ETV Bharat / state

ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ ರಾಜ್ಯಪಾಲರು ವರದಿ ಕೇಳಿರುವುದು ಸಂತೋಷ: ಛಲವಾದಿ ನಾರಾಯಣಸ್ವಾಮಿ - CA Site Allotment Case - CA SITE ALLOTMENT CASE

ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಸಿಎ ನಿವೇಶನ ಹಂಚಿಕೆ ಕೇಸ್ ಅನ್ನು ಸಾಮಾಜಿಕ ಹೋರಾಟಗಾರ ಮೊದಲು ಹೊರತಂದರು. ಪ್ರತಿಪಕ್ಷದ ನಾಯಕನಾಗಿ ನಾನು ಹೋರಾಟ ಶುರು ಮಾಡಿದೆ ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ (ETV Bharat)
author img

By ETV Bharat Karnataka Team

Published : Sep 2, 2024, 5:52 PM IST

Updated : Sep 2, 2024, 10:01 PM IST

ಛಲವಾದಿ ನಾರಾಯಣಸ್ವಾಮಿ (ETV Bharat)

ಬೆಂಗಳೂರು: ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ ರಾಜ್ಯಪಾಲರು ವರದಿ ಕೇಳಿರುವುದು ಬಹಳ ಸಂತೋಷ. ನಾನು ಒಂದು ಸೈಟ್ ವರದಿ ಕೇಳಿಲ್ಲ. 193 ಸೈಟ್ ವರದಿ ಕೇಳಿದ್ದೇನೆ. 2024 ಫೆ.5 ರಂದು ತರಾತುರಿಯಲ್ಲಿ ಮಾಡಿದ್ದಾರೆ. ಸಾಮಾಜಿಕ ಹೋರಾಟಗಾರ ಇದನ್ನು ಮೊದಲು ಹೊರತಂದ್ರು. ಪ್ರತಿಪಕ್ಷದ ನಾಯಕನಾಗಿ ನಾನು ಹೋರಾಟ ಶುರು ಮಾಡಿದೆ. ಇದರಲ್ಲಿ ಸಚಿವರೊಬ್ಬರು ಇದ್ದಾರೆ ಅನ್ನೋ ಆರೋಪ‌ ಇದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಕೆಹೆಚ್‌ಬಿ ಕಾಲೋನಿಯಲ್ಲೂ ಕೇಳಿ ಬಂದಿದೆ. ಬೆಂಗಳೂರಿನ ಕೆಂಪೇಗೌಡ ಏಪೋರ್ಟ್ ಬಳಿ ಒಂದೇ ಹೆಸರಲ್ಲಿ ಎರಡು ಸೈಟ್ ಕೊಟ್ಟಿದ್ದಾರೆ. ಎಂಎಸ್​ಆರ್ ಅಪಾರ್ಟ್​ಮೆಂಟ್ ಜಾಗ ನೀಡಿದ್ದಾರೆ. ಸಚಿವ ಎಂ.ವಿ.ಪಾಟೀಲ್ ಅವರ ಪುತ್ರ ಅಂತ ಅನುಮಾನ ಇದೆ. ಸಿಎ ಸೈಟ್ ಇಲ್ಲಿ ಹೇಗೆ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

