ETV Bharat / state

ಮುಡಾ ಒಂದೇ ಅಲ್ಲ, ಜನ ವಿರೋಧಿ ನೀತಿಗಳ ವಿರುದ್ಧ ಪಾದಯಾತ್ರೆ; 10 ತಿಂಗಳಲ್ಲಿ ಕೈ ಅಧಿಕಾರ ಕಳೆದುಕೊಳ್ಳಲಿದೆ ಎಂದು HDK ಭವಿಷ್ಯ - BJP JDS Padayatra

author img

By ETV Bharat Karnataka Team

Published : Aug 3, 2024, 1:12 PM IST

Updated : Aug 3, 2024, 1:45 PM IST

''ಇದು ಮುಡಾ ಪ್ರಕರಣದ ಒಂದೇ ಅಲ್ಲ, ಸರ್ಕಾರದ ಹಲವಾರು ಜನ ವಿರೋಧಿ ನೀತಿಗಳ ವಿರುದ್ಧ ಪಾದಯಾತ್ರೆಯಾಗಿದೆ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ - ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.

HD Kumaraswamy  BJP JDS Padayatra  Bengaluru
ಹೆಚ್.ಡಿ. ಕುಮಾರಸ್ವಾಮಿ (IANS)
ಜೆಡಿಎಸ್- ಬಿಜೆಪಿ ಪಾದಯಾತ್ರೆ (ETV Bharat)

ಬೆಂಗಳೂರು: ಜೆಡಿಎಸ್- ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ''ಇದು ಮುಡಾ ಪ್ರಕರಣ ಒಂದೇ ಅಲ್ಲ. ಈ ಸರ್ಕಾರದ ಹಲವಾರು ರೀತಿಯ ಜನ ವಿರೋಧಿ ನೀತಿ ವಿರುದ್ಧ ಪಾದಯಾತ್ರೆ'' ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಜೆಪಿ ನಗರದ ನಿವಾಸದ ಬಳಿ ಇಂದು (ಶನಿವಾರ) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸದನ ಸಮಿತಿ ರಚನೆ ಮಾಡಿ, ನೈಸ್ ರಸ್ತೆ ಯೋಜನೆ ರೈತರ ಜಮೀನು ಲೂಟಿ ಮಾಡಿದ್ದಾರೆ. ಆ ವರದಿ ಕೋಲ್ಡ್ ಸ್ಟೋರೇಜ್ ಆಗಿದೆ. ಈಗ ಮುಡಾ,ವಾಲ್ಮೀಕಿ, ಜನ ವಿರೋಧ ನೀತಿಯನ್ನು ವಿರೋಧಿಸಿ ಪಾದಯಾತ್ರೆ ಮಾಡುತ್ತಿದ್ದೇವೆ'' ಎಂದರು.

ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ವಿಚಾರಕ್ಕೆ ಮಾತನಾಡಿದ ಹೆಚ್​ಡಿಕೆ, ''ಎಲ್ಲಕ್ಕೂ ಉತ್ತರ ಕೋಡೋಣ.‌ ಅಲ್ಲಿ ಯಾರು ಪ್ರಶ್ನೆ ಮಾಡ್ತಾ ಇದ್ದಾರೆ ಅವರಿಗೆ ಪ್ರಶ್ನೆ ಮಾಡಲಿಕ್ಕೆ ನೈತಿಕತೆ ಇದೆಯಾ? ನನ್ನ ಬೆಳಸಿದ್ದಾರೆ. ರಾಮನಗರ, ಬಿಡದಿ ಚನ್ನಪಟ್ಟಣದಲ್ಲಿ ಉತ್ತರ ಕೋಡೋಣ. ನನ್ನ ಬೆಳೆಸಿರುವ ಜನರ ಮುಂದೆ ಉತ್ತರ ಕೋಡೋಣ'' ಎಂದು ತಿರುಗೇಟು ನೀಡಿದರು.

