ETV Bharat / state

ಕಾಂಗ್ರೆಸ್​​ನಿಂದಲೂ ಆಹ್ವಾನ ಬಂದಿದೆ, ಏ.3ರಂದು ರಾಜಕೀಯ ನಿರ್ಧಾರ ಪ್ರಕಟ: ಸುಮಲತಾ ಅಂಬರೀಷ್ - Political decision

ಏಪ್ರಿಲ್ 3 ರಂದು ಮಂಡ್ಯದಲ್ಲಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

POLITICAL DECISION ANNOUNCED  LOK SABHA ELECTION  BENGALURU
ಸುಮಲತಾ ಅಂಬರೀಷ್
author img

By ETV Bharat Karnataka Team

Published : Mar 30, 2024, 4:38 PM IST

Updated : Mar 30, 2024, 6:55 PM IST

ಸುಮಲತಾ ಅಂಬರೀಷ್

ಬೆಂಗಳೂರು: ಬಿಜೆಪಿಯಂತೆ ಕಾಂಗ್ರೆಸ್​​ನಿಂದಲೂ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿರುವುದು ಸತ್ಯ. ಆದರೆ ನನ್ನ ನಿರ್ಧಾರ ಆ ಪಕ್ಷಕ್ಕೋ, ಈ ಪಕ್ಷಕ್ಕೋ ಅಂತ ನೋಡಿಕೊಂಡು ಮಾಡಲ್ಲ. ಮಂಡ್ಯದ ಜನತೆ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇನೆ. ಏಪ್ರಿಲ್ 3ರ ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್​​ ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳು-ಮತದಾರರ ಹಿತ ಮುಖ್ಯ: ಅಭಿಮಾನಿಗಳ ಜೊತೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಂದಲೂ ಜನಾಭಿಪ್ರಾಯ ತೆಗೆದುಕೊಂಡೇ ನಾನು ನಿರ್ಧಾರ ಮಾಡುತ್ತೇನೆ. ಇವತ್ತು ಜನರು ಅಭಿಪ್ರಾಯ ಹೇಳಿದ್ದಾರೆ. ನಾನೂ ಆಪ್ತರ ಜೊತೆ ಚರ್ಚೆ ಮಾಡಬೇಕು. ಮಂಡ್ಯದಲ್ಲೇ ತೀರ್ಮಾನ ಪ್ರಕಟ ಮಾಡುತ್ತೇನೆ. ಇದು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ನನಗೆ ನನ್ನ ಭವಿಷ್ಯ ಮುಖ್ಯವಲ್ಲ, ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಗೂ ಮತದಾರರ ಹಿತ ಮುಖ್ಯ ಎಂದರು.

ಕಳೆದ ಬಾರಿ ಇದ್ದ ಸ್ಥಿತಿಯೇ ಈಗಲೂ ಬಂದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಕಳೆದ ಬಾರಿ ಸೀಟು ಕೊಡಲ್ಲ ಅಂತಾ ಕಾಂಗ್ರೆಸ್ ಹೇಳಿತ್ತು. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣಕ್ಕೆ ಸೀಟು ನೀಡಲ್ಲ ಎಂದು ಬಿಜೆಪಿ ತಿಳಿಸಿದೆ. ಮಂಡ್ಯ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ, ಇಲ್ಲ ಎನ್ನಲ್ಲ. ಆದರೆ, ಈಗ ಅದು ಜೆಡಿಎಸ್​​ಗೆ ಸಿಕ್ಕಿದೆ. ಹಾಗಾ,ಗಿ ಬಿಜೆಪಿಯಿಂದ ಅಲ್ಲಿ ನನಗೆ ಅವಕಾಶ ಇಲ್ಲವಾಗಿದೆ ಎಂದು ತಿಳಿಸಿದರು.

