ETV Bharat / state

ಓದಿದ್ದು ಸ್ನಾತಕೋತ್ತರ ಪದವಿ: ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಸುವ ಕಾಯಕದಲ್ಲಿ!

ಸ್ನಾತಕೋತ್ತರ ಪದವಿ ಪಡೆದರೂ ಕುಲಕಸುಬು ಕುಂಬಾರಿಕೆಯನ್ನು ಬಿಡದೇ ಅದಕ್ಕೆ ಆಧುನಿಕ ಸ್ಪರ್ಶ ಕೊಟ್ಟಿರುವ ಶಿವಕುಮಾರ್ ಅವರ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ನೂರ್​ ಮಾಡಿರುವ ವಿಶೇಷ​ ವರದಿ ಇಲ್ಲಿದೆ.

Pottery brighten the life
ಬಾಳು ಬೆಳಗಿದ ಹಣತೆ (ETV Bharat)
author img

By ETV Bharat Karnataka Team

Published : 3 hours ago

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಕುಂಬಾರಿಕೆ ಕಸುಬು ಮಾಸಿಹೋಗುತ್ತಿದೆ. ಕೈ ಕೆಸರಾಗುತ್ತೆ ಎಂದು ಯುವಕರು ಅದರಿಂದ ದೂರ ಸರಿದು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿದ್ದಾರೆ. ಮನೆಯಲ್ಲಿ ಉಳಿದ ಹಿರಿಯರಲ್ಲಿ ಮಾತ್ರ ಕುಂಬಾರಿಕೆ ಕಸುಬು ಉಸಿರಾಗಿ ಉಳಿದುಕೊಂಡಿದೆ. ಅದರೆ ದಾವಣಗೆರೆಯ ವಿದ್ಯಾವಂತ, ಪದವೀಧರ ಶಿವಕುಮಾರ್​ ಅವರು ತಮ್ಮ ತಾತ, ಮುತ್ತಾತ ನಡೆಸಿಕೊಂಡು ಬಂದಿರುವ ಕುಲಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ನಗರದ ಭಾರತ್ ಕಾಲೊನಿಯ ಕುಂಬಾರ ಸೊಸೈಟಿಯ ಮುತ್ತಪ್ಪ ಹಾಗೂ ಓಂಕಾರಮ್ಮ ದಂಪತಿಯ ಪುತ್ರ ಶಿವಕುಮಾರ್​. ಇವರು ದೀಪಾವಳಿ ಹಬ್ಬಕ್ಕೆ ವಿಶೇಷ ಹಣತೆಗಳನ್ನು ತಯಾರಿಸಿದ್ದಾರೆ. ಕುಂಬಾರಿಕೆಗೆ ಆಧುನಿಕ ಸ್ಪರ್ಶ ಕೊಟ್ಟು ತಯಾರಿಸಿದ ವಿಶೇಷ ಹಣತೆಗಳಿಗೆ ರಾಜ್ಯದಲ್ಲೇ ಹೆಚ್ಚು ಬೇಡಿಕೆ ಇದೆ.

ಹಣತೆ ತಯಾರಿಕೆಯಿಂದ ಬದುಕು ಕಟ್ಟಿಕೊಂಡ ಸ್ನಾತಕೋತ್ತರ ಪದವಿಧರ ಶಿವಕುಮಾರ್ (ETV Bharat)

ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಬಿವಿಎ, ಎಂಪಿಎ ಪದವಿ ಪಡೆದಿದ್ದರೂ ಕೂಡ ಕುಟುಂಬ ತಲೆತಲಾಂತರದಿಂದ ಮಾಡಿಕೊಂಡು ಬಂದ ಕುಂಬಾರಿಕೆ ಕಸಬನ್ನು ಮುಂದುವರೆಸಿದ್ದಾರೆ. ಕಲಾವಿದ ಶಿವಕುಮಾರ್ ಅವರ ಪೋಷಕರು ಬೆಳಕಿನ ಹಬ್ಬ ದೀಪಾವಳಿಗೆ ಸಣ್ಣಪುಟ್ಟ ಮಣ್ಣಿನ ಹಣತೆ, ದೀವಿಗೆ ಹಾಗೂ ಇತರ ವೇಳೆ ಮಡಿಕೆ, ಕುಡಿಕೆ ತಯಾರಿಸಿ ಬದುಕು ಕಟ್ಟಿಕೊಂಡಿದ್ದರು. ಇದೀಗ ಅವರ ಪುತ್ರ ಶಿವಕುಮಾರ್ ಸ್ನಾತಕೋತ್ತರ ಪದವಿ ಪೂರೈಸಿ, ಅತ್ಯಾಕರ್ಷಕ ದೀಪ ಸೇರಿ ನಾನಾ ಕರಕುಶಲ ವಸ್ತು ತಯಾರಿಸಿ ಕುಲಕಸುಬಿಗೆ ಆಧುನಿಕ ಟಚ್ ನೀಡಿದ್ದಾರೆ. ಇವರು ತಯಾರಿಸಿದ ವಿಶೇಷ ದೀಪಾವಳಿ ದೀಪಗಳು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಮಾರಾಟ ಆಗುತ್ತಿವೆ.