ದಲಿತ ಕುಟುಂಬ ಸೈಟ್ ಪಡೆಯಬೇಕಿತ್ತು. ನಾಲ್ಕೈದು ವರ್ಷಗಳಿಂದ ಹಣ ಕಟ್ಟಿ ಸೈಟಿಗೆ ಕಾಯುತ್ತಿದ್ದಾರೆ. ಸೈಟುಗಳು ಯಾವಾಗಲೂ ಅರ್ಧ ಎಕರೆ, ಮುಕ್ಕಾಲು ಎಕರೆ ಇರುತ್ತದೆ. ಆದರೆ, ಇಲ್ಲಿ ಐದು ಎಕರೆ, ಹತ್ತು ಎಕರೆ ಜಾಗವಿದೆ. ರಾಹುಲ್ ಖರ್ಗೆ ಅವರು ಎಷ್ಟು ಸೈಟ್ ಬೇಕಾದರೂ ಪಡೆಯಲಿ. ನಮ್ಮ ವಿರೋಧ ಇಲ್ಲ. ಆದರೆ, ಕಾನೂನಾತ್ಮಕವಾಗಿ ಪಡೆಯಲಿ. ಬೇರೆಯವರಿಗೆ ಇಷ್ಟು ವರ್ಷಗಳಾದರೂ ಜಾಗ ಸಿಗಲಿಲ್ಲ. ಇವರಿಗೆ ತರಾತುರಿಯಲ್ಲಿ ಹೇಗೆ ಸಿಕ್ಕಿದೆ. ಸಚಿವ ಎಂ.ಬಿ ಪಾಟೀಲ್ ನನ್ನ ಮೇಲೆ ಆರೋಪ ಮಾಡಿದ್ರು. ಏನು ಲೋಪ ಅನ್ನುವುದನ್ನು ಹೇಳಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಎಂ.ಬಿ ಪಾಟೀಲ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ನಾರಾಯಣಸ್ವಾಮಿ: ಎಂ.ಬಿ. ಪಾಟೀಲ್ ಅವರು ಬಬಲೇಶ್ವರದಲ್ಲಿ ಚುನಾವಣೆ ನಿಂತಿದ್ರು. ಬಾಗಮನೆ ಡೆವಲ್ಪರ್ಸ್ ಬಳಿ ನಾಲ್ಕು ಕೋಟಿ ಸಾಲ ಪಡೆದಿರುವುದಾಗಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಬಾಗಮನೆ ಯಾರು ರಾಮಕೃಷ್ಣ ಅನ್ನೋರು, ರಾಜಾ ಬಾಗಮನೆ, ದಂಡಿಗಾನಹಳ್ಳಿ ವೆಂಕಟರಮಣಪ್ಪ ರಾಮಕೃಷ್ಣಪ್ಪ ಮೂವರು ಇದ್ದಾರೆ. ಮೊನ್ನೆ ಜಾಗ ಸ್ಯಾಂಕ್ಷನ್ ಮಾಡಿರೋದು ಯಾರಿಗೆ?. ಎಕರೆಗೆ 10 ರಿಂದ 20 ಕೋಟಿ ಬೆಲೆ‌ ಬಾಳುವ 8 ಎಕರೆ ಜಾಗವನ್ನು ನೀಡಲಾಗಿದೆ. ಮೆಸರ್ಸ್ M/S ವೈ.ಗೈ ಇನ್ವೆಸ್ಟ್‌ಮೆಂಟ್ ಪ್ರೈ. ಲಿ. ಬಾಗಮನೆ ಟೆಕ್ ಪಾರ್ಕ್ ಸಿ.ವಿ ರಾಮನ್ ನಗರ ಅವರ ಮನೆ ಅಡ್ರೆಸ್. ವೈ.ಗೈ ಇನ್ವೆಸ್ಟ್ ಡೆವಲ್ಪರ್ಸ್ ಇಬ್ಬರು ಮಾಲೀಕರು. ಇವರಿಂದ ಸಾಲ ಪಡೆದು, ಅವರಿಗೆ ಜಾಗ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಶೆಡ್ ನಾರಾಯಣಸ್ವಾಮಿ ಅಂದ್ರು, ನೀವೇನು?. ನಿಮ್ಮಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ. ನಾನು ಗೌರವದಿಂದ ಮಾನ್ಯ ಸಚಿವರು ಅಂದೆ. ನಿಮ್ಮ ರೀತಿ ಎಲ್ಲೆ‌ಮೀರಿ, ನಮ್ಮ ಸ್ನೇಹಿತ ಅಂತ‌ ಹೇಳಲಿಲ್ಲ. ಫೆಬ್ರವರಿಯಲ್ಲಿ ಆಗಿರುವ ಸಿ.ಎ ನಿವೇಶನ ಸಂದರ್ಭದಲ್ಲಿ ಆಗಿದೆ. ಮೆಸರ್ಸ್ M/S ಹರಿತಾ ಲಾಜಿಸ್ಟಿಕ್ಸ್ ಪ್ರೈ. ಲಿ. ಈ ಸಂಸ್ಥೆಯವರು ತೆಲಂಗಾಣದವರು. ಇಂಡಸ್ಟ್ರೀಸ್ ಲ್ಯಾಂಡ್​ನಲ್ಲಿ ವೇರ್ ಹೌಸ್ ಕೊಡಬೇಕು. ಆದರೆ, ಸಿಎ ಸೈಟ್​ ಅನ್ನು ವೇರ್ ಹೌಸಿಗೆ ನೀಡಿದ್ದಾರೆ. ನಾನು ಸಿಎ ಸೈಟ್​ನಲ್ಲಿ ವೇರ್ ಹೌಸ್ ಕಟ್ಟಿಲ್ಲ. ತೆಲಂಗಾಣದವರಿಗೆ ಇಲ್ಲಿನ ಸಿಎ ಸೈಟಲ್ಲಿ ಏನು ಕೆಲಸ. ಹತ್ತು ಎಕರೆ ಜಾಗ ನೀಡಿದ್ದಾರೆ. ಹತ್ತು ಕೋಟಿ ಅಂದ್ರು, 110 ಕೋಟಿ ಆಯ್ತು. ರೆಸಿಡೆಂಟಿಯಲ್ ಕಾಂಪ್ಲೆಕ್ಸ್ ಕಟ್ಟಲು ನೀಡಿದ್ದಾರೆ. ಎಷ್ಟು ಜನರಿಗೆ ರೆಸಿಡೆನ್ಸಿಯಲ್ ಜಾಗ ನೀಡ್ತೀರಿ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಖರ್ಗೆ ಕುಟುಂಬದ ಟ್ರಸ್ಟ್​ಗೆ ಸಿಎ ನಿವೇಶನ ಹಂಚಿಕೆ ಕೇಸ್; ಸರ್ಕಾರದಿಂದ ವಿವರಣೆ ಕೇಳಿದ ರಾಜ್ಯಪಾಲ - CA Site Allotment Case

Last Updated : Sep 2, 2024, 10:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.