ETV Bharat / state

ಮೊಣಕಾಲಿನ ಕ್ಯಾಪ್​ನೊಳಗೆ ಮರೆಮಾಚಿ ಚಿನ್ನ ಸಾಗಾಟ; ಸಿಕ್ಕಿಬಿದ್ದ ಪ್ರಯಾಣಿಕ - bengaluru

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​​​ ಅಧಿಕಾರಿಗಳು ಬಂಧಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ

author img

By ETV Bharat Karnataka Team

Published : Feb 2, 2024, 11:26 AM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮೊಣಕಾಲಿನ ಕ್ಯಾಪ್​ನೊಳಗೆ ಮರೆಮಾಚಿ ಪೇಸ್ಟ್‌ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 47.89 ಲಕ್ಷ ರೂ ಮೌಲ್ಯದ 777.5 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಜನವರಿ 31ರಂದು ಸಿಂಗಾಪುರ ಏರ್‌ಲೈನ್ಸ್​ ಸಂಖ್ಯೆ SQ510 ವಿಮಾನದಲ್ಲಿ ಆರೋಪಿ ಕೆಐಎಎಲ್​ಗೆ ಬಂದಿಳಿದಿದ್ದನು.

ಪ್ಲಾಸ್ಕ್​ನಲ್ಲಿ ಚಿನ್ನ ಸಾಗಾಟ: ಪ್ಲಾಸ್ಕ್​ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ಜ.31 ರಂದು ಪತ್ತೆ ಹಚ್ಚಿದ್ದರು. ಸೌದಿ ಅರೇಬಿಯಾದ ಜೆಡ್ಡಾ ಏರ್ಪೋರ್ಟ್‌ನಿಂದ ಆರೋಪಿ ಆಗಮಿಸಿದ್ದ. ಕಸ್ಟಮ್ಸ್​​ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್​ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿತ್ತು. 7 ಲಕ್ಷದ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಅಕ್ಕನ ಬ್ಯಾಗ್​ನಲ್ಲಿದ್ದ 8.51 ಲಕ್ಷ ಮೌಲ್ಯದ ಚಿನ್ನ ಕದ್ದ ತಂಗಿಯ ಬಂಧ‌ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.