ಮಂಡ್ಯದಲ್ಲೇ ಅಂತಿಮ ನಿರ್ಧಾರ: ನಿನ್ನೆ ವಿಜಯೇಂದ್ರ ಬಂದಿದ್ದರು, ಉನ್ನತ ಮಟ್ಟದ ಸ್ಥಾನಮಾನ ಕೊಡುವ ಲೆಕ್ಕಾಚಾರ ಹೈಕಮಾಂಡ್​​ನಿಂದ ಇದೆ, ನಾವು ಎಲ್ಲಾ ನೋಡಿಕೊಳ್ಳಲಿದ್ದೇವೆ ಎನ್ನುವ ಭರವಸೆಯೊಂದಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದರು. ನಾನು ನಮ್ಮ ಕಾರ್ಯಕರ್ತರ ಭವಷ್ಯವೇನು ಎಂದೆ. ಅದಕ್ಕೆ ಅವರು, ನೀವು ಹೇಳಿದಂತೆ ಕಾರ್ಯಕರ್ತರಿಗೂ ಅವಕಾಶ ಮಾಡಲು ಸಿದ್ಧ ಎಂದಿದ್ದಾರೆ. ನಂಬಿದವರ ಕೈಬಿಡಬಾರದು ಎನ್ನುವುದಕ್ಕಾಗಿ ಸಭೆ ಕರೆದು ಮಂಡ್ಯದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ನನಗೆ ಎಲ್ಲ ಪಕ್ಷಗಳಿಂದಲೂ ಆಹ್ವಾನ ಬರುತ್ತಿದೆ, ಫೋನ್ ಕಾಲ್ ಬರುತ್ತಿದೆ ಎಂದು ಕಾಂಗ್ರೆಸ್​​ನಿಂದ ಪಕ್ಷ ಸೇರ್ಪಡೆ ಆಹ್ವಾನ ಇದೆ ಅಂತ ಒಪ್ಪಿಕೊಂಡ ಸುಮಲತಾ, ನಾರಾಯಣಗೌಡರಿಗೆ ಎಲ್ಲವೂ ಗೊತ್ತಿದೆ. ಎಲ್ಲ ಪ್ರಶ್ನೆಗಳಿಗೂ 3ನೇ ತಾರೀಕಿನಂದು ಉತ್ತರ ಸಿಗುತ್ತದೆ. ಏಪ್ರಿಲ್ 3ರಂದು ಯಾವಾಗ, ಎಲ್ಲಿ ಸಭೆ ಅಂತ ತಿಳಿಸುತ್ತೇವೆ. ನನ್ನ ನಿರ್ಧಾರ ಯಾವ ಪಕ್ಷಕ್ಕೆ ಅನುಕೂಲ ಆಗಲಿದೆ ಎನ್ನುವುದಕ್ಕಿಂತ, ಅಂಬಿ ಅಭಿಮಾನಿಗಳ ಭವಿಷ್ಯ ದೃಷ್ಟಿಯಲ್ಲಿರಿಸಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ಮಂಡ್ಯದಲ್ಲಿ ಬಿಜೆಪಿ ಬೆಳೆಸಬೇಕು ಎಂದರೆ ಅವರಿಗೇ ಸೀಟ್ ಇಟ್ಟುಕೊಂಡರೆ ಅನುಕೂಲವಾಗಲಿದೆ ಎಂದು ಹೇಳಿದ್ದೆವು. ಸೀಟು ಉಳಿಸಿಕೊಳ್ಳಿ ಎಂದೇ ಕೇಳಿದ್ದೆವು. ಆದರೆ, ಜೆಡಿಎಸ್​​ಗೆ ಹಂಚಿಕೆಯಾಗಿದೆ. ಬಿಜೆಪಿ ಹೈಕಮಾಂಡ್ ಮೊದಲಿಂದಲೂ ಗೌರವದಿಂದ ನಡೆದುಕೊಂಡಿದೆ ಎಂದು ಬಿಜೆಪಿ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದರು.

ನುಡಿದಂತೆ ನಡೆದಿದ್ದೇನೆ: ನನಗೆ ರಾಜಕೀಯ ಅನುಭವ ಇಲ್ಲದ ಸಮಯದಲ್ಲಿ ಜನರು ಬಂದು ನನಗೆ ಆಶೀರ್ವಾದ ಮಾಡಿದರು. ಹಿಂದಿನ ಚುನಾವಣೆಯಲ್ಲಿ ಯಾರೂ ದೊಡ್ಡ ದೊಡ್ಡ ರಾಜಕಾರಣಿಗಳು ಇರಲಿಲ್ಲ, ಅಂಬಿ ಜೊತೆಗಿದ್ದವರೇ ನನ್ನ ಜೊತೆ ನಿಂತರು, ಅಂಬಿ ಮೇಲಿನ ಪ್ರೀತಿಯನ್ನು ನನಗೆ ಕೊಟ್ಟರು. ನನಗೆ ನೋವಾಗಿರಬಹುದು, ಕಷ್ಟವಾಗಿರಬಹುದು, ಕಣ್ಣೀರು ಹಾಕಿದ ದಿನಗಳೂ ಇವೆ. ನನ್ನ ಸ್ವಾರ್ಥ ನೋಡಿ ನಿರ್ಧಾರ ಮಾಡಬಹುದಿತ್ತು. ನನ್ನ ಭವಿಷ್ಯ, ಮಗನ ಭವಿಷ್ಯ ನೋಡುವುದೇ ಮುಖ್ಯ ಆಗಿದ್ದರೆ, ನನ್ನ ರಾಜಕೀಯ ನಡೆ ಬೇರೆಯೇ ಆಗಿರುತ್ತಿತ್ತು. ಆದರೆ, ಮೊದಲ ದಿನದ ಬದ್ದತೆಯೇ ಇವತ್ತೂ ಇದೆ. ನಾನು ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ಜನರಿಗೂ ಕೊಟ್ಟ ವಾಗ್ದಾನದಲ್ಲಿ ತಪ್ಪು ಹೆಜ್ಜೆ ಇಟ್ಟಿಲ್ಲ ಎಂದರು.

