಿಸಲು ನಾಲ್ಕು ಕಾರಿಡಾರ್, 517 ಹೊಸ ವಿಮಾನ ಮಾರ್ಗ, ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಣಕಾಸು ನೆರವು, ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶ ಇವು ಇಂದಿನ ಬಜೆಟ್​ನ ಹೈಲೈಟ್ಸ್. ಇದರಿಂದ ನಮ್ಮ ದೇಶದ ಆರ್ಥಿಕತೆ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ. ಬಡ, ಮಧ್ಯಮವರ್ಗದವರಿಗೆ ಮನೆ ನಿರ್ಮಿಸಲು ಹೆಚ್ಚಿನ ಒತ್ತು ನೀಡಿದ ಆಶಾದಾಯ ಬಜೆಟ್ ಆಗಿದೆ ಎಂದರು.

ಒಟ್ಟಾರೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸಿದ​​ ಬಜೆಟ್ ಸ್ವಾಗತಾರ್ಗ. ಯಾವುದೇ ಗಿಮಿಕ್ ರಾಜಕಾರಣ ಮಾಡದೇ ಮುಂದಿನ ಜನಾಂಗಕ್ಕೆ ಉಪಯೋಗ ಆಗುವಂತಿದೆ. 2047ಕ್ಕೆ ಭಾರತ ಮೊದಲ ಸ್ಥಾನದಲ್ಲಿರಬೇಕು. ಈಗಾಗಲೇ ಬ್ರಿಟಿಷರ ದಾಟಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ ಐದು ವರ್ಷದಲ್ಲಿ ಮೂರನೇ ಸ್ಥಾನದ ಗುರಿ ಇದೆ. ಅದಕ್ಕೆ ಪೂರಕ ಬಜೆಟ್ ಇದಾಗಿದ್ದು, ಇದನ್ನು ಸ್ವಾಗತಿಸಲಿದ್ದೇವೆ ಎಂದು ಹೇಳಿದರು.

ಕನ್ನಡ ಬೋರ್ಡ್ ಕಡ್ಡಾಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅಧಿವೇಶನ ಘೋಷಣೆಯಾದ ನಂತರ ಯಾವುದೇ ಬಿಲ್​ಗೆ ಸಹಿ ಮಾಡುವ ಅವಕಾಶ ಸಂವಿಧಾನದಲ್ಲಿ ಇಲ್ಲ. ನಮ್ಮ ಸರ್ಕಾರದ ವೇಳೆಯಲ್ಲಿಯೂ ಈ ರೀತಿ ಆದ ಉದಾಹರಣೆ ಇದೆ. ಅಧಿವೇಶನ ಇಲ್ಲದೇ ಇದ್ದಾಗ ಮಾತ್ರ ಸಹಿ ಮಾಡುತ್ತಾರೆ. ಹಾಗಾಗಿ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದರು. ರಾಜ್ಯಕ್ಕೆ 50 ವರ್ಷಕ್ಕೆ ಬಡ್ಡಿ ರಹಿತ ಪ್ರವಾಸೋದ್ಯಮಕ್ಕೆ ಸಾಲ ಸೌಲಭ್ಯ, ರೈಲ್ವೆ, ವಿಮಾನ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ಇದರಲ್ಲೆಲ್ಲಾ ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ ಎಂದರು.

ಮೇಕೆದಾಟು ಯೋಜನೆಗೆ 'ಬ್ರದರ್ಸ್' ಒಪ್ಪಿಸಿ: ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಿದರು. ನಮ್ಮ ಸರ್ಕಾರದ ವೇಳೆ ಅವರ ತಮಿಳುನಾಡಿನ ಬ್ರದರ್ಸ್ ಕಲ್ಲು ಹಾಕಿದರು. ಸುಮ್ಮನೆ ಕೇಂದ್ರದ ಮೇಲೆ ಆರೋಪ ಸಲ್ಲದು, ಅವರ ಬ್ರದರ್ಸ್ ಜೊತೆ ಮಾತನಾಡಿಕೊಂಡು ಬರಲಿ ಕೇಂದ್ರವನ್ನು ನಾವು ಒಪ್ಪಿಸಲಿದ್ದೇವೆ.

ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕೊಟ್ಟಿರುವ ಟೆಂಡರ್​ಗಳನ್ನೇ ಇವರು ಮುಂದುವರೆಸಿಲ್ಲ. ಅದನ್ನೇ ನಿಲ್ಲಿಸಿದ್ದಾರೆ. ಕೃಷ್ಣೆಯ ಕಣ್ಣೀರು ಕೃತಿ ಬಿಡುಗಡೆ ಮಾಡಿದರು. ಆದರೆ ಕಣ್ಣೀರಿನಿಂದ ಪುಸ್ತಕ ಒದ್ದೆಯಾಗಿದೆ ಅಷ್ಟೇ. ಇವರು 50 ಸಾವಿರ ಕೋಟಿ ಕೊಡುತ್ತೇವೆ ಎಂದರು. ಆದರೆ ಹಣ ಕೊಡುತ್ತಿಲ್ಲ. ಮೊದಲು ರಾಜ್ಯ ಸರ್ಕಾರ ಮೇಕೆದಾಟಿಗೆ 25 ಸಾವಿರ ಕೋಟಿ, ಎತ್ತಿನ ಹೊಳೆಗೆ ಹಣ ಇಡಲಿ. ನಾವು ಕೇಂದ್ರದಿಂದ ಮಂಜೂರಾತಿ ಕೊಡಲಿದ್ದೇವೆ ಎಂದು ಹೇಳಿದರು.

