ETV Bharat / state

ಸರ್ಕಾರದ ಪತನಕ್ಕೆ ಕೌಂಟ್​ಡೌನ್ ಶುರು, ಕಾಂಗ್ರೆಸ್ ಶಾಸಕರೇ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ: ಆರ್ ಅಶೋಕ್ - R Ashok - R ASHOK

ಕಾಂಗ್ರೆಸ್​ ಸರ್ಕಾರದ ಪತನದ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿದರು.

opposition-leader-r-ashok
ಪ್ರತಿಪಕ್ಷದ ನಾಯಕ ಆರ್. ಅಶೋಕ್ (ETV Bharat)
author img

By ETV Bharat Karnataka Team

Published : May 20, 2024, 4:51 PM IST

ಪ್ರತಿಪಕ್ಷದ ನಾಯಕ ಆರ್. ಅಶೋಕ್ (ETV Bharat)

ಬೆಂಗಳೂರು : ವರ್ಷದ ಸಂಭ್ರಮದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಕಾಂಗ್ರೆಸ್ ಶಾಸಕರೇ ಈ ಸರ್ಕಾರವನ್ನು ಬೀಳಿಸಲಿದ್ದಾರೆ. ಅವರ ಶಾಸಕರೇ ಸರ್ಕಾರ ಪತನದ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಿದ್ದರಾಮಯ್ಯ ಸರ್ಕಾರದ ಪತನದ ಭವಿಷ್ಯ ನುಡಿದಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಪೂರ್ಣ ಬಹುಮತ ಇದೆ. ಅವರಲ್ಲಿ135 ಶಾಸಕರಿದ್ದಾರೆ. ಈಗಾಗಲೇ ಮೊನ್ನೆ ಕಾಂಗ್ರೆಸ್ ಸಭೆ ನಡೆದಾಗ ಒಂದು ವರ್ಷ ಆಗಿದೆ. ಶಾಸಕರು ಬೇಜಾರು ಮಾಡಿಕೊಳ್ಳಬೇಡಿ ನೀತಿ ಸಂಹಿತೆ ಮುಗಿದ ತಕ್ಷಣ ಹಣ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಆ ಮೂಲಕ ಒಂದು ವರ್ಷ ಯಾವುದೇ ಅಭಿವೃದ್ಧಿ ಆಗಿಲ್ಲ. ಶಾಸಕರಿಗೆ ಅನುದಾನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.

ಹಾಗಾಗಿ ಈ ಸರ್ಕಾರವನ್ನು ಅವರ ಪಕ್ಷದವರೇ ಬೀಳಿಸಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಬೆಳಗಾವಿ ಹತ್ತಿರವಿದೆ. ಅವರು ಮಾಹಿತಿ ಪಡೆದುಕೊಂಡೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನದ ಕುರಿತು ಹೇಳಿಕೆ ನೀಡಿರಬಹುದು. ಅವರ ಮಾತು ಸತ್ಯವಾಗಬಹುದು. ಈಗಾಗಲೇ ಈ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೌಂಟ್​ಡೌನ್ ಶುರುವಾಗಿದೆ. ಮುಹೂರ್ತ ಫಿಕ್ಸ್ ಮಾಡುವುದಕ್ಕೆ ಕಾಂಗ್ರೆಸ್​ನ ಶಾಸಕರೇ ಸಿದ್ದರಾಗಿದ್ದಾರೆ. ಸಮಯ ಬಂದಾಗ ಅದನ್ನೆಲ್ಲಾ ಹೇಳುತ್ತೇನೆ ಎಂದರು.

