ETV Bharat / state

ನೆಹರು ತಾರಾಲಯದಲ್ಲಿ ಇಂದಿನಿಂದ 'ನಮ್ಮ ಸೂರ್ಯ ಹಾಗೂ ಅದರ ಪರಿವಾರ' ಪ್ರದರ್ಶನ - Nehru Planetarium - NEHRU PLANETARIUM

ಬೆಂಗಳೂರಿನ ಜವಾಹರ್‌ಲಾಲ್​​ ನೆಹರು ತಾರಾಲಯದಲ್ಲಿ 'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಎಂಬ ಆಕಾಶ ಮಂದಿರ ಪ್ರದರ್ಶನ ಇಂದಿನಿಂದ ಆರಂಭವಾಗಲಿದೆ.

'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಪ್ರದರ್ಶನ ಕಾರ್ಯಕ್ರಮ
'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಪ್ರದರ್ಶನ ಕಾರ್ಯಕ್ರಮ (ETV Bharat)
author img

By ETV Bharat Karnataka Team

Published : May 9, 2024, 8:12 AM IST

ಬೆಂಗಳೂರು: ಭಾರತ ಸೇರಿದಂತೆ ಹಲವಾರು ಪ್ರಾಚೀನ ನಾಗರೀಕತೆಗಳಲ್ಲಿ ವಿಶ್ವದ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಯಲು ಸೂರ್ಯನ ಅಧ್ಯಯನವೇ ಮೂಲ ಪ್ರೇರಣೆಯಾಗಿತ್ತು ಎಂದು ರಾಮನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ತರಣ್ ಸೌರದೀಪ್ ಹೇಳಿದ್ದಾರೆ.

ನಗರದ ಜವಾಹರ್‌ಲಾಲ್​​ ನೆಹರು ತಾರಾಲಯದಲ್ಲಿ 'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಹೊಸ ಸಾರ್ವಜನಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ತರಣ್ ಸೌರದೀಪ್​, "ನಮ್ಮ ಸೂರ್ಯ ಮತ್ತು ಅದರ ಪರಿವಾರ ಪ್ರದರ್ಶನವು ಸೂರ್ಯ ಮತ್ತು ಗ್ರಹಗಳ ಮಹತ್ವವನ್ನು ವಿಶೇಷ ರೀತಿಯಲ್ಲಿ ತೆರೆದಿಡುತ್ತದೆ. ಭೂಮಿಯ ಮೇಲೆ ಜೀವದ ಇರುವಿಕೆಗೆ ಅವಶ್ಯಕವಾದ ಬೆಳಕು ಮತ್ತು ಶಾಖವನ್ನು ಒದಗಿಸುವ ಮೂಲ ಸೂರ್ಯ. ಆದ್ದರಿಂದ ಅನಾದಿಕಾಲದಿಂದಲೂ ಸೂರ್ಯನನ್ನು ಹಲವಾರು ಹೆಸರುಗಳಿಂದ ಪೂಜಿಸಲಾಗುತ್ತಿದೆ. ಈ ಪ್ಲಾನೆಟೋರಿಯಂ ಕೇವಲ ಪ್ರದರ್ಶನ ಸ್ಥಳವಾಗದೇ, ಹಲವಾರು ರೀತಿಯ ವಿಭಿನ್ನ ಹಾಗೂ ಆಸಕ್ತಿಕರ ಕಾರ್ಯಕ್ರಮವನ್ನು ರೂಪಿಸುವ ಮೂಲಕ ವಿದ್ಯಾರ್ಥಿಗಳಿಗೆ, ವಿಜ್ಞಾನ ಆಸಕ್ತರಿಗೆ ಮತ್ತು ಜನಸಾಮಾನ್ಯರಿಗೂ ಪ್ರೇರಣೆ ನೀಡುತ್ತಿದೆ" ಎಂದರು.

