ETV Bharat / state

ನನ್ನ ಮಗ ತಪ್ಪು ಮಾಡಿದರೆ ನೇಣಿಗೆ ಹಾಕಲಿ: ವಿಧಾನಸಭೆಯಲ್ಲಿ ಭಾವುಕರಾದ ಹೆಚ್.ಡಿ.ರೇವಣ್ಣ - Pen Drive Case - PEN DRIVE CASE

ವಿಧಾನಸಭೆಯಲ್ಲಿ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಪ್ರಸ್ತಾಪವಾಗಿದ್ದು, ಈ ವೇಳೆ ಹೆಚ್​.ಡಿ.ರೇವಣ್ಣ ಆಕ್ರೋಶ ಭರಿತವಾಗಿಯೇ ಪ್ರತ್ಯುತ್ತರ ನೀಡಿದರು.

PEN DRIVE CASE DISCUSSED  HD REVANNA EMOTIONAL  MONSOON SESSION  BENGALURU
ವಿಧಾನಸಭೆಯಲ್ಲಿ ಭಾವುಕರಾದ ಹೆಚ್.ಡಿ.ರೇವಣ್ಣ (ETV Bharat)
author img

By ETV Bharat Karnataka Team

Published : Jul 16, 2024, 4:22 PM IST

ಬೆಂಗಳೂರು : ಹಾಸನದ ಪೆನ್ ಡ್ರೈವ್ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು, ಆಡಳಿತ - ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮಗಳ ಕುರಿತು ಚರ್ಚೆ ಮಾಡುವ ವೇಳೆ ರಾಜ್ಯ ಸರ್ಕಾರ ರಚಿಸಿರುವ ಎಸ್​ ಐಟಿ ತನಿಖೆಯ ತಾರತಮ್ಯವನ್ನು ಪ್ರಸ್ತಾಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತನಿಖೆ ನಡೆಸುತ್ತಿರುವ ಎಸ್​​​ಐಟಿ ತಂಡ ಎಫ್​ಐಆರ್ ದಾಖಲಾಗಿ 40 ದಿನಗಳಾದರೂ ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ. ಅದೇ ರೀತಿ ಹೆಚ್.ಡಿ‌. ರೇವಣ್ಣನ ಮಗ ಮಾಡಿದ ತಪ್ಪಿಗೆ ರೇವಣ್ಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಗೆ ತಲಾ 20 ಮಂದಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿತ್ತು. ರೇವಣ್ಣ ಅವರ ಪತ್ನಿ ಭವಾನಿ ಅವರ ಬಂಧನಕ್ಕೂ ಪ್ರಯತ್ನಿಸಲಾಯಿತು. ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡರು. ನಮ್ಮ ಪಕ್ಷದ ಮಾಜಿ ಶಾಸಕ ಪ್ರೀತಂಗೌಡ ಅವರನ್ನು ಬಂಧಿಸುವ ಯತ್ನಗಳಾದವು. ಎಸ್​ಐಟಿ ಅಧಿಕಾರಿಗಳ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಜೆಡಿಎಸ್​ನ ಹಿರಿಯ ಶಾಸಕರೂ ಆಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಪ್ರತಿಪಕ್ಷದ ನಾಯಕರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸ್ಪಷ್ಟನೆ ನೀಡಲು ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್​ನ ಶಾಸಕ ಕೃಷ್ಣಪ್ಪ ಅವರು, ರೇವಣ್ಣ ಅವರ ಪುತ್ರ ತಪ್ಪು ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆರ್.ಅಶೋಕ್ ಅವರು ತಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದರು.