ದೇಶದಲ್ಲಿ ಮೋದಿ ಪರ ಮತದಾರರ ಒಲವಿದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದು ಖಚಿತ. ಸೋಲಿನ ಕುರಿತು ಈಗಾಗಲೇ ಮಾಹಿತಿ ಸಿಕ್ಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ವಿದೇಶಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಫಲಿತಾಂಶ ಬರುತ್ತಿದ್ದಂತೆ ಅವರು ವಿದೇಶಕ್ಕೆ ಹಾರಲಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಹೇಳಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿಯಾಗಿದೆ. ಈ ಸರ್ಕಾರದ ಮೇಲೆ ಆಪಾದನೆ ಬಂದಿದೆ. ಈ ಸರ್ಕಾರದ ಎಸ್ಐಟಿ ಸರ್ಕಾರದ ಪ್ರಾಯೋಜಿತವಾಗಿದೆ. ಹಾಗಾಗಿ ಸಿಬಿಐ ತನಿಖೆಗೆ ಕೊಡಬೇಕು. ಈ ರಾಜ್ಯದಲ್ಲಿ ಕಾಂಗ್ರೆಸ್ ಸಾಕಷ್ಟು ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದರು.

ಹಿಂದೆ ಪರಮೇಶ್ವರ್ ಸಿಎಂ ಆಗಬೇಕಾಗಿತ್ತು. ಅವರನ್ನು ಸೋಲಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ದಲಿತರಿಗೆ ಅನ್ಯಾಯ ಮಾಡಿದರು. ವೀರೇಂದ್ರ ಪಾಟೀಲರು ಸಿಎಂ ಆಗಿದ್ದಾಗ ಅವರನ್ನು ಹೀನಾಯವಾಗಿ ನಡೆಸಿಕೊಂಡು ಕೆಳಗಿಳಿಸಿ ಲಿಂಗಾಯತರಿಗೆ ಅವಮಾನ ಮಾಡಿದರು. ಈಗ ನೆಕ್ಸ್ಟ್ ಟಾರ್ಗೆಟ್ ಇರುವುದು ಒಕ್ಕಲಿಗರು ಎಂದು ಹೇಳಿದರು.

ಒಕ್ಕಲಿಗ ಜನಾಂಗಕ್ಕೆ ಅನ್ಯಾಯ ಮಾಡಬೇಕು, ಜನಾಂಗದ ನಾಯಕ ಯಾರು ಎಂದರೆ ಅದು ದೇವೇಗೌಡರು. ಹಾಗಾಗಿ ಅವರು ಸಾಯಲಿ, ಆತ್ಮಹತ್ಯೆ ಮಾಡಿಕೊಳ್ಳಲಿ, ಇನ್ನು ಸಾಯಲಿಲ್ಲವಲ್ಲ ಎಂದು ಮಾಡಿಸುತ್ತಿರುವುದು ಯಾರು? ಎಂದು ಗೊತ್ತಿದೆ. ಇದೆಲ್ಲವೂ ಕಾಂಗ್ರೆಸ್ ಕುತಂತ್ರ. ಒಂದೊಂದೇ ಜಾತಿ ಮುಗಿಸುವ ಮುಖಾಂತರ ಸಿದ್ದರಾಮಯ್ಯ ಅವರ ಚಾಳಿಯನ್ನು ಬಿಟ್ಟಿಲ್ಲ ಎನ್ನುವುದು ಕಾಣುತ್ತಿದೆ. ಒಕ್ಕಲಿಗರ ವಿರೋಧ ಮಾಡುವ ಹುನ್ನಾರ ಈ ಪ್ರಕರಣದ ಹಿಂದೆ ಇದೆ ಎಂದು ಆರೋಪಿಸಿದರು.

