ETV Bharat / state

'ರೈತ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ': ಬೆಂಗಳೂರಿನಲ್ಲಿ ಪ್ರತಿಭಟನೆ - ದಲಿತ ಸಂಘರ್ಷ ಸಮಿತಿ

ರೈತ ವಿರೋಧಿ ಕೃಷಿ ನೀತಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಕೇಂದ್ರ ಸರ್ಕಾರದ ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ, ರೈತ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

protest against central govt
ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ
author img

By ETV Bharat Karnataka Team

Published : Feb 16, 2024, 10:03 PM IST

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಶೋಷಣೆ, ನಿರುದ್ಯೋಗ ಸಮಸ್ಯೆ, ರೈತ ವಿರೋಧಿ ಕೃಷಿ ನೀತಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಬಿಜೆಪಿ, ಆರ್‌ಎಸ್‌ಎಸ್‌ ದೇಶವನ್ನು ಮಾತೃ ಭೂಮಿ ಎಂದು ಹೇಳುತ್ತಾರೆ. ಆದರೆ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಪ್ರಶ್ನಿಸಲು ದಿಲ್ಲಿಗೆ ಹೋದ ರೈತರನ್ನು ಹತ್ತಿಕ್ಕಲು ಅದೇ ಮಾತೃಭೂಮಿಗೆ ಮೊಳೆ ಹೊಡೆದಿದ್ದಾರೆ. ತಂದೆ ಕಷ್ಟಪಟ್ಟು ದುಡಿದ ಆಸ್ತಿಯನ್ನು ಉಡಾಳ ಮಗ ಮಾರಾಟ ಮಾಡಿದಂತೆ ದೇಶದ ಜನರು ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಪ್ರಧಾನಿ ಮೋದಿ ಮಾರುತ್ತಿದ್ದಾರೆ. ಅದನ್ನು ಕಾರ್ಮಿಕರು ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ಸರಿಯಾದ ಬುದ್ಧಿಯನ್ನು ಮೋದಿ ಸರಕಾರಕ್ಕೆ ಕಲಿಸಬೇಕು ಎಂದರು.

ಕೇಂದ್ರ ಸರ್ಕಾರ ಎಂಎಸ್‌ಪಿ ಜಾರಿಗೊಳಿಸಲಿ: ಸಂಯುಕ್ತ ಹೋರಾಟ ಸಮಿತಿಯ ಬಸವರಾಜು ಮಾತನಾಡಿ, ದೇಶದ ರೈತರಿಗೆ ಬರುತ್ತಿರುವ ಆದಾಯ ಕಡಿಮೆ, ಆದರೆ ರೈತರ ಮೇಲೆ ಅಧಿಕ ಸಾಲದ ಹೊರೆಯಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಕೂಡಲೇ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸಬೇಕು. ಕೇಂದ್ರ ಸರಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿರುವುದು ಸ್ವಾಗತಾರ್ಹ. ಆದರೆ ಭಾರತ ರತ್ನ ನೀಡಿದ ಮಾತ್ರಕ್ಕೆ ಅವರ ಆಶಯ ಈಡೇರಲು ಸಾಧ್ಯವಿಲ್ಲ. ಸ್ವಾಮಿನಾಥನ್ ಅವರ ಮೇಲೆ ಗೌರವವಿದ್ದರೆ ಎಂಎಸ್‌ಪಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಕಡೆ ಬರ ಇತ್ಯಾದಿ ಕಾರಣದಿಂದ ಬೆಳೆಯಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ರೈತರಿಗಾಗಿ ಋಣ ಮುಕ್ತ ಕಾಯಿದೆಯನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯುನ ವರಲಕ್ಷ್ಮಿ, ಪತ್ರಕರ್ತ ಸಿದ್ದನಗೌಡ ಪಾಟೀಲ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಎಐಯುಟಿಯುಸಿ ಮುಖಂಡ ಕೆ.ವಿ.ಭಟ್, ಶಾಮಣ್ಣರೆಡ್ಡಿ, ಅಪ್ಪಣ್ಣ, ಮೈಕಲ್ ಫರ್ನಾಂಡಸ್, ಕಾಳಪ್ಪ, ನಾಗನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂಓದಿ:'ದೆಹಲಿ ಚಲೋ'ಗೆ ತಡೆ: ಕೇಂದ್ರದ ವಿರುದ್ಧ ವಿವಿಧೆಡೆ ಬೀದಿಗಿಳಿದ ರೈತ, ಕಾರ್ಮಿಕ ಸಂಘಟನೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.