ETV Bharat / state

ಮಕ್ಕಳ ಮಾರಾಟ ಪ್ರಕರಣದ ಕಿಂಗ್ ಪಿನ್ ತೋಟದ ಮನೆಗೆ ಪೊಲೀಸ್ ಭದ್ರತೆ - Child Trafficking Case - CHILD TRAFFICKING CASE

ಮಕ್ಕಳ ಮಾರಾಟ ಪ್ರಕರಣದ ಕಿಂಗ್ ಪಿನ್​ಗೆ ಸೇರಿದ ಎನ್ನಲಾದ ತೋಟದ ಮನೆಗೆ ಪೊಲೀಸರು ನಿಗಾ ವಹಿಸಿದ್ದಾರೆ.

POLICE SECURITY  FARM HOUSE  KING PIN  BELAGAVI
ತೋಟದ ಮನೆಗೆ ಪೊಲೀಸ್ ಬಂದೋಬಸ್ತ್​ (ಕೃಪೆ: ETV Bharat)
author img

By ETV Bharat Karnataka Team

Published : Jun 14, 2024, 12:47 PM IST

ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಮಕ್ಕಳ ಮಾರಾಟ ಪ್ರಕರಣದ ಕಿಂಗ್ ಪಿನ್ ಅಬ್ದುಲ್ ಗಫಾರ್ ಲಾಡಖಾನ್ ತೋಟದ ಮನೆಗೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಆರೋಪಿಗೆ ಸೇರಿದ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿರುವ ಫಾರ್ಮ್​ಹೌಸ್​ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅನಧಿಕೃತ ಕ್ಲಿನಿಕ್ ಹೊಂದಿರುವ ಹಾಗು ಮಕ್ಕಳ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಅಬ್ದುಲ್ ಮಾಲೀಕತ್ವದ ತೋಟದ ಮನೆ ಇದಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದರು. ಮಕ್ಕಳ ಮಾರಾಟ ಮತ್ತು ಭ್ರೂಣ ಹತ್ಯೆಯಲ್ಲೂ ಆತನ ಪಾತ್ರ ಇರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಲಾಡಖಾನ್​ಗೆ ಸೇರಿದ ತೋಟದ ಮನೆಯಲ್ಲಿ ಭ್ರೂಣ ಹತ್ಯೆ, ಅಕ್ರಮ ಚಟುವಟಿಕೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆ ಸುತ್ತಮುತ್ತ ಸಿರಿಂಜ್ ಕವರ್, ವೈದ್ಯಕೀಯ ಪರಿಕರಗಳು ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಸಾಕ್ಷಿ ನಾಶ ಆಗಬಾರದೆಂದು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ತೋಟದ ಮನೆಗೆ ಭದ್ರತೆ ಒದಗಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಏನಿದು ಪ್ರಕರಣ: ಜೂನ್​ 10ರಂದು ಖತರ್ನಾಕ್ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಆರ್‌ಎಂಪಿ ವೈದ್ಯ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಮಾಳಮಾರುತಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದರು.

ಪ್ರಕರಣ ಸಂಬಂಧ ಕಿಂಗ್ ಪಿನ್​ಗಳಾದ ಕಿತ್ತೂರಿ‌ನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಮಕ್ಕಳ ಮಾರಾಟದಲ್ಲಿ ಫುಲ್ ಆಕ್ಟಿವ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದರು.

ಮದುವೆಗೂ ಮುನ್ನ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಬೇಕು ಎನ್ನುವವರೇ ಇವರ ಟಾರ್ಗೆಟ್ ಆಗಿದ್ದರು. 7-8 ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ, ಮಗು ರಕ್ಷಿಸಿ ತಾವೇ ಸಾಕುವುದಾಗಿ ನಂಬಿಸುವ ಮೂಲಕ ಅವರನ್ನು ಕಳಿಸುತ್ತಿದ್ದರು. ಆರ್‌ಎಂಪಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎರಡ್ಮೂರು ತಿಂಗಳು ಆ ಶಿಶುಗಳನ್ನು ಆರೈಕೆ ಮಾಡುತ್ತಿದ್ದರು. ಹೀಗೆ ಆರೈಕೆ ಮಾಡಿದ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಮಕ್ಕಳಿಲ್ಲದವರಿಗೆ ರೂ. 60 ಸಾವಿರದಿಂದ ಒಂದೂವರೆ ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿತ್ತು. ಈ ಬಗ್ಗೆ ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಬೆಳಗಾವಿ: ಮಕ್ಕಳ ಮಾರಾಟ ಜಾಲದ ಐವರ ಬಂಧನ; ಪ್ಲಾನ್​ ಮಾಡಿ ಖೆಡ್ಡಾಕ್ಕೆ ಬೀಳಿಸಿದ ಅಧಿಕಾರಿಗಳು - Child Trafficking Network

ETV Bharat Logo

Copyright © 2024 Ushodaya Enterprises Pvt. Ltd., All Rights Reserved.