ಸಿಎಂ ಧನ್ಯವಾದಕ್ಕೆ ಅಶೋಕ್ ಟೀಕೆ : ವರ್ಷದ ಸಾಧನೆಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಕರ್ನಾಟಕದಲ್ಲಿ ಆಗುತ್ತಿರುವ ಕೊಲೆಗಳ ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರೋ ಅಥವಾ ನಮ್ಮ ಸರ್ಕಾರದ ಅವಧಿ ಮುಗಿಯಿತು. ಟಾಟಾ, ಬಾಯ್ ಬಾಯ್ ಎಂದಿದ್ದಾರೋ ಗೊತ್ತಿಲ್ಲ. ಅವರ ಸರ್ಕಾರದ ಕೊನೆ ಕ್ಷಣದ ಮುಖವಾಣಿ ಅವರ ಮುಖದಲ್ಲಿ ಕಾಣಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಕಾಂಗ್ರೆಸ್​ಗೆ ವರ್ಷದ ಸಂಭ್ರಮವಾದರೆ ಖಜಾನೆ ಫುಲ್ ಕ್ಲಿಯರ್. ಸರ್ಕಾರಕ್ಕೆ ವರ್ಷ ಸಮಸ್ಯೆಗಳು ನೂರೊಂದು. ಸರ್ಕಾರ ಬಂದು ಜನರ ಮುಖದಲ್ಲಿ ಹರ್ಷವಿಲ್ಲ. ವರ್ಷಕ್ಕೆ ಲೂಟಿ ಎಷ್ಟು ಎಂದು ಜನ ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನ, ಅಂಜಲಿ ಆಯ್ತು ಮುಂದೆ ಯಾರು ಎನ್ನುವ ಸ್ಥಿತಿ ಇದೆ. ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ. ಮನೆಯಿಂದ ಹೊರ ಬಂದರೆ ಗ್ಯಾರಂಟಿ ಇಲ್ಲ. ನಿಶ್ಚಿತಾರ್ಥವಾದರೂ ಗ್ಯಾರಂಟಿ ಇಲ್ಲ. ಮಹಿಳೆಯರಿಗೆ ಕೊಲೆ ಭಾಗ್ಯ ನೀಡಿದೆ ಎಂದರು.

ಮಹಿಳೆಯರ ಬದುಕುವ ಅವಕಾಶವನ್ನು ಸರ್ಕಾರ ಕಿತ್ತುಕೊಂಡು ಯಾವ ಗ್ಯಾರಂಟಿ ಕೊಟ್ಟು ಏನು ಭಾಗ್ಯ? ಅಂಜಲಿ ಕೊಲೆ ಕೇಸ್​ನಲ್ಲಿ ಪೊಲೀಸ್ ಲೋಪವಿದೆ ಎಂದು ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ನಿಮಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇದೆಯಾ? ಗೃಹ ಇಲಾಖೆಯನ್ನು ಮೋದಿ ನಿರ್ವಹಿಸುತ್ತಿದ್ದಾರಾ? ವರ್ಷದಲ್ಲಿ ನೀವು ಮಾಡಿದ್ದೇನು? ಗೃಹ ಇಲಾಖೆ ಜವಾಬ್ದಾರಿ ಯಾರಿಗಿದೆ?. ಯಾರು ಯಾರೋ ನಿರ್ವಹಣೆ ಮಾಡುತ್ತಿದ್ದಾರೆ ಎನ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದು ನಮ್ಮ ಸರ್ಕಾರ ಎಂದು ಅಲ್ಪಸಂಖ್ಯಾತರು ತಿಳಿದುಕೊಂಡಿದ್ದಾರೆ. ಹಾಗಾದರೆ ಬೇರೆ ಸಮುದಾಯಕ್ಕೆ ಬದುಕುವ ಹಕ್ಕಿಲ್ಲವೇ? ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಹಲ್ಲೆ ಮಾಡುತ್ತಾರೆ ಆಯಿಷಾ ತಾಜ್, ಅರ್ಬಿದಾ ಮತ್ತೊಬ್ಬರು ಸೇರಿ ಜ್ಞಾನಭಾರತಿ ಠಾಣೆಯ ಸಬ್​ ಇನ್ಸ್​ಪೆಕ್ಟರ್ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಇದು ಪೊಲೀಸರನ್ನು ಹೊಡೆಯುವ ಫ್ರೀ ಭಾಗ್ಯವೇ? ಅಂಜಲಿ ಸಹೋದರಿ ಈ ಸರ್ಕಾರಕ್ಕೇ ನೇಣಿಗೇರಿಸಬೇಕು ಎಂದಿದ್ದಾರೆ. ಇದನ್ನೇ ನಾನು ಆಗ್ರಹ ಮಾಡುತ್ತೇನೆ ಎಂದರು.

