ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿವರ್ಷದಂತೆ ಈ ಬಾರಿಯೂ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ನಾಳೆಯಿಂದ 12 ದಿನಗಳ ಕಾಲ ಪ್ರದರ್ಶನ ಆಯೋಜಿಸಲಾಗಿದೆ. ಈ ವೇಳೆ ಸಂಚಾರ ದಟ್ಟಣೆ ಉಂಟಾಗುವುದರಿಂದ ಲಾಲ್‌ಬಾಗ್ ಸುತ್ತಮುತ್ತ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಆಗಸ್ಟ್ 8ರಿಂದ 19ರ ವರೆಗೆ ಪ್ರದರ್ಶನ ನಡೆಯಲಿದೆ. ಗಣ್ಯ ವ್ಯಕ್ತಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರು ಒಳಗೊಂಡಂತೆ ಲಕ್ಷಾಂತರ ಜನ ಆಗಮಿಸಲಿದ್ದಾರೆ.
ಇಲ್ಲೆಲ್ಲಾ ವಾಹನ ನಿಲುಗಡೆ ನಿಷೇಧ: ಡಾ.ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಕೆ.ಹೆಚ್.ರಸ್ತೆ ಹಾಗೂ ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ವರೆಗಿನ ಎರಡು ಬದಿಗಳಲ್ಲಿ ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ಬಾಗ್ನ ಮುಖ್ಯದ್ವಾರದವರೆಗೆ ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ವರೆಗೆ, ಬಿಎಂಟಿಸಿ ಬಸ್ ನಿಲ್ದಾಣದ ಜಂಕ್ಷನ್ನಿಂದ ರಸ್ತೆಯ ಎರಡು ಬದಿಗಳಲ್ಲಿ, ಕೃಂಬಿಗಲ್ ರಸ್ತೆ, ಲಾಲ್ ಬಾಗ್ ವೆಸ್ಟ್ ಗೇಟ್ನಿಂದ ಟೀಚರ್ಸ್ ಕಾಲೇಜುವರೆಗೆ, ಆರ್.ವಿ.ಟೀಚರ್ಸ್ ಕಾಲೇಜಿನಿಂದ ಅಶೋಕ ಪಿಲ್ಲರ್ವರೆಗೆ, ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಜಂಕ್ಷನ್ವರೆಗೆ ವಾಹನ ನಿಲುಗಡೆಗೆ ನಿಷೇಧ.
ಇಲ್ಲಿ ವಾಹನ ನಿಲುಗಡೆಗೆ ಅವಕಾಶ: ಡಾ.ಮರಿಗೌಡ ರಸ್ತೆ, ಅಲ್ ಅಮೀನ್ ಕಾಲೇಜು ಆವರಣ, ಕೆ.ಹೆಚ್.ರಸ್ತೆ, ಶಾಂತಿನಗರ, ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ, ಡಾ.ಮರೀಗೌಡ ರಸ್ತೆ-ಹಾಪ್ ಕಾಮ್ಸ್ ಹಾಗೂ ಜೆ.ಸಿ.ರಸ್ತೆ, ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ಮಾಡಬಹುದು.
ಇದನ್ನೂ ಓದಿ: ಆಗಸ್ಟ್ 8ರಿಂದ ಲಾಲ್‌ಬಾಗ್‌ನಲ್ಲಿ ಅಂಬೇಡ್ಕರ್ ಬದುಕಿನ ಥೀಮ್‌ನಡಿ ಫಲಪುಷ್ಪ ಪ್ರದರ್ಶನ - Lalbagh Flower Show