''ಏನು ಬಿಚ್ಚಿಡ್ತಾರೆ ಅವರು ಬೆತ್ತಲೇ ಆಗಿದ್ದಾರೆ.‌ ನಾನು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪಾದಯಾತ್ರೆ ಚಾಲನೆ ನೀಡುತ್ತೇವೆ. ಪಾದಯಾತ್ರೆಯಲ್ಲಿ ಭಾಗಿಯಾಗಬೇಕು ಅಂತ ಇದೆ. ವೈದ್ಯರು ದೇಹ ಮೇಲೆ ಒತ್ತಡ ಹಾಕಬಾರದ್ದು ಅಂತ ಹೇಳಿದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಕೋಡೋಕೆ ಪಾದಯಾತ್ರೆ ಮಾಡುವ ಬಗ್ಗೆ ಅಲ್ಲಿ ತೀರ್ಮಾನ ಮಾಡುತ್ತೇನೆ'' ಎಂದು ಹೇಳಿದರು.

ಅಹಿಂದ ನಾಯಕ ಸಿಎಂ ಆದ ಅನ್ನೊ ಕಾರಣಕ್ಕೆ ಪಾದಯಾತ್ರೆ ಮಾಡ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಹೊಟ್ಟೆ ಉರಿಗೆ ಔಷಧ ತೆಗೆದುಕೊಳ್ಳಬಹುದು. ಅದರೆ, ರಾಜಕೀಯ ಹೊಟ್ಟೆ ಉರಿಗೆ ಔಷಧ ಇಲ್ಲ. ಮನುಷ್ಯ ದೇಹಕ್ಕೆ ಔಷಧ ಇದೆ. ರಾಜಕೀಯ ವ್ಯವಸ್ಥೆಯಲ್ಲಿ ಅಹಿಂದ ಹೆಸರಿನಲ್ಲಿ ಸಿಎಂ ಆಗಿದ್ದಾರೆ. ಯಾವ ರೀತಿ ಎಸ್ಸಿ, ಎಸ್ಟಿ ಜನರಿಗೆ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಹೊಡೆದ್ದಾರೆ‌. ಇವರು ಅಹಿಂದ ರಕ್ಷಕರಾ? ಇದಕ್ಕೆ ನಾವು ಹೊಟ್ಟೆ ಉರಿ ಪಡಬೇಕಾ? ಕೆಟ್ಟ ರೀತಿಯ ಸರ್ಕಾರ ವಿರುದ್ಧ ಜನರ ಆಕ್ರೋಶ ಇದೆ. ಅದಕ್ಕೆ ಈ ಪಾದಯಾತ್ರೆ'' ಎಂದು ತಿರುಗೇಟು ನೀಡಿದರು.

ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರ ಅಸ್ಥಿರಕ್ಕೆ ಪ್ರಯತ್ನ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಮಾತನಾಡಿದ ಹೆಚ್​ಡಿಕೆ, ''ಇಂತಹ ಪರಿಸ್ಥಿತಿಯಲ್ಲಿ ಇದನ್ನೇ ಹೇಳಬೇಕು ತಾನೇ. ಎಲ್ಲರೂ ಹೇಳೋದು ಇದನ್ನೆ ತಾನೇ. ಅವರಿಗೆ ಬೇಕಾದಾಗ ರಾಜ್ಯಪಾಲರು ಒಳ್ಳೆಯವರು, ಬೇಡ ಅಂದಾಗ ಕೆಟ್ಟವರು. 75 ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ಹೇಳುತ್ತಿದ್ದಾರೆ'' ಎಂದರು.

ಯಾದಗಿರಿ ಪಿಎಸ್ಐ ವರ್ಗಾವಣೆ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ವರ್ಗಾವಣೆಗಳಲ್ಲಿ ಪ್ರತಿಯೊಂದು ಸ್ಥಳಕ್ಕೆ ಹಣ ಕೊಡಬೇಕು. ಹಾಸನ ವರ್ಗಾವಣೆಗೆ ಎಷ್ಟು ಆಗಿದೆ ಕೇಳಿಲ್ಲ. ಸಾವಿರಾರು ಉದಾಹರಣೆ ಕೊಡಬಲ್ಲೆ'' ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಹತ್ತು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ- ಹೆಚ್​ಡಿಕೆ: ರಾಜ್ಯ ಸರ್ಕಾರದ ಹಗರಣಗಳ ವಿರುದ್ಧದ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನಾ ಸಮಾವೇಶದಲ್ಲಿ ದೋಸ್ತಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇನ್ನು 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ''ಡಿಕೆಶಿ ಉದ್ಧಟತನದಲ್ಲಿ ನಾವು ಮುಂದೆ ಹತ್ತು ವರ್ಷ ಆಡಳಿತದಲ್ಲಿರುತ್ತೇವೆ ಅಂತಾರೆ. ನೀವು ಮುಂದೆ ಹತ್ತು ವರ್ಷ ಅಲ್ಲ, ಇನ್ನು 10 ತಿಂಗಳು ಅಧಿಕಾರದಲ್ಲಿ ಇದ್ದರೆ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ'' ಎಂದು ವಾಗ್ದಾಳಿ ನಡೆಸಿದರು.