ದೇಶದ ಗಡಿಯಲ್ಲಿ ಪಾಕ್ ಜಿಂದಾಬಾದ್ ಎನ್ನುತ್ತಿದ್ದರು. ಆದರೆ ಈಗ ವಿಧಾನಸೌಧದಲ್ಲಿಯೂ ಘೋಷಣೆ ಹಾಕಲು ಅನುಮತಿಸಿದ್ದಾರೆ. ಅಲ್ಲಾ ಹೋ ಅಕ್ಬರ್ ಎನ್ನದಿದ್ದಕ್ಕೆ ಹಲ್ಲೆಯಾಗಿದೆ. ಹನುಮಾನ್ ಚಾಲಿಸ್ ಹಾಕಿದ್ದಕ್ಕೆ ಹಲ್ಲೆಯಾಗಿದೆ. ಈ ಸರ್ಕಾರ ಬಂದು ವರ್ಷವಾಯಿತು. ಮಗು ಕೂಡ ಹುಟ್ಟಿದ ವರ್ಷದಲ್ಲಿ ಅಂಬೆಗಾಲಿಡಲಿದೆ. ಆದರೆ ಈ ಸರ್ಕಾರ ಅಂಬೆಗಾಲನ್ನೂ ಇಡುತ್ತಿಲ್ಲ. ಟೇಕ್ ಆಫ್ ಕೂಡ ಆಗಿಲ್ಲ ಎಂದು ಲೇವಡಿ ಮಾಡಿದರು.

ಅಭಿವೃದ್ಧಿ ಇಲ್ಲದ ಗ್ಯಾರಂಟಿ: ಅಭಿವೃದ್ಧಿ ಇಲ್ಲದ ಗ್ಯಾರಂಟಿ ಸರ್ಕಾರ ಇದು. ರಸ್ತೆ ಆಗಿಲ್ಲ, ಸೇತುವೆ ಇಲ್ಲ. ನೀರಾವರಿ ಯೋಜನೆ ಇಲ್ಲ, ಅಭಿವೃದ್ಧಿ ಕನಸಿನ ಗೂಡಾಗಿದೆ. ಸಚಿವರು ದಿಮಾಕಿನಿಂದ ವರ್ತಿಸುತ್ತಾರೆ. ಸವಲತ್ತು ಕೇಳಿದರೆ ಎರಡು ಸಾವಿರ ಕೊಟ್ಟಿಲ್ಲವೇ? ಎನ್ನುತ್ತಿದ್ದಾರೆ. ಶಾಲಾ ಕಟ್ಟಡ ದುರಸ್ತಿ ಇಲ್ಲ, ಕಟ್ಟಡ ಇಲ್ಲದಿದ್ದರೆ ಮರದ ಕೆಳಗೆ ಪಾಠ ಮಾಡಿ ಎನ್ನುತ್ತಿದೆ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್ ಆಗಿದೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಐಸಿಯು ಅಲ್ಲ ವೆಂಟಿಲೇಟರ್​ನಲ್ಲಿದೆ. ಆದಾಯ ಶೇ. 30ರಷ್ಟು ಕಡಿಮೆಯಾಗಿದೆ. ಸಾಲ ಹೆಚ್ಚಾಗಿದೆ. ಒಂದು ಲಕ್ಷಕೋಟಿ ಸಾಲ ಮಾಡಲಾಗಿದೆ. ಸಾಲ ತೀರಿಸಲು ಮುಂದಿನ ವರ್ಷ ಎರಡು ಲಕ್ಷ ಕೋಟಿ ಸಾಲ ಮಾಡುವ ಸ್ಥಿತಿಗೆ ತಂದಿದ್ದಾರೆ. ಇದು ಲೂಟಿ ಸರ್ಕಾರ ಎಂದು ಟೀಕಿಸಿದರು.

