ETV Bharat / state

ದೊಡ್ಡಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ - ಕೆರೆಗೋಡು ಬಾವುಟ ಪ್ರಕರಣ

ಹೆಸರಲ್ಲಿ ರಾಮ ಇದ್ದರೆ ಸಾಲದು, ಹೃದಯದಲ್ಲಿ ರಾಮ ಇರಬೇಕು. ನಿಮ್ಮ ಹೃದಯದಲ್ಲಿ ಇರೋದು ಮೌಲ್ವಿಗಳು ಮತ್ತು ಟಿಪ್ಪು ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಅವರು ವಾಗ್ಧಾಳಿ ನಡೆಸಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್​. ಅಶೋಕ್
ವಿರೋಧ ಪಕ್ಷದ ನಾಯಕ ಆರ್​. ಅಶೋಕ್
author img

By ETV Bharat Karnataka Team

Published : Jan 30, 2024, 10:38 PM IST

ವಿರೋಧ ಪಕ್ಷದ ನಾಯಕ ಆರ್​. ಅಶೋಕ್

ದೊಡ್ಡಬಳ್ಳಾಪುರ : ಮಂಡ್ಯ ಜಿಲ್ಲೆಯ ಕೆರೆಗೋಡು ಬಾವುಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇಂದು ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು. ದೊಡ್ಡಬಳ್ಳಾಪುರದ ನೆಲದಾಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿವರೆಗೂ ಸಾಗಿ ಬಂತು. ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು, ಕೇಸರಿ ಬಾವುಟವನ್ನ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಸಾಗಿದರು.

ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದವರು ಕಾಂಗ್ರೆಸ್ ಪಕ್ಷದವರು. ಕೆರೆಗೋಡು ಸುತ್ತಮುತ್ತಲಿನ 22 ಗ್ರಾಮದ ಜನರಿಂದ 100 ರೂಪಾಯಿ ದೇಣಿಗೆ ಸಂಗ್ರಹಿಸಿ 6 ಲಕ್ಷ ದೇಣಿಗೆ ಹಣದಲ್ಲಿ 108 ಅಡಿಗಳ ಧ್ವಜವನ್ನ ನಿರ್ಮಾಣ ಮಾಡಲಾಗಿತ್ತು. ಈ ಧ್ವಜಸ್ತಂಭ ಗ್ರಾಮಸ್ಥರಿಗೆ ಸೇರಿದ್ದೇ ಹೊರತು, ಚೆಲುವನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹಬ್ಬಗಳು ಬಂದಾಗ ರಾಷ್ಟ್ರ ಬಾವುಟ ಮತ್ತು ನಾಡ ಬಾವುಟವನ್ನ ಹಾರಿಸಲಾಗುತ್ತಿತ್ತು. ಅನಂತರ ಹನುಮಂತನ ಬಾವುಟವನ್ನ ಹಾರಿಸಲಾಗುತ್ತಿತ್ತು. ಹನುಮಂತ ಹುಟ್ಟಿದ್ದ ನಾಡಲ್ಲಿ ಹನುಮನ ಬಾವುಟ ಹಾರಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನ ಕೇಳಬೇಕಾ?. ದೇವಸ್ಥಾನದಿಂದ 40 ಅಡಿಗಳ ಅಂತರದಲ್ಲಿ ಹನುಮಂತನ ಬಾವುಟವನ್ನ ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಲಾಲ್​ಚೌಕ್​ನಲ್ಲಿ 10 ಸಾವಿರ ಜನರು ಹೋಗಿ ರಾಷ್ಟ್ರ ಬಾವುಟವನ್ನ ಹಾರಿಸಿದ್ವಿ. ಆಗ ನೀವು ನಮ್ಮ ಮೇಲೆ ಗುಂಡು ಹಾರಿಸಿದ್ರಿ. ಲಾಠಿಚಾರ್ಜ್​​​ ಮಾಡಿದ್ರಿ. ರಾಷ್ಟ್ರಧ್ವಜ ಹಾರಿಸುವುದಕ್ಕೆ ನೀವು ಅನುಮತಿ ಕೊಡಲಿಲ್ಲ. 30 ವರ್ಷಗಳ ಹಿಂದೆ ಹುಬ್ಬಳಿಯ ಈದ್ಗಾ ಮೈದಾನದಲ್ಲಿ 5 ಸಾವಿರ ಪೊಲೀಸರು ಇದ್ರು. ನಾವು ಹೋಗಿ ರಾಷ್ಟ್ರ ಬಾವುಟವನ್ನ ಹಾರಿಸಿ ಬಂದ್ವಿ. ಆಗಲೂ ನೀವು ಲಾಠಿಚಾರ್ಚ್ ಮಾಡಿದ್ರಿ. ನಮ್ಮನ್ನು ಜೈಲಿಗೆ ಹಾಕಿದ್ರಿ ಎಂದು ಕಿಡಿಕಾರಿದ್ದಾರೆ.

ಇಲ್ಲೆಲ್ಲ ರಾಷ್ಟ್ರಧ್ವಜವನ್ನ ಹಾರಿಸಲು ವಿರೋಧ ಮಾಡಿದವರು ಇಲ್ಲಿ ಏಕೆ ರಾಷ್ಟ್ರಧ್ವಜದ ಮೇಲೆ ಪ್ರೀತಿ ತೋರಿಸುತ್ತಿದ್ದೀರಿ ?. ಹೆಸರಲ್ಲಿ ರಾಮ ಇದ್ರೆ ಸಾಲದು, ಹೃದಯದಲ್ಲಿ ರಾಮ ಇರಬೇಕು. ನಿಮ್ಮ ಹೃದಯಲ್ಲಿ ಇರೋದು ಮೌಲ್ವಿಗಳು ಮತ್ತು ಟಿಪ್ಪು ಸುಲ್ತಾನ್ ಮಾತ್ರ ಎಂದು ಸಿಎಂ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್​ ವಾಗ್ದಾಳಿ ನಡೆಸಿದರು.

ಮಂಡ್ಯದ ಕೆರೆಗೋಡಿನಲ್ಲಿ ಧ್ಬಜ ಸಂಬಂಧ ಏರ್ಪಟ್ಟ ವಿವಾದ ಇದೀಗ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಸರ್ಕಾರ ನೀತಿ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಅತ್ತ ಸರ್ಕಾರ, ಧ್ವಜಾರೋಹಣ ವಿಚಾರವಾಗಿ ಅನುಮತಿ ನೀಡಿದ ಗ್ರಾಪಂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆದೇಶ ನೀಡಿದೆ.

ಇದನ್ನೂ ಓದಿ : ಬರೇ ಬಾಯಲ್ಲಿ ಅಲ್ಲ, ಹೃದಯದಲ್ಲಿ ರಾಮ ಇರಬೇಕು: ಆರ್. ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.