''ನೀವು ‌14 ಸೈಟ್ ತಗೊಂಡಿದ್ದಕ್ಕೆ ನಮ್ಮ ಅಭ್ಯಂತರ ಅಲ್ಲ. ಇನ್ನೂ‌ 25 ಸೈಟ್ ತಗೊಳ್ಳಿ. ಆದರೆ,‌ ಕಾನೂನು‌ ಬದ್ದವಾಗಿ ತಗೊಳ್ಳಬೇಕು. ಸರ್ಕಾರದ ಆಸ್ತಿ, ಮುಡಾ ಆಸ್ತಿ ಅಭಿವೃದ್ಧಿ ಆದ ಮೇಲೆ ನಿಮ್ಮ‌ ಬಾವನಿಗೆ ಕೊಡೋಕೆ ಅವಕಾಶ ಇದ್ಯಾ? ಸರ್ಕಾರದ ಜಮೀನನ್ನು ‌ನಿಮ್ಮ‌ ಬಾವನಿಗೆ ಕೊಡೋಕೆ ಸ್ಥಳ ಪರಿಶೀಲನೆ ಕಾನೂನಿನಲ್ಲಿ ಇಲ್ವೇ? ಅದರ ಮೌಲ್ಯ 62 ಕೋಟಿ ಅಂತಾ ಸಾರ್ವಜನಿಕವಾಗಿ ಕೇಳಿದ್ದೀರಿ. ನೀವು ಉಪಮುಖ್ಯಮಂತ್ರಿಗಳಾಗಿ ನಿಮ್ಮ ಪ್ರಭಾವ ಬೀರಿಲ್ಲ ಅಂತಾ ಹೇಳೋಕೆ ಆಗುತ್ತಾ ನಿಮ್ಮಿಂದ? ವಿಧಾನಸಭೆಯಲ್ಲಿ ಚರ್ಚೆ ಮಾಡದೇ ಕಲಾಪದಲ್ಲಿ ಕದ್ದು ಹೋದ್ರಿ. ಯಾರನ್ನ ಕೇಳಿ ಆಯೋಗ ಮಾಡಿದ್ರಿ? ದೇಸಾಯಿ‌ ಹೆಸರಲ್ಲಿ ಮುಡಾ ಮುಚ್ಚಿ ಹಾಕೋಕೆ ಹೊರಟಿದ್ದಾರೆ. ನಮ್ಮ ಹೊಂದಾಣಿಕೆ ಬಗ್ಗೆ ಲಘುವಾಗಿ ಮಾತಾಡಿದ್ದೀರಿ'' ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ದಾಖಲೆ ಕೊಟ್ಟಿರುವುದೇ ಡಿಕೆಶಿ: ''ನಿಮ್ಮ ಹತಾಶೆ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯರನ್ನು ಕೆಳಗೆ ಇಳಿಸಬೇಕು ಎಂದು ಯಾವ ಬಾಗಿಲ ಬಳಿ ಹೋಗುತ್ತಿದ್ದೀರಿ. ಸುದ್ದಿಗೋಷ್ಠಿಯಲ್ಲಿ ದೊಡ್ಡದಾಗಿ ಸಿದ್ದರಾಮಯ್ಯ ಅವರನ್ನು ಇಳಿಸಲು ಬಿಡಲ್ಲ ಅಂತೀದ್ದೀರಿ. ಈ ಡ್ರಾಮಾ ಏಕೆ? ಇನ್ನು ಏನೆಲ್ಲಾ ನಾಟಕ ಆಡುತ್ತೀರಿ? ಸಿದ್ದರಾಮಯ್ಯ ದಾಖಲೆಗಳನ್ನು ಹುಡುಕಿ ಹುಡುಕಿ ಯಾರ ಯಾರ ಮನೆ ಬಾಗಿಲಿಗೆ ಹೋಗುತ್ತಿದ್ದೀರಿ ಎಂಬುದು ಗೊತ್ತು‌. ಇನ್ನೂ ಏಕೆ ನಾಟಕ ಮಾಡ್ತೀರಿ? ಎಂದು ಗಂಭೀರವಾಗಿ ಆರೋಪಿಸಿದರು.