ಬರದ ವಿಚಾರವನ್ನು ಸುಪ್ರೀಂ ಕೋರ್ಟ್​ವರೆಗೂ ತೆಗೆದುಕೊಂಡು ಹೋದರು. 3500 ಕೋಟಿ ಬರಕ್ಕೆ ಕೊಡಲಾಗಿದೆ. ಇಷ್ಟು ಹಣ ಯಾವಾಗಲೂ ಕೊಟ್ಟಿರಲಿಲ್ಲ. ಆದರೆ ಈ ಸರ್ಕಾರ ಇನ್ನು 2 ಲಕ್ಷ ರೈತರಿಗೆ ಹಣ ತಲುಪಿಸಿಲ್ಲ. ಈ ಹಣ ಬೇರೆ ಕಡೆ ಬಳಸಿಕೊಳ್ಳಲಾಗಿದೆ. 300 ರೂ. 500 ರೂ. 600 ರೂ. ಈ ರೀತಿ ಬರ ಪರಿಹಾರ ನೀಡಲಾಗಿದೆ. ಕೇಂದ್ರ ಪರಿಹಾರ ಕೊಟ್ಟಿದೆ. ಈಗ ನಿಮ್ಮ ಪಾಲೆಷ್ಟು?. ಇವರು ನಮ್ಮ ರೈತರು. ಗುಜರಾತ್ ರೈತರಲ್ಲ. ವಯನಾಡ್ ಆನೆ ಸಾವಾದರೆ ಕರ್ನಾಟಕದಿಂದ 15 ಲಕ್ಷ ಕಳಿಸುತ್ತೀರಾ. ಕರ್ನಾಟಕದ ರೈತರಿಗೆ ಹಣ ಎಷ್ಟು ಕೊಟ್ಟಿದ್ದೀರಿ?. ನಯಾ ಪೈಸೆ ಕೊಡದಿದ್ದರೂ ಕೇಂದ್ರದ ಹಣವನ್ನೂ ಕಟ್ ಮಾಡುತ್ತಿದ್ದಾರೆ. ಬೆಳೆ ಬೆಳೆಯದಂತೆ ಹೇಳಿ ಈಗ ಪರಿಹಾರ ಕೊಡಲ್ಲ ಎನ್ನುತ್ತಿದ್ದೀರಲ್ಲ, ನಿಮ್ಮ ಸರ್ಕಾರ ಬುದುಕಿದ್ದರೆಷ್ಟು ಸತ್ತರೆಷ್ಟು? ಎಂದು ಹರಿಹಾಯ್ದರು.

ಒಳ್ಳೆಯ ಕನ್ನಡ ಬರುವ ಶಿಕ್ಷಣ ಸಚಿವರ ನೇಮಿಸಿದ್ದಕ್ಕೆ ಸಿಎಂಗೆ ಅಭಿನಂದನೆ ಎಂದು ವ್ಯಂಗ್ಯವಾಡಿದ ಅಶೋಕ್, ಕನ್ನಡ ಬರಲ್ಲ ಟ್ರೋಲ್ ಮಾಡಬೇಡಿ ಎಂದು ಶಿಕ್ಷಣ ಸಚಿವರೇ ಹೇಳಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಬರ ಬಂದಿದೆ. ಸಿದ್ದರಾಮಯ್ಯ ಮತ್ತು ಬರಕ್ಕೆ ಏನೋ ಸಂಬಂಧ ಇದೆ. ಆದರೆ ಈ ಬಾರಿ ಎಸ್ಎಸ್ಎಲ್​ಸಿ ಪಾಸಾಗಲೂ ಬರ, ಮಾರ್ಕ್ಸ್ ಗೂ ಬರ ಬಂದಿದೆ. 25 ಪರ್ಸೆಂಟ್ ಬಂದರೆ ಪಾಸ್. ಮುಂದಿನ ವರ್ಷ 100 ಅಂಕ ಕೃಪಾಂಕ ಕೊಡಿ. ಓದನ್ನೂ ಫ್ರೀ ಮಾಡಿ. ಓದದೆ ಪಾಸು ಮಾಡಿ. ಮಕ್ಕಳು ಕೇಳಿದಷ್ಟು ಅಂಕ ಕೊಟ್ಟುಬಿಡಿ. ಓದಿಗೆ ಬೆಲೆ ಇಲ್ಲವಾಗಿದೆ. ಕಷ್ಟಪಟ್ಟು ಓದಿದವರಿಗೆ ಏನು ಬೆಲೆ ಇದೆ? ಸಿಇಟಿಯಲ್ಲಿಯೂ ಅದ್ವಾನ ಮಾಡಲಾಗಿದೆ. ಔಟ್ ಆಫ್ ಸಿಲಬಸ್ ಪ್ರಶ್ನೆ ಕೊಡಲಾಗಿದೆ. ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ: ಈ ಸರ್ಕಾರ ಶಿಕ್ಷಣ ಇಲಾಖೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ಕುವೆಂಪು ಸಾಲು ತೆಗೆದುಹಾಕಿ, ಮಣಿವಣ್ಣನ್​ರ ’ಧೈರ್ಯವಾಗಿ ಪ್ರಶ್ನಿಸಿ’ ಸಾಲು ಹಾಕಿದರು. ಒಂದು ಮಂದಿರ ಕಟ್ಟಿದರೆ ನೂರು ಭಿಕ್ಷಕರು ಬರುತ್ತಾರೆ ಎಂದು ಹಾಕಿದರು. ಅದು ಸರಿ ಆದರೆ ಚರ್ಚ್, ಮಸೀದಿ ಕಟ್ಟಿದರೆ ಎಷ್ಟು ಭಿಕ್ಷಕರು ಹುಟ್ಟುತ್ತಾರೆ? ಸರ್ವ ಜನಾಂಗದ ಶಾಂತಿಯ ತೋಟವನ್ನು ಅಶಾಂತಿಯ ತೋಟ ಮಾಡುತ್ತಿದ್ದಾರೆ ಎಂದರು.