Clay lamps made by Shivakumar
ಶಿವಕುಮಾರ್​ ಅವರ ಕೈಯಲ್ಲರಳಿದ ಹಣತೆ (ETV Bharat)

25 ರೀತಿಯ ಹಣತೆಗಳಿಗೆ ಆಧುನಿಕ ಟಚ್: ಪ್ರತಿ ದೀಪಾವಳಿ ಹಬ್ಬದ ವೇಳೆ ಕಲಾವಿದ ಶಿವಕುಮಾರ್ ಅವರು ವಿಶೇಷ ಹಣತೆಗಳನ್ನು ತಯಾರಿಸಿ ಆಧುನಿಕ ಟಚ್ ನೀಡಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಶಿವಕುಮಾರ್ ಅವರ ಕೈಚಳಕದಲ್ಲಿ ಮೂಡಿ ಬಂದ 25 ರೀತಿಯ ಹಣತೆಗಳಿಗೆ ರಾಜ್ಯಾದ್ಯಂತ ಬೇಡಿಕೆ ಇದೆ. ಆನೆ ದೀಪ, ಲಕ್ಷ್ಮೀ ದೀಪ, ಗಣೇಶ ದೀಪ, ಹುರುಳಿ ದೀಪ, ಆಮೆ ದೀಪ, ನವಿಲು ದೀಪ, ಹಂಸ ದೀಪ, ಲ್ಯಾಪ್, ಹುರುಳಿಯಲ್ಲಿ ಐದು, ಎಂಟು ದೀಪ, ಪೆನ್ ಸ್ಟ್ಯಾಂಡ್ ದೀಪ, ಬಾಸಿಂಗ ದೀಪ ಹೀಗೆ ಸಾಕಷ್ಟು ದೀಪಗಳನ್ನು ತಯಾರಿಸಿತ್ತಾರೆ‌.‌ ಇದಕ್ಕೆ ಜನರ ಪ್ರತಿಕ್ರಿಯೆ ಚೆನ್ನಾಗಿದ್ದು, ಬೇಡಿಕೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶಿವಕುಮಾರ್​.

ಮಾಡಿದ್ದು ಸ್ನಾತಕೋತ್ತರ ಪದವಿ, ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಕೆಯಲ್ಲಿ: ಶಿವಕುಮಾರ್ ಅವರು ಬಾಲ್ಯದಿಂದಲೇ ಕುಂಬಾರಿಕೆ ನೋಡಿಕೊಂಡು ಬೆಳೆದವರು. ಜೇಡಿ ಮಣ್ಣಿನಲ್ಲಿ ಮಡಿಕೆ, ಕುಡಿಕೆ, ಸಣ್ಣ ದೀಪ ತಯಾರಿಸುತ್ತಿದ್ದ ಇವರು, ಕಾಲ ಬದಲಾದಂತೆ ಬಿಡದಿಯ ಜೋಗರಟ್ಟಿಯ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್​ಸ್ಟಿಟ್ಯೂಟ್‌ನಲ್ಲಿ ಡಿಸೈನಿಂಗ್ ಕುರಿತು ತರಬೇತಿ ಪಡೆದರು. ಅಲ್ಲದೆ ಆಯಿಷಾ ಎಂಬ ಮಹಿಳೆಯ ಸಹಾಯದಿಂದ ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಬಿವಿಎ, ಎಂಪಿಎ ಪದವಿ ಪಡೆದು ಹಳೇ ಕಾಲದ ಕಸುಬಿಗೆ ಆಧುನಿಕ ಟಚ್ ನೀಡಿ, ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಶಿವಕುಮಾರ್ ಮಾತನಾಡಿ, "ವಂಶದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಅಲ್ಲದೆ ಹಣತೆ ಮಾಡಲು ತರಬೇತಿ ಕೊಡುತ್ತೇನೆ. ಮಂಡ್ಯ, ಬೆಂಗಳೂರು, ಹುಬ್ಬಳ್ಳಿ, ಹೀಗೆ ಸಾಕಷ್ಟು ಕಡೆ ತರಬೇತಿ ನೀಡುತ್ತಿದ್ದೇನೆ. ಪ್ರತಿ ದೀಪಾವಳಿಗೆ 50 ರೀತಿಯ ದೀಪಗಳನ್ನು ತಯಾರಿಸುತ್ತಿದ್ದೆವು. ಕಾಲಬದಲಾದಂತೆ 25 ತರಹದ ದೀಪಗಳಿಗೆ ಹೊಸತನವನ್ನು ಕೊಟ್ಟಿದ್ದೇವೆ. ಸ್ನಾತಕೋತ್ತರ ಪದವಿ ಮಾಡಿದ್ರು ಕುಂಬಾರಿಕೆ ಕಸುಬು ಬುಟ್ಟಿಲ್ಲ" ಎಂದರು.