''ಕುಮಾರಸ್ವಾಮಿ ಬಣ್ಣ ಬದಲಾಗಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ನನ್ನದು ಒರಿಜಿನಲ್ ಬಣ್ಣ ಬದಲಾಗಲು ಸಾಧ್ಯವಿಲ್ಲ. 2006ರಲ್ಲಿ ಸರ್ಕಾರ ಮುಂದುವರೆದಿದ್ರೆ ಕಾಂಗ್ರೆಸ್ ಅಂದೇ ನಿರ್ನಾಮ ಆಗುತ್ತಿತ್ತು. ಡಿಕೆಶಿ ನಿನ್ನೆ ಬಿಡದಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ನಮ್ಮ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಬಿಡದಿಯಲ್ಲೇ ನಾನು ಉತ್ತರ ನೀಡುತ್ತೇನೆ'' ಎಂದು ತಿಳಿಸಿದರು.

''ಮೈತ್ರಿ ಪಕ್ಷಗಳ ನಡುವೆ ಬಿರುಕು ಮೂಡಿಸಲು ಸಾಧ್ಯವಿಲ್ಲ. ಸಿಡಿ ಶಿವು ಹೇಳಿದ್ದಾರೆ ಕಾಂಗ್ರೆಸ್​ನ ಹೆದರಿಸಲು ಬಿಜೆಪಿ ಜತೆ ಹೋಗಿದ್ದಾರೆ ಅಂತ. ಬಿಜೆಪಿ ಜತೆ ಹೋಗಿದ್ದೆ ನಿಮ್ಮನ್ನ ಇಳಿಸುವುದಕ್ಕೆ. ವಿಜೇಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಒಟ್ಟಾಗಿ ಹೋಗ್ತಾರೆ. ಕಾಂಗ್ರೆಸ್ ರಾಜ್ಯದಿಂದ ತೊಲಗಬೇಕು. ನಿಮ್ಮ ಅಕ್ರಮ ಬಯಲಿಗೆ ಬರಬೇಕಾದರೆ ಬಿಜೆಪಿ- ಜೆಡಿಎಸ್ ಅಣ್ಣ, ತಮ್ಮದಿರಾಗಿ ಕೆಲಸ ಮಾಡಬೇಕಾಗಿದೆ'' ಎಂದರು.

ನಿಮ್ಮ ಕಾಲ್ಗುಣಕ್ಕೆ ಮಳೆ ಬಂದಿಲ್ಲ: ''ಡಿಎಂಕೆ ನಾಯಕರ ಜೊತೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಚಪ್ಪಾಳೆ ತಟ್ಟುತ್ತೀರಿ. ನಿಮಗೆ ತಾಕತ್ತು ಇದ್ದರೆ ತಮಿಳುನಾಡಿಗೆ ಹೋಗಿ ನಿಮ್ಮ ಪಾರ್ಟ್ನರ್ಸ್ ಬಳಿ ಮಾತನಾಡಿ. ಸಿದ್ದರಾಮಯ್ಯನವರೇ ನಿಮ್ಮ ಕಾಲ್ಗುಣಕ್ಕೆ ಈ ಮಳೆ ಬಂದಿಲ್ಲ. ನಾಡಿನ ಜನ ನಮ್ಮನ್ನು ಗೆಲ್ಲಿಸಿದ್ದಾರಲ್ಲ. ಅದಕ್ಕೆ ಮಳೆ ಬಂದಿದೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಮಳೆ ಬರುತ್ತಿದೆ. ಕುಮಾರಸ್ವಾಮಿಗೆ ಸಂಕಷ್ಟ ಆಗಬಾರದು ಎಂದು ಮಳೆ ಬರುತ್ತಿದೆ. ಜಲಾಶಯಗಳೆಲ್ಲ ತುಂಬುತ್ತಿವೆ'' ಎಂದರು.

ಇದನ್ನೂ ಓದಿ: ಮೈಸೂರು ಭಾಗದ ಆಪ್ತ ಸಚಿವರ ಜತೆ ಉಪಹಾರ ಸೇವಿಸಿದ ಸಿಎಂ - CM breakfast with ministers

Last Updated : Aug 3, 2024, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.