ಬ್ರ್ಯಾಂಡ್ ಬೆಂಗಳೂರು ಎಂದರು. ಈಗ ಅದು ಬ್ಯಾಡ್ ಬೆಂಗಳೂರು ಆಗಿದೆ. ಸುರಂಗ ಮಾರ್ಗ ಎಂದಿರಿ. ಟನಲ್ ಎಲ್ಲಿಗೆ ಮಾಡಿದಿರಿ. ಬಿಲ್ಡರ್​ ಅಡಿಗೆ ನೂರು ರೂ. ಕಾಂಗ್ರೆಸ್ ತೆರಿಗೆ ನಿಗಧಿ ಮಾಡಿದೆ. ಪೊಲೀಸ್ ಠಾಣೆಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಈ ಸರ್ಕಾರ ಬಂದ ನಂತರ ಮುಕ್ತ ಕೊಲೆ ಗ್ಯಾರಂಟಿ. ಸುಲಿಗೆ ಗ್ಯಾರಂಟಿ ಆರಂಭವಾಗಿದ್ದು, ಹೆಣ್ಣುಮಕ್ಕಳಿಗೆ ಬದುಕುವ ಗ್ಯಾರಂಟಿ ಇಲ್ಲವಾಗಿದೆ. ಹಾಗಾಗಿ ಈ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಬೋಗಸ್ ಬಜೆಟ್ ಮಂಡಿಸಿ, ಖಜಾನೆ ಲೂಟಿ ಮಾಡಿದ್ದಾರೆ. ಖಜಾನೆಗಿಲ್ಲ ಭಾಗ್ಯ, ಯಾವಾಗಲೂ ಖಾಲಿ ಖಾಲಿಯಾಗಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಖಾಲಿ ಮಾಡಲಿದ್ದಾರೆ. ಕೊಲೆಗಡುಕರ ಸ್ವರ್ಗವನ್ನಾಗಿ ಮಾಡಿದ್ದೀರಿ. ಯಾವ ಮುಖ ಇಟ್ಟುಕೊಂಡು ಸಾಧನೆ ಬಗ್ಗೆ ಮಾತನಾಡುತ್ತೀರಾ? ನೀವೇ ಸ್ವತಃ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಭಂಡತನದಿಂದ ಉಳಿದುಕೊಂಡಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವರ್ಷದ ಸಾಧನೆ ಕುರಿತು ಶೂನ್ಯ ಸಾಧನೆ ಎನ್ನುವ ಪೋಸ್ಟರ್ ಬಿಡುಗಡೆ ಮಾಡಿದರು.

ಇದನ್ನೂ ಓದಿ : ಗೃಹ ಇಲಾಖೆ ಪರಮೇಶ್ವರ್ ಕೈಯಲ್ಲಿಲ್ಲ, ಬೇರೆ ಯಾರೋ ಹೈಜಾಕ್‌‌ ಮಾಡುತ್ತಿದ್ದಾರೆ: ಆರ್‌.ಅಶೋಕ್ ಆರೋಪ - R AShok Slam Congress

ETV Bharat Logo

Copyright © 2025 Ushodaya Enterprises Pvt. Ltd., All Rights Reserved.