ETV Bharat / state

ಮುಡಾ ಸದ್ದು: ಉಭಯ ಸದನದಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರಿಕೆ - MUDA scam

author img

By ETV Bharat Karnataka Team

Published : Jul 25, 2024, 12:19 PM IST

Updated : Jul 25, 2024, 1:16 PM IST

ಮುಡಾ ಹಗರಣ ಪ್ರಕರಣ ಆರೋಪ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿವೆ.

ಸದನದಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರಿಕೆ
ಸದನದಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರಿಕೆ (ETV Bharat)

ಬೆಂಗಳೂರು: ಮೈಸೂರಿನ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಪ್ರತಿಪಕ್ಷಗಳು ಇಂದೂ ಕೂಡ ವಿಧಾನ ಮಂಡಲ ಅಧಿವೇಶನದಲ್ಲಿ ಧರಣಿ ಮುಂದುವರಿಸಿದ್ದರಿಂದ ಕಲಾಪದಲ್ಲಿ ಗದ್ದಲ್ಲ ಉಂಟಾಯಿತು.

ವಿಧಾನಸಭೆಯಲ್ಲಿ ಇಂದು ಬೆಳಗ್ಗೆ ಸದನ ಆರಂಭಗೊಂಡ ಕೂಡಲೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಈ ನಡುವೆ ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಸದನದ ಕಾರ್ಯಕಲಾಪವನ್ನು ಹತ್ತು ನಿಮಿಷ ಮುಂದೂಡಲಾಗಿತ್ತು. ಮತ್ತೆ ಸದನ ಸೇರಿದಾಗ, ಪ್ರತಿಪಕ್ಷಗಳ ಶಾಸಕರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಹಾಗೂ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್ ಅವರಲ್ಲಿ ಮನವಿಪೂರ್ವಕ ಆಗ್ರಹ ಮಾಡಿದರು. ಆದರೆ ಪ್ರತಿಪಕ್ಷಗಳ ಆಗ್ರಹಕ್ಕೆ ಕಿವಿಗೊಡದ ಸ್ಪೀಕರ್ ಕಾರ್ಯಕಲಾಪವನ್ನು ಮುಂದುವರೆಸಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ನಿನ್ನೆ ನೀವು ಸಿಟ್ಟಿನಿಂದಿದ್ದಿರಿ, ಬಿಪಿ ಹೆಚ್ಚಾಗಿರಬಹುದು ಎನ್ನಿಸುತ್ತಿತ್ತು. ಹೀಗಾಗಿ ನಮ್ಮ ಮಾತನ್ನು ನೀವು ಕೇಳಿಸಿಕೊಳ್ಳಲಿಲ್ಲ. ಇಂದು ಲವಲವಿಕೆಯಿಂದ ಕಾಣುತ್ತಿದ್ದೀರಿ. ಇಂದಾದರೂ ನಮ್ಮ ಕೋರಿಕೆಗೆ ಅವಕಾಶ ಮಾಡಿಕೊಡಿ ಸ್ಪೀಕರ್ ಅವರನ್ನು ಕೋರಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ನಿಯಮಾವಳಿ ಬಿಟ್ಟು ಸದನ ನಡೆಸಲು ಆಗುವುದಿಲ್ಲ. ಪ್ರತಿಪಕ್ಷದ ಕಡೆ ಹಿರಿಯ ಶಾಸಕರು ಸಾಕಷ್ಟಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಒಮ್ಮೆ ನಿಲುವಳಿ ಸೂಚನೆ ಪ್ರಸ್ತಾಪವನ್ನು ತಿರಸ್ಕಾರ ಆಗಿದೆ. ಮತ್ತೆ ಇದರ ಬಗ್ಗೆ ಚರ್ಚೆಗೆ ಅವಕಾಶವಿಲ್ಲ. ಸಭಾಧ್ಯಕ್ಷ ರೂಲಿಂಗ್ ಅನ್ನು ಮರುಪರಿಶೀಲನೆಗೂ ಅವಕಾಶವಿಲ್ಲ ಎಂದರು.

ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಧರಣಿ ಕೈಬಿಟ್ಟು ನಿಮ್ಮ ನಿಮ್ಮ ಸ್ಥಾನಗಳಿಗೆ ಹೋಗಿ, ಸದನ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಿ. ಈಗಾಗಲೇ ನೀವು ನೀಡಿದ ನೋಟೀಸ್ ಗೆ ರೂಲಿಂಗ್ ನೀಡಲಾಗಿದೆ. ಕಾರ್ಯ ಕಲಾಪ ಪಟ್ಟಿಯಂತೆ ಸದನ ನಡೆಸಬೇಕಿದೆ ಎಂದು ಮನವಿ ಮಾಡಿದರು. ಪ್ರತಿಪಕ್ಷಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿದ್ದರಿಂದ ಸದನದ ಕಾರ್ಯಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.

ಮತ್ತೆ ಸದನ ಸೇರಿದಾಗಲೂ ಧರಣಿ ನಿರತ ಶಾಸಕರು ಘೋಷಣೆ ಕೂಗಿ ಗದ್ದಲ ಉಂಟು ಮಾಡುತ್ತಿದ್ದರೆ, ಸ್ಪೀಕರ್ ಅವರು ಕಾರ್ಯಕಲಾಪಗಳ ಪಟ್ಟಿ ಪ್ರಕಾರ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಮಂಡನೆ, ವರದಿ ಹಾಗೂ ಅರ್ಜಿಗಳನ್ನು ಒಪ್ಪಿಸಲು ಹಾಗೂ ಚುನಾವಣಾ ಪ್ರಸ್ತಾಪ ಮಂಡಿಸಲು ಅವಕಾಶ ಮಾಡಿಕೊಟ್ಟು ಬಳಿಕ ಶಾಸನ ರಚನಾ ಕಲಾಪಕ್ಕೆ ಅನುವು ಮಾಡಿಕೊಟ್ಟರು. ವಿಧೇಯಕಗಳ ಅನುಮೋದನೆಗೊಂಡ ನಂತರ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2.30 ಕ್ಕೆ ಮುಂದೂಡಿದರು.

ಮೈಸೂರಿನ ಮುಡಾ ಹಗರಣ ಆರೋಪ ಕುರಿತ ಚರ್ಚೆಗೆ ಅವಕಾಶ ನಿರಾಕರಿಸಿದ್ದ ರೂಲಿಂಗ್​​ಅನ್ನು ಮರುಪರಿಶೀಲಿಸಲು ಬಿಜೆಪಿ ಜೆಡಿಎಸ್ ನೀಡಿದ್ದ ಕೋರಿಕೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ಮತ್ತೊಮ್ಮೆ ರೂಲಿಂಗ್ ನೀಡಿದರು. ಇದರಿಂದಾಗಿ ಬಿಜೆಪಿ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಯಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ ಟಿ ರವಿ, ಸಿಎಂ ಹುಲಿಯಾ ಆದರೆ ಚರ್ಚೆಗೆ ಅವಕಾಶ ನೀಡುತ್ತಾರೆ, ಇಲ್ಲದಿದ್ದರೆ ಇಲಿಯಾ ಆಗಲಿದ್ದಾರೆ. ಆದರೆ ಸಿಎಂ ಓಡಿ ಹೋಗುವವರಲ್ಲ, ಚರ್ಚೆಗೆ ಅವಕಾಶ ನೀಡಿ ಎಂದು ನಿಮಗೂ ಅವರು ಸಲಹೆ ನೀಡಲಿದ್ದಾರೆ ಎಂದರು.

ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ನಿಮ್ ಮಾತು ಕೇಳಿ ಮರದಲ್ಲಿರುವ ಮಂಗನೂ ಕೈ ಬಿಡ್ತಾವೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಶ್ಯೂ ಅಲ್ಲದೇ ಇರುವುದನ್ನು ಇಶ್ಯೂ ಮಾಡಿದ್ದೀರಿ, ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ, ಕಾನೂನು ರೀತಿ ಎಲ್ಲ ಸರಿ ಇದ್ದರೂ ವಿಷಯ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ನಿವೇಶನ ಕೊಟ್ಟಿದ್ದಾರೆ, ನಾವು ಇಂತಾ ಕಡೆ ಕೊಡಿ ಎಂದು ಕೇಳಿದ್ದೆವಾ? 2021 ರಲ್ಲಿ ಯಾರು ಅಧಿಕಾರದಲ್ಲಿದ್ದರು? ಬಿಜೆಪಿಯವರು ಅಧಿಕಾರದಲ್ಲಿದ್ದು, ನಿಮ್ಮ ಕಾಲದಲ್ಲಿ ಮಾಡಿದ ತಪ್ಪು ಅದು. ‌ಮುಡಾದವರು ಮಾಡಿಕೊಟ್ಟಿದ್ದಾರೆ, ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ. ಹಾಗಾಗಿ ಸಭಾಪತಿ ಚರ್ಚೆಗೆ ಅವಕಾಶ ನಿರಾಕರಿಸಿದ್ದು ಸರಿಯಾಗಿದೆ. ಚರ್ಚೆಗೆ ಅವಕಾಶವಿಲ್ಲ, ಸರಿಯಾದ ತೀರ್ಮಾನವಾಗಿದೆ ಎಂದು ಸಮರ್ಥಿಸಿಕೊಂಡರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಹೇಳಿಕೆಗೆ ಆಕ್ಷೇಪಿಸಿದರು. ಸಿಎಂ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ, ಇಲ್ಲಿ ಎಲ್ಲಿ ವೈಯಕ್ತಿಕ ಇದೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಾವು ಅರ್ಜಿ ಕೊಟ್ಟಿದ್ದೆವು, ಮುಡಾದವರು ಕೊಟ್ಟಿದ್ದಾರೆ, ಯಾರು ಅಧಿಕಾರದಲ್ಲಿದ್ದವರು? ನೀವು ಮಾಡಿದ ತಪ್ಪು ಅದು, ವಿಜಯನಗರದಲ್ಲೇ ಕೊಡಿ, ಅಲ್ಲಿಯೇ ಕೊಡಿ, ಇಲ್ಲಿಯೇ ಕೊಡಿ ಎಂದು ನಾವು ಕೇಳಿಲ್ಲ. ಜಮೀನು ಕಳೆದುಕೊಂಡಿದ್ದೇವೆ, ನಿವೇಶನ ಕೊಡಿ ಎಂದಷ್ಟೇ ಕೇಳಿದ್ದೆವು. ಶೇ.50 ರ ಅನುಪಾತದಂತೆ ನಿವೇಶನಕ್ಕೆ ಒಪ್ಪಿ ಪಡೆದುಕೊಂಡಿದ್ದೇವೆ, ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ನಾನ್ ಇಶ್ಯೂನ ಇಶ್ಯೂ ಮಾಡುತ್ತಿರುವುದನ್ನು ಖಂಡಿಸುತ್ತೇನೆ, ಸಚಿವನಾಗಿ ನಾನು 40 ವರ್ಷವಾಗಿದೆ ಈವರೆಗೂ ಒಂದು ಕಪ್ಪುಚುಕ್ಕೆ ಇಲ್ಲ, ಅವರಿಗೆ ಹೊಟ್ಟೆ ಕಿಚ್ಚು ಹೊಟ್ಟೆ ಉರಿ ಅದಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಂತಿಮವಾಗಿ ಸಭಾಪತಿ ಬಸವರಾಜ ಹೊರಟ್ಟಿ, ಮುಡಾ ನಿವೇಶನ ಹಂಚಿಕೆ ಅವ್ಯವಹಾರ ಆರೋಪ ಕುರಿತು ಬಿಜೆಪಿ ನಿಲುವಳಿ ಮಂಡಿಸಿದ್ದು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಆಯೋಗ ರಚನೆ ಹಿನ್ನೆಲೆ ಚರ್ಚೆಗೆ ಅವಕಾಶ ನಿರಾಕರಿಸಲಾಗಿದೆ. ನಂತರ ಮರುಪರಿಶೀಲನೆಗೆ ಅವಕಾಶ ಕೋರಿದ್ದರು, ಆದರೆ ಇತ್ತೀಚೆಗೆ ನಡೆದ ನಿರ್ದಿಷ್ಟ ಘಟನೆಯಲ್ಲದ ಕಾರಣ ಚರ್ಚೆಗೆ ಅವಕಾಶ ನಿರಾಕರಿಸಲಾಗಿದೆ‌ ಎಂದು ಮತ್ತೊಮ್ಮೆ ಚರ್ಚೆಗೆ ಅವಕಾಶ ನಿರಾಕರಿಸಿ ರೂಲಿಂಗ್ ನೀಡಿದರು.

ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ: ಮುಡಾ 'ಹಗರಣ': ಸದನದಲ್ಲೇ ಮಲಗಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ; ಭಜನೆ, ಅಂತ್ಯಾಕ್ಷರಿ ಹಾಡಿದ ಶಾಸಕರು - BJP JDS Night Long Protest

Last Updated : Jul 25, 2024, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.