ETV Bharat / state

ಗೊಡ್ಡು ಬೆದರಿಕೆಗಳಿಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ, ಪಾದಯಾತ್ರೆ ಹತ್ತಿಕ್ಕಲು ಸಾಧ್ಯವಿಲ್ಲ:ವಿಜಯೇಂದ್ರ - BJP Mysuru Chalo Padayatra - BJP MYSURU CHALO PADAYATRA

ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಬರೀ ಭ್ರಷ್ಟಾಚಾರದ ಸುದ್ದಿಗಳೇ ಕೇಳಿಬರುತ್ತಿವೆ, ಅವುಗಳ ಸತ್ಯವನ್ನು ಜನ ಮುಂದೆ ತೆರೆದಿಡುವ ಉದ್ದೇಶದಿಂದ ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ಕೈಗೊಳ್ಳುತ್ತಿದೆ, ಅದನ್ನು ಕಾಂಗ್ರೆಸ್​ನಿಂದ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಸವಾಲೆಸೆದಿದ್ದಾರೆ.

Mysore Chalo Padayatra Pre-Preparation Meeting
ಮೈಸೂರು ಚಲೋ ಪಾದಯಾತ್ರೆಯ ಪೂರ್ವತಯಾರಿ ಸಭೆ (ETV Bharat)
author img

By ETV Bharat Karnataka Team

Published : Jul 29, 2024, 7:45 PM IST

ಬೆಂಗಳೂರು: "ಪ್ರತಿಪಕ್ಷಗಳಿಗೆ ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟ ಹಾಗೂ ಪಾದಯಾತ್ರೆ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.

ಶಾಸಕ ಬಿ.ವೈ. ವಿಜಯೇಂದ್ರ (ETV Bharat)

ನಗರದ ಆರಮನೆ ಮೈದಾನದಲ್ಲಿ ಇಂದು ನಡೆದ ಮೈಸೂರು ಚಲೋ ಪಾದಯಾತ್ರೆಯ ಪೂರ್ವತಯಾರಿ ಸಭೆಯಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಉಪ ಮುಖ್ಯಮಂತ್ರಿ ಶಿವಕುಮಾರ್​ ಅವರೇ ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ. ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೇ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ" ಎಂದು ಹೇಳಿದರು.

"ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಹಣವನ್ನು ಬಳಿಕ ಅದನ್ನು ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದರು. ಹೆಂಡ ಖರೀದಿಯೂ ಮಾಡಿದ್ದನ್ನು ಇಡಿ ಉಲ್ಲೇಖಿಸಿದೆ. ಬಿಜೆಪಿ, ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಕುಟುಂಬ ಪಡೆದ 14 ನಿವೇಶನಗಳು ಮುಡಾಕ್ಕೆ ವಾಪಸ್ ಬಂದು ಬಡವರಿಗೆ ಹಂಚಿಕೆ ಆಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

MLA B Y Vijayendra
ಶಾಸಕ ಬಿ.ವೈ. ವಿಜಯೇಂದ್ರ (ETV Bharat)

"ಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಮನಸೋಇಚ್ಛೆ ಕೊಡಲಾಗಿದೆ. ಸ್ವತಃ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಇದನ್ನು ಬಾಯಿ ಬಿಟ್ಟಿದ್ದಾರೆ. ಇನ್ನು ಮುಂದೆ ನಿವೇಶನ ಹಂಚದಿರಲು ಕಡತದಲ್ಲಿ ಮುಡಾ ಅಧ್ಯಕ್ಷರೇ ಸೂಚಿಸಿದ್ದರು. ಜಿಲ್ಲಾಧಿಕಾರಿ ತನಿಖೆಯನ್ನೂ ಮಾಡಿಸಿದ್ದರು. ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಅದು ಸರಿ ಇರುವುದಾಗಿ ಸರ್ಕಾರವೂ ಹೇಳಿತ್ತು" ಎಂದು ವಿವರಿಸಿದರು.

