ETV Bharat / state

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ಮತ್ತೆ ಎಸ್‌ಐಟಿ ವಶಕ್ಕೆ - Prajwal Revanna - PRAJWAL REVANNA

ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 24ರವರೆಗೆ ಎಸ್‌ಐಟಿ ವಶಕ್ಕೆ ಒಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

SIT CUSTODY  PRAJWAL REVANNA  BENGALURU  RAPE CASE
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 19, 2024, 7:24 PM IST

ಬೆಂಗಳೂರು: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮೂರನೇ ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪಿಯನ್ನು ಜೂನ್ 24ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ. ಈ ಪ್ರಕರಣದ ತನಿಖೆ ಕೋರಿ ಎಸ್‌ಐಟಿ ಸಲ್ಲಿಸಿದ್ದ ಮನವಿ ಪರಿಗಣಿಸಿದ ನ್ಯಾಯಾಲಯ ಸ್ಥಳ ಮಹಜರು, ಹೇಳಿಕೆ ದಾಖಲು, ಧ್ವನಿ ಮಾದರಿ, ವೈದ್ಯಕೀಯ ಪರೀಕ್ಷೆಯ ಮಾಹಿತಿ ಪಡೆದುಕೊಳ್ಳಲು ಪೊಲೀಸರಿಗೆ ಅವಕಾಶ ನೀಡಿದೆ.

ವಿಚಾರಣೆ ವೇಳೆ ಪ್ರಕರಣದ ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಅತ್ಯಾಚಾರ ಪ್ರಕರಣಗಳಲ್ಲಿ ಬೇರೆ ಪ್ರಕರಣದ ಮಹಜರು ಮತ್ತು ಸ್ಯಾಂಪಲ್ ಬಳಕೆ ಅಸಾಧ್ಯ. ಸಂತ್ರಸ್ತೆಯರು ಬೇರೆ ಬೇರೆ. ಎಂಟು ವಿಡಿಯೋ ಕ್ಲಿಪ್‌ಗಳಿವೆ. ದೇಹದ ಬೇರೆ ಬೇರೆ ಭಾಗಗಳು ಕಂಡಿವೆ. ಅದಕ್ಕಾಗಿ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಧ್ವನಿ ಮಾದರಿ ನೀಡುವಾಗ ಬದಲಾಯಿಸಿ ಮಾತನಾಡುವ ಸಾಧ್ಯತೆ ಇದೆ. ಹೀಗಾಗಿ ಧ್ವನಿ ಮಾದರಿ ಸಂಗ್ರಹಿಸಬೇಕಿದೆ ಎಂದು ಪೀಠಕ್ಕೆ ವಿವರಿಸಿದರು.

ಆರೋಪಿಗೆ ಹಿಂಸೆ ನೀಡಲಾಗುತ್ತಿದೆ ಎನ್ನುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಿಂಸೆ ಹೇಗೆ ಸಾಧ್ಯ? ಎಂಬ ಅಂಶವನ್ನು ಸಾಬೀತುಪಡಿಸಬೇಕು. ಈ ವಿಚಾರಣೆ ಸಂಬಂಧ ನಿನ್ನೆ ಮಜುಗರವಾಗುತ್ತಿದೆ ಎಂಬುದಾಗಿ ಹೇಳಿದ್ದರು. ಆದರೂ ತನಿಖಾ ಪ್ರಕ್ರಿಯೆಗಳನ್ನು ನಡೆಸಬೇಕಾದ ಅಗತ್ಯವಿದೆ. ಪಂಚನಾಮೆ ಮಾಡಬೇಕಿದೆ. ಸಂಸದರ ಸರ್ಕಾರಿ ಮನೆಯಲ್ಲಿ ನಡೆದ ಕೃತ್ಯದ ಕುರಿತು ವಿಚಾರಣೆ ಮಾಡಬೇಕಿ ಎಂದು ವಾದ ಮಂಡಿಸಿದರು.

ತಾಂತ್ರಿಕ ಮಾಹಿತಿ ಪಡೆಯಲು ಆರೋಪಿಯನ್ನು ಏಕೆ ವಶಕ್ಕೆ ಪಡೆಯಬೇಕು ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ನಮಗೆ ಕಿರುಕುಳ ನೀಡುವ ಯಾವುದೇ ಉದ್ದೇಶ ಇಲ್ಲ. ಕನಿಷ್ಟ 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಬೇಕಾಗಿದೆ. ಕನಿಷ್ಟ 6 ರಿಂದ 7 ದಿನವಾದರೂ ವಶಕ್ಕೆ ನೀಡಬೇಕು ಎಂದು ಕೋರಿದರು.

ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲ ಅರುಣ್, ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಎರಡು ಬಾರಿ ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಇದೀಗ ಮತ್ತೊಂದು ಬಾರಿ ಅಗತ್ಯವಿಲ್ಲ ಎಂದರು.

ಇದಕ್ಕೆ ಪೀಠ, ಆರೋಪಿಯ ಬಳಿ ಇರುವ ಸಾಕ್ಷಿಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ. ಇತರೆ ಸಂತ್ರಸ್ತೆ ಇರುವುದರಿಂದ ವಿಡಿಯೋ, ಪೋಟೋ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಆಕ್ಷೇಪವೇಕೆ ಎಂದು ಪ್ರಶ್ನಿಸಿದರು. ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲರು, ಆರೋಪಿ 360 ಡಿಗ್ರಿ ವಿಡಿಯೋ, ಪೋಟೋ ಶೂಟ್ ಆಗಿದೆ. ಹೀಗಿದ್ದಾಗ ಮತ್ತೆ ಅವಶ್ಯಕತೆ ಇಲ್ಲ ಎಂದರು. ವಾದ-ಪ್ರತಿವಾದ ಆಲಿಸಿದ ಪೀಠ ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿತು.

ಇದನ್ನೂ ಓದಿ: ದರ್ಶನ್‌ಗೆ ಸ್ವಂತ ಬುದ್ಧಿ ಕಡಿಮೆ, ಮೂರನೇಯವರ ಮಾತು ಕೇಳುವುದು ಜಾಸ್ತಿ: ನಿರ್ಮಾಪಕ ಮಹಾದೇವ - Producer Mahadeva

ETV Bharat Logo

Copyright © 2024 Ushodaya Enterprises Pvt. Ltd., All Rights Reserved.