ETV Bharat / state

ರಾಜ್ಯಕ್ಕೆ ಒಳ್ಳೆಯದಾಗಿ, ನೆಮ್ಮದಿ ಸಿಗಲೆಂದು ಪ್ರಾರ್ಥನೆ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K SHIVAKUMAR

ಸಮೀಕ್ಷೆ ಬಗ್ಗೆ ನನಗೆ ಯಾವತ್ತೂ ನಂಬಿಕೆ ಇಲ್ಲ, ಎಲ್ಲಾ ಕಡೆಯಿಂದಲೂ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂದು ಡಿ.ಕೆ. ಶಿವಕುಮಾರ್​ ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

D K Shivakumar Visited Kolluru Mukambika Temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಡಿಕೆಶಿ ಭೇಟಿ (ETV Bharat)
author img

By ETV Bharat Karnataka Team

Published : Nov 21, 2024, 5:11 PM IST

Updated : Nov 21, 2024, 7:15 PM IST

ಉಡುಪಿ: ರಾಜ್ಯದ ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪತ್ನಿ, ಮಗಳು ಮತ್ತು ಆಪ್ತರೊಂದಿಗೆ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯಕ್ಕೆ ಒಳ್ಳೆಯದಾಗಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ. ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಅರ್ಪಿಸುವಂತ ಭಾಗ್ಯ ಸಿಗಲಿ. ಆ ತಾಯಿ ಅವಕಾಶ ಕೊಟ್ಟಿದ್ದಾಳೆ. ಅದಕ್ಕಾಗಿ ಕುಟುಂಬ ಸಮೇತರಾಗಿ ಬಂದಿದ್ದೇವೆ. ಇಡಗುಂಜಿ ಗಣಪತಿ ದೇವಾಲಯಕ್ಕೂ ಭೇಟಿ ನೀಡಲಿದ್ದೇನೆ. ಮುರ್ಡೇಶ್ವರದಲ್ಲಿ ಮೀನುಗಾರರ ಸಮಾವೇಶದಲ್ಲಿ ಕೂಡ ಭಾಗಿಯಾಗಲಿದ್ದೇನೆ. ಉಪ ಚುನಾವಣೆ ಫಲಿತಾಂಶದ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ, ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ, ಮಾಡುವ ಪ್ರಯತ್ನ ಮಾಡಿದ್ದೇವೆ ಫಲ ಕೊಡುವವನು ಭಗವಂತ" ಎಂದು ಹೇಳಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಡಿಕೆಶಿ ಭೇಟಿ (ETV Bharat)

"ಎಲ್ಲಾ ಕಡೆಯಲ್ಲೂ ದೇವರು ನಮಗೆ ಒಳ್ಳೆದು ಮಾಡುತ್ತಾರೆ. ಕರ್ನಾಟಕದಲ್ಲೂ, ಹರಿಯಾಣದಲ್ಲೂ ಸಮೀಕ್ಷೆ ನೀಡಿದ್ದರು. ಆದರೆ ಏನಾಯ್ತು? ನನಗೆ ಸಮೀಕ್ಷೆ ಬಗ್ಗೆ ಯಾವತ್ತೂ ನಂಬಿಕೆ ಇರುವುದಿಲ್ಲ. ಸಮೀಕ್ಷೆ ಕಟ್ಟಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಜನರ ಮನಸ್ಸನ್ನು ಗೆದ್ದವರು, ಜನರ ವಿಶ್ವಾಸ ಪಡೆದುಕೊಂಡವರು ಗೆಲ್ಲುತ್ತಾರೆ. ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ ಯಾವ ಬಿಪಿಎಲ್ ಅರ್ಹರಿಗೆ ಕೂಡಾ ಅನ್ಯಾಯ ಆಗಲು ನಮ್ಮ ಸರ್ಕಾರ, ನಮ್ಮ ಪಕ್ಷ ಬಿಡುವುದಿಲ್ಲ. ಕಾರ್ಡ್ ವಜಾ ಆಗಿರುವವರ ಪಟ್ಟಿ ನೀಡಿ, ಅರ್ಹರಿಗೆ ಕಾರ್ಡ್ ನೀಡಬೇಕು ಎಂದು ನಾವು ಈಗಾಗಲೇ ಮಂತ್ರಿಗಳಿಗೆ ಹೇಳಿದ್ದೇನೆ. ಪ್ರತಿ ತಾಲ್ಲೂಕಿನಲ್ಲಿ ಗ್ಯಾರಂಟಿ ಸಮಿತಿ ಇದೆ. ಇವರು ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ. ಪಾಪ ಏನಾದರೂ ಮಾತನಾಡಬೇಕಲ್ಲ, ಅದಕ್ಕೆ ಮಾತನಾಡುತ್ತಿದ್ದಾರೆ" ಎಂದು ಟಾಂಗ್ ನೀಡಿದರು.

ನಕ್ಸಲ್ ವಿಕ್ರಂ ಗೌಡ ಎನ್​ಕೌಂಟರ್ ಕುರಿತು ಪ್ರತಿಕ್ರಿಯಿಸಿ, "ಪೊಲೀಸ್ ಕೆಲಸವನ್ನು ಪೊಲೀಸ್​ ಅವರು ಮಾಡುತ್ತಾರೆ. ಗೃಹಸಚಿವ ಪರಮೇಶ್ವರ್ ಅವರ ಕೆಲಸ ಮಾಡುತ್ತಾರೆ. ನಾನು ನನ್ನ ಕೆಲಸ ಮಾಡುತ್ತೇನೆ. ಪೊಲೀಸ್​ ಕೆಲಸ ನಮ್ಮ ರಕ್ಷಣೆ ಮಾಡಬೇಕಾಗಿರುವುದು. ಕೇರಳ, ಕರ್ನಾಟಕ ರಾಜ್ಯಗಳು ಕೆಲವೊಂದು ಘೋಷಣೆಗಳನ್ನು ಮಾಡಿದ್ದವು. ಆಗ ಪೊಲೀಸರು ಅವರ ಕೆಲಸ ಮಾಡಿದ್ದಾರೆ" ಎಂದು ತಿಳಿಸಿದರು.

ನಬಾರ್ಡ್ ಸಾಲದ ಮೊತ್ತದಲ್ಲಿ ಕಡಿತ ಕುರಿತು ಮಾತನಾಡಿ, "ಇವತ್ತು ಮುಖ್ಯಮಂತ್ರಿ ದೆಹಲಿಗೆ ನಮ್ಮ ನಂದಿನಿ ಹಾಲನ್ನು ಮಾರ್ಕೆಟ್ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ವಿತ್ತ ಸಚಿವರನ್ನು ಕೂಡಾ ಭೇಟಿ ಮಾಡಿ, ಕರ್ನಾಟಕಕ್ಕೆ ನಬಾರ್ಡ್ ಸಾಲದ ಬಗ್ಗೆ ಅನ್ಯಾಯ ಆಗುತ್ತಿದ್ದು, ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ನಾವು ಇನ್ನೂ ಮೂರು ವರ್ಷ ಅಧಿಕಾರದಲ್ಲಿ ಇರುತ್ತೇವೆ, ಗ್ಯಾರಂಟಿ ಇನ್ನೂ ಹತ್ತು ವರ್ಷ ಇರಲಿದೆ" ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಯಾರೂ ಆತಂಕಪಡಬೇಡಿ, ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ: ಡಿ.ಕೆ. ಶಿವಕುಮಾರ್

Last Updated : Nov 21, 2024, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.