"ನಿವೇಶನ ನೀಡದಂತೆ ಸರ್ಕಾರದ ಆದೇಶದ ನಂತರವೂ ಮುಡಾ ಕಮಿಷನರ್ ಯಥೇಚ್ಛವಾಗಿ ನಿವೇಶನ ಹಂಚಿದ್ದರು. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ನಾವು ಈ ಕುರಿತು ಒತ್ತಡ ಹೇರಿ ಚರ್ಚೆಗೆ ಅವಕಾಶ ಪಡೆದಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ" ಎಂದು ಟೀಕಿಸಿದರು.

Mysore Chalo Padayatra Pre-Preparation Meeting
ಮೈಸೂರು ಚಲೋ ಪಾದಯಾತ್ರೆಯ ಪೂರ್ವತಯಾರಿ ಸಭೆ (ETV Bharat)

"ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ನಡೆದಿದೆ ಎಂದು ಯೂನಿಯನ್ ಬ್ಯಾಂಕ್, ಸಿಬಿಐಗೆ ಪತ್ರ ಬರೆದಿದೆ. ಸಿಬಿಐ ತನಿಖೆ ಮಾಡಬೇಕು ಎಂದು ಅದು ಕೋರಿತ್ತು. ಕಾನೂನಿನಡಿಯೇ ಸಿಬಿಐ ತನಿಖೆ ನಡೆಯುತ್ತಿದೆ. ಸರ್ಕಾರ ರಚಿಸಿದ ಎಸ್‍ಐಟಿ ಎಂದರೆ ಅದು ಸಿದ್ದರಾಮಯ್ಯ ಇನ್‍ವೆಸ್ಟಿಗೇಶನ್ ಟೀಂ. ಅಹಿಂದ ಸಮುದಾಯಕ್ಕೆ ವಂಚಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ" ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆ. 3ರಂದು ಚಾಲನೆ: ಪಾದಯಾತ್ರೆಗೆ ಆಗಸ್ಟ್​​​ 3ರಂದು ಕೆಂಗೇರಿ ಕೆಂಪಮ್ಮ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುವುದು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಹಿರಿಯ ಮುಖಂಡರು ಭಾಗವಹಿಸುತ್ತಾರೆ. ಆ.10ರ ಶನಿವಾರ ಮುಕ್ತಾಯವಾಗಲಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರೂ ಭಾಗವಹಿಸುತ್ತಾರೆ. ಎಲ್ಲ 224 ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ನೂರಾರು ಕೋಟಿ ಜನರ ಹಣ ಲೂಟಿ: ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಮಾತನಾಡಿ, "ಮುಡಾ ಹಗರಣ, ಬೇಲಿಯೇ ಎದ್ದು ಹೊಲವನ್ನು ಮೇಯ್ದ ರೀತಿಯಾಗಿದೆ. ಸದನದಲ್ಲಿ ಚರ್ಚೆ ಮಾಡಲು ಆಗದೇ ಸರ್ಕಾರದವರು ಓಡಿ ಹೋದರು. ಸಿದ್ದರಾಮಯ್ಯ ಭಾವಮೈದುನ 3.16 ಎಕರೆ ಜಮೀನನ್ನು ಅತಿ ಕಡಿಮೆ ಬೆಲೆಗೆ ಪಡೆದಿದ್ದಾರೆ. ಇದೇನಾ ನಿಮ್ಮ ಜನಪರತೆ. ಮುಡಾ ವಶಕ್ಕೆ ಪಡೆದಿದ್ದ ಜಾಗವನ್ನು ಖರೀದಿಸಲಾಗಿತ್ತು. ನಾನು ಇಂತಹದ್ದೇ ಜಾಗದಲ್ಲಿ ಸೈಟ್ ಕೊಡಿ ಎಂದು ಕೇಳಿದ್ನಾ ಅಂತ ಸಿಎಂ ಹೇಳ್ತಾರೆ. ಅವರ ಜಮೀನು ಒತ್ತುವರಿ ಮಾಡಿರೋದು ಒಂದು ಕಡೆ. ಆದರೆ, ಅವರಿಗೆ ಸೈಟ್ ಕೊಟ್ಟಿರುವುದು ಮೈಸೂರಿನ ಮಧ್ಯಭಾಗದಲ್ಲಿ. ಆದರೆ, ಅವರ ಜಮೀನು ತೆಗೆದುಕೊಂಡಿರೋ ಸ್ಥಳದಲ್ಲಿ ಇನ್ನೂ ಸೈಟ್‌ಗಳು ಇವೆ. ಇದನ್ನು ನೋಡಿದರೆ ಲೂಟಿ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯ ಲೂಟಿ ರಾಮಯ್ಯ. ನೂರಾರು ಕೋಟಿ ಜನರ ಹಣ ಲೂಟಿ ಮಾಡಿದ್ದಾರೆ. ಇದು ದೊಡ್ಡ ಭ್ರಷ್ಟಾಚಾರ." ಎಂದು ಕಿಡಿಕಾರಿದರು.