ಸಿಂಗ್ ಸರ್ಕಾರ ಕೊಟ್ಟಿದ್ದೇನು?: ಕೇಂದ್ರದ ಅನುದಾನ ಕಡಿತ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲು ಹೊರಟಿದ್ದೀರಲ್ಲ. ವಿಪತ್ತು ನಿಧಿ, ಜಲ್ ಜೀವನ್ ಮಿಷನ್ ಸೇರಿ ಎಲ್ಲದಕ್ಕೆ ಕೊಟ್ಟಿರುವುದನ್ನು ಮೊದಲು ಪಟ್ಟಿ ಮಾಡಿ. ನಂತರ ಕೊಡದಿರುವುದರ ಬಗ್ಗೆ ಮಾತನಾಡಿ. ಈ ರೀತಿ ತಪ್ಪು ಮಾಹಿತಿ ನೀಡುವುದರಲ್ಲಿ ಸಿಎಂ ಎಕ್ಸ್‌ಪರ್ಟ್. ದಾಖಲೆಯ ಬಜೆಟ್ ಮಂಡಿಸಿ ಎಕ್ಸ್‌ಪರ್ಟ್ ಆಗಿದ್ದಾರೆ. ಹಾಲು, ಮದ್ಯದ ದರದಲ್ಲಿ ಹೆಚ್ಚಿಸಲಾಗಿದೆ. 3,500 ರೂ ಜನರಿಂದ ವಸೂಲಿ ಮಾಡಿ ಮನೆಯ ಯಜಮಾನಿಗೆ 2 ಸಾವಿರ ಕೊಟ್ಟು 1,500 ಅನ್ನು ಜೇಬಿಗಿಟ್ಟುಕೊಂಡಿದ್ದಾರೆ. ಅಲ್ಲೇ ಕಿತ್ತು ಅಲ್ಲೇ ಕೊಡುತ್ತಿದ್ದಾರೆ. ನಮಗೆ ದೇಶ ಮೊದಲು. ಕಾಂಗ್ರೆಸ್​ಗೆ ಸೋನಿಯಾ ಅವರು ಮೊದಲು. ಇದೇ ವ್ಯತ್ಯಾಸ. 10 ವರ್ಷದಲ್ಲಿ ರಾಜ್ಯಕ್ಕೆ ಮೋದಿ ಏನೇನು ಕೊಟ್ಟಿದ್ದಾರೆ, ಮನಮೋಹನ್ ಸಿಂಗ್ ಸರ್ಕಾರ 10 ವರ್ಷದಲ್ಲಿ ಏನು ಕೊಟ್ಟಿದೆ ಎಂದು ಜನರ ಮುಂದಿಡಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ನಮ್ಮ ನಿರೀಕ್ಷೆ ಶೂನ್ಯ: ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಸ್ವಾಮಿ ಭವಿಷ್ಯವಾಣಿ ನಿಜವಾಗಬಹುದು: ಈ ಸರ್ಕಾರ ಬದುಕಿದೆ ಎಂದು ಯಾರಿಗೂ ಅನ್ನಿಸಿತ್ತಿಲ್ಲ. ಈ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಅಂತಾ ಇದ್ದಾರೆ. ಅಭಿವೃದ್ಧಿಗೆ ಹಣ ಬಿಡುಗಡೆ ಆಗಿಲ್ಲ. ಬಿಹಾರದ ವಿದ್ಯಮಾನ ರಾಜ್ಯದಲ್ಲಿಯೂ ಆಗಬಹುದು ಎನ್ನುವ ಕುಮಾರಸ್ವಾಮಿ ಭವಿಷ್ಯವಾಣಿ ಸತ್ಯವಾಗಬಹುದು. ಎರಡು ಬಾರಿ ಸಿಎಂ ಆದವರು ಅವರು. ಇಲ್ಲಿನ ಸನ್ನಿವೇಶವೂ ಹಾಗೆಯೇ ಇದೆ. ಇದು ಹಿಂದೂ ವಿರೋಧಿ ಸರ್ಕಾರ, ಜನಕ್ಕೆ ಭ್ರಮನಿರಸವಾಗಿದೆ, ಕುಮಾರಸ್ವಾಮಿ ಹೇಳಿದ್ದು ಆಗಬಹುದು ಅದನ್ನು ಅವರನ್ನೇ ಮತ್ತೊಮ್ಮೆ ಕೇಳಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.