'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಪ್ರದರ್ಶನ ಕಾರ್ಯಕ್ರಮ
'ನಮ್ಮ ಸೂರ್ಯ ಮತ್ತು ಅದರ ಪರಿವಾರ' ಪ್ರದರ್ಶನ ಕಾರ್ಯಕ್ರಮ (ETV Bharat)

ಬೇಸ್​ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಇಸ್ರೋ ಮಾಜಿ ಚೇರ್ಮನ್ ಎ.ಎಸ್.ಕಿರಣ್ ಕುಮಾರ್ ಮಾತನಾಡಿ, "ನಮ್ಮ ಸೂರ್ಯ ಮತ್ತು ಅದರ ಪರಿವಾರದ ಪ್ರದರ್ಶನದಲ್ಲಿ ಎಂಟು ಗ್ರಹಗಳ ಕುರಿತಾದ ಆಸಕ್ತಿದಾಯಕ ವಿಚಾರಗಳು, ಕ್ಷುದ್ರ ಗ್ರಹಗಳು, ಆಕಾಶ ಕಾಯಗಳು, ಧೂಮಕೇತುಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಬಹುದು. ಚಂದ್ರ, ಮಂಗಳಗ್ರಹ ಮತ್ತು ಸೂರ್ಯ, ಹಾಗೂ ವಿಶ್ವವನ್ನು ಅನ್ವೇಷಿಸುವುದಕ್ಕೆ ಸಂಬಂಧಿಸಿದಂತೆ ಕಳೆದೆರಡು ದಶಕಗಳಲ್ಲಿ ಮಾಡಿರುವ ಪ್ರಮುಖವಾದ ಸಾಧನೆಗಳ ಹಿನ್ನೆಲೆಯಲ್ಲಿ ನಮ್ಮ ಸೂರ್ಯ ಹಾಗೂ ಅದರ ಪರಿವಾರ ಆಕಾಶ ಮಂದಿರ ಪ್ರದರ್ಶನ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ" ಎಂದು ಅಭಿಪ್ರಾಯಪಟ್ಟರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ತಾರಾಲಯದ ನಿರ್ದೇಶಕ ಬಿ.ಆರ್.ಗುರುಪ್ರಸಾದ್, ಮಾಜಿ ನಿರ್ದೇಶಕರಾದ ಪ್ರಮೋದ್ ಗಲಗಲಿ ಸೇರಿದಂತೆ ಹಲವು ಗಣ್ಯರು, ವಿಜ್ಞಾನಾಸಕ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇಂದಿನಿಂದ ಸಾರ್ವಜನಿಕರಿಗೆ ಪ್ರದರ್ಶನ ಮುಕ್ತ: 40 ನಿಮಿಷಗಳ ಪ್ರದರ್ಶನ ಇಂದಿನಿಂದ (ಮೇ.9) ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪ್ರತಿದಿನ ಮಧ್ಯಾಹ್ನ 12.30 ರಿಂದ 1.30 ರ ಅವಧಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಶೋ ಬಿತ್ತರವಾಗಲಿದೆ. ಮಧ್ಯಾಹ್ನ 2.30 ರಿಂದ 3.30ರವರೆಗೆ ಕನ್ನಡ ಭಾಷೆಯಲ್ಲಿ ಪ್ರದರ್ಶನ ಇರಲಿದೆ. ಒಬ್ಬರಿಗೆ 25 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಹೊಳೆಯುವ ಶುಕ್ರ ಶುಷ್ಕವಾಗಿರಲು ಕಾರಣ ಏನು ಎಂಬುದಕ್ಕೆ ಸಿಕ್ತು ಉತ್ತರ; ಈ ಹಿಂದೆ ಶುಕ್ರನಲ್ಲಿ ಇತ್ತಾ ನೀರು? - Why is Venus dont have water

ETV Bharat Logo

Copyright © 2025 Ushodaya Enterprises Pvt. Ltd., All Rights Reserved.