"ಸರ್ಕಾರದಲ್ಲಿ ಒಂದು ವಿಕೆಟ್ ಬಿದ್ದಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ಕೂಡ ಪಡೆಯಬೇಕು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪ್ರತಿದಿನ ಭ್ರಷ್ಟಾಚಾರ ಸುದ್ದಿ ಬರುತ್ತಿದೆ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನೋಡುತ್ತಿದ್ದೇವೆ. ಬಡವರಿಗೆ ಸೈಟ್ ಕೊಡಲು ಮಹಾರಾಜರು ಈ ಮುಡಾ ಆರಂಭ ಮಾಡಿದ್ರು. ಮನೆ ಮಾದೇಗೌಡ್ರು ಪ್ರತಿಯೊಬ್ಬರಿಗೂ ನಿವೇಶನ ಹಂಚಿದ್ದರು. ಸಿದ್ದರಾಮಯ್ಯ ಬಡ್ಡಿ ಸಮೇತ 14 ಸೈಟ್ ತೆಗೆದುಕೊಂಡಿದ್ದಾರೆ. ಬೇರೆಯವರಿಗೆ ಇನ್ನು ಸೈಟ್ ಕೊಟ್ಟಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಸೈಟ್ ನೀಡಿದ್ದಾರೆ. ದೇವಸ್ಥಾನದ ಜಮೀನು ತೆಗೆದುಕೊಂಡು ಚಲುವರಾಯಸ್ವಾಮಿ ದೇವರಿಗೂ ನಾಮ ಇಟ್ಟಿದ್ದಾರೆ" ಎಂದು ಟೀಕಿಸಿದರು.

ಹಗರಣ ಬಯಲಿಗೆಳೆಯಲು ಪಾದಯಾತ್ರೆ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಮಾತನಾಡಿ, "ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಗೆ ಸತ್ಯದ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಎನ್‍ಡಿಎ ವತಿಯಿಂದ ಪಾದಯಾತ್ರೆ ಮಾಡುತ್ತೇವೆ. ವಿವಿಧ ಹಗರಣಗಳ ಕುರಿತು ಸರ್ಕಾರವು ನಮಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ಅವಕಾಶ ಕೊಟ್ಟಿಲ್ಲ. ಸರ್ಕಾರಕ್ಕೆ ಸತ್ಯವನ್ನು ಎದುರಿಸುವ ಧಮ್ ಇದ್ದಿದ್ದರೆ ಅವರು ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿದ್ದರು. ಮುಡ ಹಗರಣ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಸೇರಿ ಎಲ್ಲ ಅವ್ಯವಹಾರಗಳನ್ನು ಜನರಿಗೆ ತಿಳಿಸುತ್ತೇವೆ. ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ." ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಯಿಂದ ಬ್ಲ್ಯಾಕ್​ಮೇಲ್ ತಂತ್ರ: ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.