ಧಾರವಾಡ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮತದಾನ ಮಾಡಿದರು.
ನವಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಕೈ ಅಭ್ಯರ್ಥಿ ಅಸೂಟಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. "ನಾನು ನನ್ನ ಹಕ್ಕು ಚಲಾವಣೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಬಾವುಟವನ್ನು ನೂರಕ್ಕೆ ನೂರರಷ್ಟು ಹಾರಿಸುತ್ತೇವೆ. ಬಿಜೆಪಿ ಪಕ್ಷ ಬದಲಾವಣೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ" ಎಂದು ಮನವಿ ಮಾಡಿದರು. ಒಂದು ವೋಟಲ್ಲಿ ಗೆದ್ದರೂ ಗೆಲುವೇ, ಸಾವಿರ ವೋಟಲ್ಲಿ ಗೆದ್ದರೂ ಗೆಲುವೇ. ಹೀಗಾಗಿ ನಮ್ಮ ಗೆಲುವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಕುಟುಂಬದೊಂದಿಗೆ ಬಂದು ಪ್ರಹ್ಲಾದ್ ಜೋಶಿ ಮತದಾನ: ಪತ್ನಿ ಜ್ಯೋತಿ, ಮಕ್ಕಳಾದ ಅರ್ಪಿತಾ, ಅನುಷಾ, ಸಹೋದರರೊಂದಿಗೆ ಭವಾನಿ ನಗರದ ಮತಗಟ್ಟೆಗೆ ಆಗಮಿಸಿ ಸಂಸದ ಪ್ರಹ್ಲಾದ್ ಜೋಶಿ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 111ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಪ್ರಹ್ಲಾದ್ ಜೋಶಿ ಹಕ್ಕು ಚಲಾಯಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎರಡನೇ ಹಂತದ ಲೋಕಾಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಆಗಮಿಸಿ ಬಸವರಾಜ ಹೊರಟ್ಟಿ ಮತದಾನ - Basavaraj Horatti