ETV Bharat / state

ಮೈಸೂರು: ಪೊಲೀಸರ ಮಿಂಚಿನ ಕಾರ್ಯಾಚರಣೆ, ಮಕ್ಕಳ ಕಳ್ಳರ ಬಂಧನ - Child kidnap case - CHILD KIDNAP CASE

ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಮಗುವನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳ ಕಳ್ಳರ ಬಂಧನ
ಮಕ್ಕಳ ಕಳ್ಳರ ಬಂಧನ
author img

By ETV Bharat Karnataka Team

Published : Apr 19, 2024, 6:46 AM IST

ಮೈಸೂರು: ಮಿಂಚಿನ ಕಾರ್ಯಾಚರಣೆ ನಡೆಸಿದ ವಿಜಯನಗರ ಠಾಣೆ ಪೊಲೀಸರು, ಪ್ರಕರಣ ದಾಖಲಾದ ಕೇವಲ 4 ಗಂಟೆಯಲ್ಲಿ ಮಗುವನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೂಟಗಳ್ಳಿಯ ದೊಡ್ಡ ಅರಳೀಮರದ ಮಂಜುನಾಥ, ಇಲವಾಲ ಹೋಬಳಿಯ ನಾಗವಾಲದ ಇಂದ್ರಕುಮಾರ್, ಪಾಂಡವಪುರ ತಾಲೂಕಿನ ಡಾಬರಹಳ್ಳಿಯ ಕುಮಾರ್, ಇಲವಾಲ ಹೋಬಳಿಯ ನಾಗವಾಲದ ಸುಪ್ರಿಯಾ ಹಾಗೂ ವಿಜಯಲಕ್ಷ್ಮೀ ಬಂಧಿತರು.

ಮೈಸೂರಿನ ಹಿನಕಲ್ ವರ್ತುಲ ರಸ್ತೆಯ ಜೋಪಡಿಯಲ್ಲಿ ಬುಧವಾರ ಬೆಳಗ್ಗೆ 3ಕ್ಕೆ ಬಿಹಾರದ ಅಲೆಮಾರಿ ಸಮುದಾಯದ ಎಲ್ಲರೂ ಮಲಗಿರುವ ಸಂದರ್ಭ 40 ದಿನದ ಗಂಡು ಮಗುವನ್ನು ಆರೋಪಿಗಳು ಅಪಹರಿಸಿದ್ದರು. ಈ ಕುರಿತು ಮಗುವಿನ ತಾಯಿ ರಾಮಡಲ್ಲಿ ದೇವಿ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಮುತ್ತುರಾಜ್, ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಉಸ್ತುವಾರಿಯಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಆರ್. ಪ್ರದೀಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ವಿಶ್ವನಾಥ, ಕೆ.ನಾರಾಯಣ, ವನಜಾಕ್ಷಿ, ಸಿಬ್ಬಂದಿ ಶಿವಕುಮಾರ್, ಲಿಖಿತ್, ಮುರುಳಿಗೌಡ, ಸಂಜಯ್, ಅಣ್ಣಪ್ಪ ದೇವಾಡಿಗ, ನಂದೀಶ್, ಶ್ರೀನಿವಾಸಮೂರ್ತಿ, ಪ್ರಭಾಕರ್, ಸಿಡಿಆರ್ ಕುಮಾರ್ ಇದ್ದರು.

ಇದನ್ನೂ ಓದಿ: ಶಿವಮೊಗ್ಗ: ಆಟವಾಡುತ್ತಿದ್ದ 3 ವರ್ಷದ ಬಾಲಕಿ ತೆರೆದ ಬಾವಿಗೆ ಬಿದ್ದು ಸಾವು - Girl Died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.