ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿರುವ ಶಾರದಾ ಪೀಠಕ್ಕೆ ಪಿ.ಎ. ಮುರಳಿ ಅವರನ್ನು ನೂತನ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳ ಸಲಹೆ ಮೇರೆಗೆ ಪಿ ಎ ಮುರುಳಿ ಅವರನ್ನು ಅಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. 1986 ರಿಂದ ಗೌರಿಶಂಕರ್ ಶೃಂಗೇರಿ ಶಾರದಾ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು 1986 ರಲ್ಲಿ ಶೃಂಗೇರಿ ಜಗದ್ಗುರು ಆಭಿನವ ವಿದ್ಯಾತೀರ್ಥ ಶ್ರೀಗಳು ನೇಮಕ ಮಾಡಿದ್ದರು.
ಶಾರದಾ ಪೀಠದ ನೂತನ ಆಡಳಿತಾಧಿಕಾರಿ ಪಿ.ಎ. ಮುರಳಿ ಅವರಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಮುಂದುವರಿಸಲು ಶ್ರೀಮಠ ನಿರ್ಧಾರ ಮಾಡಿದೆ. ಫೆಬ್ರವರಿ 12ರಂದು ಮಠದಲ್ಲಿ ಗೌರಿ ಶಂಕರ್ಗೆ ಅಭಿನಂದನಾ ಸಮಾರಂಭವನ್ನು ಸಹ ಆಯೋಜಿಸಲಾಗಿದೆ. ಫೆಬ್ರವರಿ 12 ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷ ತುಂಬಲಿದೆ. ಫೆಬ್ರವರಿ 12 ಕ್ಕೆ ಗೌರಿ ಶಂಕರ್ ಸಮರ್ಪಿತ ಸೇವೆಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿದೆ. ಅಂದು ನಡೆಯುವ ಅಭಿನಂದನಾ ಸಮಾರಂಭದಲ್ಲಿ ಪಿ.ಎ.ಮುರಳಿ ಅವರು ಮಠದ ನೂತನ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನೂಓದಿ:ಬಾಲಕ ರಾಮನಿಗೆ 80 ಕೆಜಿ ತೂಕದ ಖಡ್ಗ ಅರ್ಪಿಸಿದ ಮಹಾರಾಷ್ಟ್ರದ ಭಕ್ತ