ETV Bharat / state

14 ಕ್ಷೇತ್ರಗಳಲ್ಲಿ 48 ತಾಸುಗಳ ಶೂನ್ಯ ಅವಧಿ ಆರಂಭ: ಇನ್ನೇನಿದ್ದರೂ ಮನೆ ಮನೆ ಪ್ರಚಾರ - Lok Sabha Election In Karnataka - LOK SABHA ELECTION IN KARNATAKA

ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6 ಗಂಟೆಯಿಂದ ಏ.26ರ ಸಂಜೆ 6 ಗಂಟೆಯವರೆಗಿನ 48 ತಾಸುಗಳ ಶೂನ್ಯ ಅವಧಿ ಆರಂಭವಾಗಿದೆ.

ಮೊದಲ‌ ಹಂತದ 14 ಕ್ಷೇತ್ರಗಳಲ್ಲಿ 48 ತಾಸುಗಳ ಶೂನ್ಯ ಅವಧಿ ಆರಂಭ: ಇನ್ನೇನಿದ್ದರೂ ಮನೆ ಮನೆ ಪ್ರಚಾರ
Etv Bharatಮೊದಲ‌ ಹಂತದ 14 ಕ್ಷೇತ್ರಗಳಲ್ಲಿ 48 ತಾಸುಗಳ ಶೂನ್ಯ ಅವಧಿ ಆರಂಭ: ಇನ್ನೇನಿದ್ದರೂ ಮನೆ ಮನೆ ಪ್ರಚಾರ
author img

By ETV Bharat Karnataka Team

Published : Apr 24, 2024, 10:12 PM IST

Updated : Apr 24, 2024, 11:02 PM IST

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6 ಗಂಟೆಯಿಂದ ಏ.26ರ ಸಂಜೆ 6 ಗಂಟೆಯವರೆಗಿನ 48 ತಾಸುಗಳ ಶೂನ್ಯ ಅವಧಿ ಆರಂಭವಾಗಿದೆ. ಬಹಿರಂಗ ಪ್ರಚಾರಗಳೆಲ್ಲವೂ ಮುಗಿದಿದ್ದು, ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಶುರುವಾಗಿದೆ.

ಏ.26ರಂದು ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ (ಎಸ್‌ಸಿ) ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

lok-sabha-election
ಲೋಕಸಭಾ ಚುನಾವಣೆ

ಶೂನ್ಯ ಅವಧಿ-ನಿರ್ಬಂಧಗಳೇನು?: ಸೆಕ್ಷನ್ 144ರಂತೆ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಲಾಗಿದೆ. ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಇದು ಸಂಪೂರ್ಣ ಕ್ಷೇತ್ರಕ್ಕೆ ಅನ್ವಯಿಸುತ್ತದೆ. ಮದ್ಯಪಾನ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರಾಜಕೀಯ ಪ್ರಚಾರಕ್ಕಾಗಿ ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಬಳಸುವುದನ್ನು ನಿರ್ಬಂಧಿಸಲಾಗಿದೆ.

ಪ್ರಚಾರದ ಅವಧಿ ಮುಗಿದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಮತಬೇಟೆ ನಡೆಸುವಂತಿಲ್ಲ. ಕ್ಷೇತ್ರದ ಹೊರಗಿನಿಂದ ಕರೆತಂದಿರುವ ರಾಜಕೀಯ ಕಾರ್ಯಕರ್ತರು/ ಪಕ್ಷದ ಕಾರ್ಯಕರ್ತರು/ ಮೆರವಣಿಗೆ /ಪದಾಧಿಕಾರಿಗಳು/ ಪ್ರಚಾರ-ಕಾರ್ಯಕರ್ತರು ಮುಂತಾದವರು ಸೇರಿದಂತೆ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯಬೇಕು. ಕಲ್ಯಾಣ ಮಂಟಪಗಳು/ ಸಮುದಾಯ ಭವನಗಳು ಇತ್ಯಾದಿಗಳನ್ನು ಪರಿಶೀಲಿಸಲಾಗುವುದು. ಈ ಆವರಣದಲ್ಲಿ ಯಾರಾದರೂ ಹೊರಗಿನವರಿಗೆ ವಸತಿ ಕಲ್ಪಿಸಲಾಗಿದೆಯೇ ಎಂದು ಪರಿಶೀಲಿಸಲಾಗುವುದು. ವಸತಿಗೃಹಗಳು ಮತ್ತು ಅತಿಥಿಗೃಹಗಳನ್ನು ಪರಿಶೀಲಿಸಲಾಗುತ್ತದೆ.

ಕ್ಷೇತ್ರದ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ನಿಗಾವಹಿಸಲಾಗುತ್ತದೆ. ಅವರು ಆಯಾ ಕ್ಷೇತ್ರದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಮೈಸೂರು: 99 ಆಕರ್ಷಕ ಮತಗಟ್ಟೆಗಳ ನಿರ್ಮಾಣ - Special Polling Booths

Last Updated : Apr 24, 2024, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.