ETV Bharat / state

ಹೃದಯಾಘಾತದಿಂದ ಯುವಕ ಸಾವು: ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು - Eye Donation

ಹೃದಯಾಘಾತದಿಂದ ಸಾವನ್ನಪ್ಪಿದ ಯುವಕನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

EYE DONATION
ಸುನೀಲ್ ಕುಮಾರ್ (ETV Bharat)
author img

By ETV Bharat Karnataka Team

Published : May 6, 2024, 6:20 PM IST

ದಾವಣಗೆರೆ: ಹೃದಯಾಘಾತದಿಂದ ಮೃತಪಟ್ಟ ಯುವಕನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಮಗನ ಕಳೆದುಕೊಂಡು ದುಃಖದಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆಯಲ್ಲಿ ಇಂತಹದೊಂದು ಮಾನವೀಯ ಘಟನೆ ನಡೆದಿದೆ.

ದಿ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿದ ಬಳಿಕ ತಮ್ಮ ನೇತ್ರಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಬಳಿಕ ಸಾವಿರಾರು ಜನ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಂತೆ ತಾವೂ ಕೂಡ ಕಣ್ಣು ದಾನ ಮಾಡುವ ಬಗ್ಗೆ ಹಲವೆಡೆ ಕಣ್ಣಿನ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅದರಂತೆಯೇ ಹೊಳೆಸಿರಿಗೆರೆಯಲ್ಲಿ ಮೃತ ಯುವಕನ ಪೋಷಕರು ಪುನೀತ್ ರಾಜ್​ಕುಮಾರ್​ ನಡೆ ಅನುಸರಿಸಿದ್ದಾರೆ.

ಹೊಳೆಸಿರಿಗೆರೆ ಗ್ರಾಮದ ಯುವಕ ಸುನೀಲ್ ಕುಮಾರ್ ಮುನಿಯಪ್ಪ (22) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮೃತ ಸುನೀಲ್ ಕುಮಾರ್​​ ನೇತ್ರಗಳು ಬೇರೆಯವರ ಬಾಳನ್ನಾದರೂ ಬೆಳಗಲಿ ಎಂಬ ಸದುದ್ದೇಶದಿಂದ ಅವರ ಪೋಷಕರು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಹಸ್ತಾಂತರ ಮಾಡಿದ್ದಾರೆ.

ಮೃತ ಯುವಕನ ಪೋಷಕರಾದ ಹನುಮಂತಪ್ಪ ಹಾಗು ಮಮತಾ ಅವರು ಈ ಮಾನವೀಯ ಕಾರ್ಯ ಮಾಡಿದ್ದಾರೆ. ಮಗನ ಅಗಲಿಕೆಯ ನೋವಿನಲ್ಲೂ ಮಾದರಿ ಕಾರ್ಯ ಮಾಡಿದ ಪೋಷಕರನ್ನು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡು ಇಬ್ಬರ ಮೆದುಳು ನಿಷ್ಕ್ರಿಯ: 8 ಜನರಿಗೆ ಅಂಗಾಂಗ ದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.