ತುಮಕೂರು: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ರೌಡಿಶೀಟರ್ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ರೌಡಿ ಶೀಟರ್ ಮನು ಎಂಬಾತನ ಕಾಲಿಗೆ ಗುಂಡೇಟು ತಗುಲಿದೆ. ನಗರದ ದಿಬ್ಬೂರು ಬಳಿ ಘಟನೆ ನಡೆದಿದ್ದು, ತುಮಕೂರು ನಗರ ಪೊಲೀಸ್ ಠಾಣೆ ಸಿಪಿಐ ದಿನೇಶ್ ರಿವಲ್ವಾರ್ನಿಂದ ರೌಡಿಶೀಟರ್ ಮನು ಕಾಲಿಗೆ ಗುಂಡು ಹೊಡೆದಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರಿಗೆ ಶರಣಾಗುವಂತೆ ಎರಡು ಬಾರಿ ಇನ್ಸ್ಪೆಕ್ಟರ್ ದಿನೇಶ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರಿಗೆ ಶರಣಾಗದೇ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮನು ಯತ್ನಿಸಿದನು. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್ ಮನು ಕಾಲಿಗೆ ಗುಂಡು ಹೊಡೆದು ಬಂಧಿಸಲಾಯಿತು. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ರೌಡಿಶೀಟರ್ ಮನುಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಪುನೀತ್ ಕೆರೆಹಳ್ಳಿ ಬಂಧನ - Puneet Kerehalli Arrest