ಚರ್ಚೆಯ ನಡುವೆ ಪದೇ ಪದೆ ವಿಷಯ ಪ್ರಸ್ತಾಪವಾದಾಗ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಎರಡು ಎಸ್​​ಐಟಿ ತಂಡಗಳ ನಡುವೆ ಪದೇ ಪದೆ ಹೋಲಿಕೆ ಮಾಡಿ ಮಾತನಾಡುತ್ತಿರುವುದು ಏಕೆ?, ನೂರಾರು ಮಹಿಳೆಯರ ಮಾನ ಹರಣವಾಗಿರುವ ಪ್ರಕರಣ ವಾಲ್ಮೀಕಿ ಹಗರಣಕ್ಕಿಂತಲೂ ಕಡಿಮೆ ಎಂಬ ಧೋರಣೆಯೇ?, ಮಹಿಳೆಯರ ಮಾನಕ್ಕೆ ಬೆಲೆ ಇಲ್ಲವೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್​ನ ಶಾಸಕ ನಾರಾಯಣ ಸ್ವಾಮಿಯವರು ಮಧ್ಯಪ್ರವೇಶ ಮಾಡಿ, ಹಣ ಹೋದರೆ ಬರುತ್ತದೆ, ಮಾನ ಹೋದರೆ ಬರುತ್ತದೆಯೇ? ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ರೇವಣ್ಣ ಅವರು, ನಿಮ್ಮ ಬಂಡವಾಳ ಗೊತ್ತಿದೆ, ಕುಳಿತುಕೊಳ್ಳಿ ಎಂದು ಕಿಡಿಕಾರಿದರು. ಈ ವೇಳೆ ಕೃಷ್ಣಪ್ಪ, ನೀವೆಲ್ಲಾ ಶ್ರೀರಾಮಚಂದ್ರರು ಎಂದು ಕಾಂಗ್ರೆಸ್ಸಿಗರನ್ನು ಮೂದಲಿಸಿದರು.

ಬಾವುಕರಾದ ರೇವಣ್ಣ : ಅವಕಾಶ ಪಡೆದುಕೊಂಡು ಸ್ಪಷ್ಟನೆ ನೀಡಿದ ರೇವಣ್ಣ ಅವರು, ನನಗೆ ಕಾಂಗ್ರೆಸ್ ಶಾಸಕರಂತೆ ವಾದ ಮಾಡುವಷ್ಟು ಶಕ್ತಿ ಇಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ, ನಾನು ಯಾರ ಪರವಾಗಿಯೂ ವಹಿಸಿಕೊಂಡು ಮಾತನಾಡುತ್ತಿಲ್ಲ ಎಂದು ಬಾವುಕರಾದರು. 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಹೆಣ್ಣು ಮಗಳೊಬ್ಬಳನ್ನು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಕರೆಸಿಕೊಂಡು ದೂರು ಬರೆಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ಪೊಲೀಸ್ ಮಹಾನಿರ್ದೇಶಕರಾಗಲು ಅನರ್ಹರು. ಮೂರೂ ಬಿಟ್ಟು ನೀತಿಗೆಟ್ಟ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪಗಳು ವ್ಯಕ್ತವಾದವು. ಸಚಿವ ಪ್ರಿಯಾಂಕ ಖರ್ಗೆ ಸಂತ್ರಸ್ತರ ದೂರು ತೆಗೆದುಕೊಳ್ಳುವುದು ತಪ್ಪೇ? ಎಂದು ಪ್ರಶ್ನಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸರ್ಕಾರದ ವಿರುದ್ಧ ರೇವಣ್ಣ ಆರೋಪ ಮಾಡಿದ್ದಾರೆ. ಅವರಿಗೆ ಅನ್ಯಾಯವಾಗಿದ್ದರೆ ಪ್ರತ್ಯೇಕವಾಗಿ ನೋಟೀಸ್ ಕೊಡಲಿ, ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದರು. ನಾನು ನೋಟೀಸ್ ಕೊಡುತ್ತೇನೆ ಎಂದು ರೇವಣ್ಣ ಹೇಳಿದರು. ಒಟ್ಟಾರೆ ಪೆನ್ ಡ್ರೈವ್ ಪ್ರಕರಣ ಸದನದಲ್ಲಿ ಕೆಲಕಾಲ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಓದಿ: ಬೆಂಗಳೂರಿನಲ್ಲೇ ಎರಡನೇ ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ: ಸಚಿವ ಎಂ.ಬಿ. ಪಾಟೀಲ್ - second airport in Bengaluru

ETV Bharat Logo

Copyright © 2025 Ushodaya Enterprises Pvt. Ltd., All Rights Reserved.