ನನಗೆ ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮಂಡ್ಯದ ಘನತೆಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಬೇರೆ ಕಡೆ ಅವಕಾಶ ನೀಡುವ ಭರವಸೆ ನೀಡಿದರೆ ಯಾರೂ ಬೇಡ ಎನ್ನಲ್ಲ. ಆದರೆ, ನಾನು ಗೆದ್ದರೂ ಸೋತರೂ ಮಂಡ್ಯ ಎಂದಿದ್ದೇನೆ. ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ಎಂದರೆ ಅದೊಂದು ಭಾವನೆ, ಪ್ರೀತಿ ಇದ್ದಂತೆ. ಅಲ್ಲಿನ ಜನರ ಪ್ರೀತಿ ಮುಖ್ಯ ಹಾಗಾಗಿ ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರ ಬೇಡ ಎಂದಿದ್ದೆ. ಮುಂದೆಯೂ ಮಂಡ್ಯ ಬಿಟ್ಟು ಬೇರೆ ಕಡೆ ರಾಜಕಾರಣ ಮಾಡಲ್ಲ ಎಂದು ಪ್ರಕಟಿಸಿದರು.

ನೋಯಿಸಿ ನಿರ್ಧಾರ ಕೈಗೊಳ್ಳಲ್ಲ: ಕಳೆದ ಬಾರಿಗಿಂತ ಹೆಚ್ಚಿನ ಸವಾಲು ಈ ಬಾರಿ ಇದೆ. ಕ್ಷೇತ್ರದ ಜನರ ಮನಸ್ಸು ನೋಯಿಸಿ ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಅಧಿಕಾರ ಬರುತ್ತೆ ಹೋಗುತ್ತೆ, ನಮ್ಮ ರಾಜಕೀಯ ನಿರ್ಧಾರ ಮಂಡ್ಯದ ಜೊತೆ ಇರಲಿದೆ. ನಾನು ಇದರ ಬಗ್ಗೆ ಚರ್ಚೆ ಮಾಡಬೇಕು. ನಿಮ್ಮನ್ನು ನೋಯಿಸುವ ನಿರ್ಧಾರ ತೆಗೆದುಕೊಳ್ಳಲ್ಲ. ನಮ್ಮನ್ನು ನಂಬಿ ಲಕ್ಷಾಂತರ ಜನ ಇದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡಿ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಅಭಿಷೇಕ್ ಅಂಬರೀಷ್, ನಮ್ಮ ಬಳಿ ಹೆಚ್ಚಿನ ಸಮಯ ಇಲ್ಲ. ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಂಬಿ ಮಗನಾಗಿ ಹೇಳುತ್ತೇನೆ ಮಂಡ್ಯ ಬಿಟ್ಟು ನಾವು ಎಲ್ಲೂ ಹೋಗಲ್ಲ. ಎಲ್ಲರೂ ನನ್ನ ಮಂಡ್ಯದ ಗಂಡು ಅಂಬರೀಷ್ ಮಗ ಎಂದೇ ಗುರುತಿಸುತ್ತಾರೆ, ಎಲ್ಲರ ಅಭಿಪ್ರಾಯ ಪಡೆದೇ ನಮ್ಮ ತಾಯಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಚುನಾವಣೆಗೆ ನಿಲ್ಲಿ ಸುಮಲತಾ ಅಕ್ಕಾ: ಸಭೆಯಲ್ಲೂ ಅಭಿಮಾನಿಗಳಿಂದ ನೀವು ಚುನಾವಣೆಗೆ ನಿಲ್ಲಿ ಅಕ್ಕಾ ಎನ್ನುವ ಆಗ್ರಹ ಕೇಳಿ ಬಂತು. ನಾವು ನಿಮ್ಮ ಮನೆಯಲ್ಲೇ ಇರುತ್ತೇನೆ, ನೀವು ಚುನಾವಣೆಗೆ ನಿಲ್ಲಿ, ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ನಮ್ಮನ್ನು ಬೇರೆಯವರ ಮನೆಗೆ ಕಳಿಸಬೇಡಿ ಎಂದು ಮನವಿ ಮಾಡಿದರು. ನಾವು ನಿಮಗೆ ಮಾತ್ರ ಮತ ಹಾಕುತ್ತೇವೆ. ಬೇರೆ ಯಾವ ಪಕ್ಷಕ್ಕೂ ಮತ ಹಾಕಲ್ಲ. ಸುಮಲತಾ ಅಂಬರೀಷ್​ಗೆ ಮತ ಹಾಕುತ್ತೇವೆ, ಅವರು ಚುನಾವಣೆಗೆ ನಿಲ್ಲದೇ ಇದ್ದರೆ ನೋಟಾಗೆ ಮಾತ್ರ ನಮ್ಮ ಮತ ಎಂದರು.

ಓದಿ: ಬೆಂಬಲಿಗರ ಜೊತೆ ಇಂದು ಮಹತ್ವದ ಸಭೆ, ಮಂಡ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ - MANDYA LOK SABHA CONSTITUENCY

Last Updated : Mar 30, 2024, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.