'ಕ್ಲೇ ಮಾಡ್ಲಿಂಗ್ ಟೀಚರ್' ಖ್ಯಾತಿ ಪಡೆದಿರುವ ಶಿವಕುಮಾರ್ ಸಹೋದರಿ: ಶಿವಕುಮಾರ್ ಅವರ ಸಹೋದರಿ ಭಾರತಿ ಸುಕನ್ಯಾ ಅವರು ದೀಪ ತಯಾರಿಸಲು ಸಹಾಯ ಮಾಡುತ್ತಿದ್ದಾರೆ. ಮದುವೆ ಬಳಿಕ ಕಾರ್ಕಳದಲ್ಲಿರುವ ಭಾರತಿ ಸುಕನ್ಯಾ ಅವರು ದೀಪಾವಳಿ ಸಮಯದಲ್ಲಿ ತವರು ಮನೆಗೆ ಆಗಮಿಸಿ ಆಧುನಿಕ ದೀಪ ತಯಾರಿಸುವಲ್ಲಿ ತಮ್ಮನೊಂದಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಭಾರತಿ ಅವರು ಕೂಡ ಕಾರ್ಕಳದಲ್ಲಿ 'ಕ್ಲೇ ಮಾಡ್ಲಿಂಗ್ ಟೀಚರ್' ಎಂದೇ ಖ್ಯಾತಿ ಗಳಿಸಿದ್ದಾರೆ. ಶಾಲೆಗಳಿಗೆ ತೆರಳಿ ಮಕ್ಕಳಿಗೆ ಈ ಕುಲಕಸುಬು ಬಗ್ಗೆ ಪಾಠ ಮಾಡುತ್ತಿದ್ದಾರೆ.

ಭಾರತಿ ಸುಕನ್ಯಾ ಮಾತನಾಡಿ, "ಇದೇ ನಮ್ಮ ಕುಲಕಸುಬು, ಪ್ರತಿ ದೀಪಾವಳಿಗೆ ದಾವಣಗೆರೆಗೆ ಆಗಮಿಸಿ ತಮ್ಮನಿಗೆ ದೀಪ ಮಾಡಲು ಸಹಾಯ ಮಾಡುತ್ತಿದ್ದೇನೆ. ಧಾರವಾಡ, ಕೋಲಾರದ ಶಾಲೆಗಳಲ್ಲಿ ಕುಲಕಸುಬು ಬಗ್ಗೆ ಪಾಠ ಮಾಡುತ್ತೇವೆ. ಜನರಿಗೆ ಬೇಕಾದ ರೀತಿಯ ದೀಪಗಳನ್ನು ತಯಾರಿಸುತ್ತೇವೆ. ಆನ್​ಲೈನ್​ನಲ್ಲೂ ಬೇಡಿಕೆ ಇದೆ. ಅದರೆ ಕಳುಹಿಸಲ್ಲ. ಮಣ್ಣಿನ ಹಣತೆ ಆಗಿರುವುದರಿಂದ ಒಡೆಯುವ ಸಾಧ್ಯತೆ ಇದೆ" ಎಂದರು.

ಜೆಡಿ ಮಣ್ಣಿನಿಂದ ತಯಾರಾಗುತ್ತವೆ ಆಧುನಿಕ ದೀಪಗಳು: ಆಧುನಿಕ ಟಚ್ ನೀಡಿದ ದೀಪಗಳನ್ನು ಜೇಡಿ ಮಣ್ಣಿನಿಂದ ತಯಾರಿಸಲಾಗುತ್ತದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಮತ್ತು ತುಂಬಗೆರೆ ಕೆರೆಗಳಿಂದ ಮಣ್ಣನ್ನು ತರಿಸಲಾಗುತ್ತದೆ. ಮಣ್ಣನ್ನು ಸೋಸಿ ಅದರೊಳಗಿನ ಕಸ, ಕಡ್ಡಿ ತೆಗೆದು ಒಂದು ತಿಂಗಳು ನೆನಸಿಡಲಾಗುತ್ತದೆ. ಆಗ ಈ ಮಣ್ಣು ಟೆರಾಕೋಟ (ಸುಡುವೆ ಮಣ್ಣು) ಆಗಿ ರೂಪಾಂತರ ಪಡೆಯುತ್ತದೆ. ಬಳಿಕ ಈ ಮಣ್ಣಿನಲ್ಲಿ ಹಣತೆ, ದೀವಿಗೆ, ಮಡಿಕೆ, ಕುಡಿಕೆ ತಯಾರಿಸಿ, ಒಣಗಿಸಿ ನಂತರ ಅವುಗಳನ್ನು ಸುಟ್ಟು, ಬಣ್ಣ ಹಚ್ಚಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ" ಎನ್ನುತ್ತಾರೆ ಭಾರತಿ ಸುಕನ್ಯಾ.

ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಮ್ಯಾಜಿಕ್​ ದೀಪ: ಎಣ್ಣೆ ಹಾಕದೇ ದಿನವಿಡಿ ಉರಿಯುತ್ತೇ ಈ ಹಣತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.