ETV Bharat / state

ಶಿವಮೊಗ್ಗ: ಹುಲ್ಲು ತರಲು ಹೋಗಿದ್ದ 4 ತಿಂಗಳ ಬಾಣಂತಿ ಹಾವು ಕಚ್ಚಿ ಸಾವು - Snake Bite - SNAKE BITE

ಹುಲ್ಲು ತರಲು ಗದ್ದೆಗೆ ಹೋಗಿದ್ದ ಬಾಣಂತಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

SNAKE BITE
ರಂಜಿತಾ (ETV Bharat)
author img

By ETV Bharat Karnataka Team

Published : Aug 9, 2024, 8:11 PM IST

ಶಿವಮೊಗ್ಗ: ನಾಲ್ಕು ತಿಂಗಳ ಬಾಣಂತಿ ಹುಲ್ಲು ತರಲು ಗದ್ದೆಗೆ ಹೋಗಿದ್ದಾಗ ಹಾವು ಕಚ್ಚಿ ಮೃತಪಟ್ಟಿರುವ ದಾರುಣ ಘಟನೆ ಸಾಗರ ತಾಲೂಕು ಹುತ್ತಾದಿಂಬ ಗ್ರಾಮದಲ್ಲಿ ಇಂದು ನಡೆಯಿತು. ರಂಜಿತಾ (22) ಮೃತರು.

ರಂಜಿತಾ ಮೇವು ತರಲು ಗದ್ದೆಗೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿದ್ದ ಹಾವು ಕಚ್ಚಿದೆ. ಹಾವು ಕಡಿದಾಗ ಅವರ ಗಮನಕ್ಕೆ ಬಂದಿರಲಿಲ್ಲ. ಆದರೆ, ಸ್ವಲ್ಪ ಹೊತ್ತಿನ ಗೊತ್ತಾಗಿದೆ. ಅಷ್ಟರಲ್ಲಿ ಕುಸಿದು ಬಿದ್ದಿದ್ದಾರೆ.

ಹುಲ್ಲು ತರಲು ಹೋಗಿದ್ದ ರಂಜಿತಾ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಗದ್ದೆಗೆ ಹೋಗಿ ನೋಡಿದ್ದಾರೆ. ಆಗ ಗದ್ದೆಯಲ್ಲಿ ಕುಸಿದು ಬಿದ್ದಿರುವುದು ಕಂಡಿದೆ. ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಅಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿರುವುದಾಗು ಕುಟುಂಬಸ್ಥರು ತಿಳಿಸಿದರು.

ರಂಜಿತಾ ಅವರಿಗೆ 3 ವರ್ಷದ ಹೆಣ್ಣು ಹಾಗೂ 4 ತಿಂಗಳ ಗಂಡು ಮಗು ಇದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಯುವಕನ ಹಿಂದೆ ಬಿದ್ದ ಒಂದೇ ಹಾವು, 7ನೇ ಬಾರಿ ಕಚ್ಚಿದ ನಾಗ! - Snake Bite

ETV Bharat Logo

Copyright © 2024 Ushodaya Enterprises Pvt. Ltd., All Rights Reserved.