ETV Bharat / state

ಸಿಸಿಬಿ ಪೊಲೀಸರಿಂದ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳ ಜಪ್ತಿ, 7 ಆರೋಪಿಗಳ ಬಂಧನ

ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ 7 ಆರೋಪಿಗಳನ್ನ ಬಂಧಿಸಿ, ಅವರಿಂದ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ಆರೋಪಿಗಳು

author img

By ETV Bharat Karnataka Team

Published : Jan 30, 2024, 3:29 PM IST

ಬೆಂಗಳೂರು : ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ವಿದೇಶಿ ಮೂಲದವರ ಸಹಿತ 7 ಜನ ಆರೋಪಿಗಳನ್ನ ಸಿಸಿಬಿಯ ಮಾದಕ ವಸ್ತು ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ. ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು, ಪುಲಿಕೇಶಿನಗರ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಶೇಕ್ ಮೊಹಮ್ಮದ್ ಅರ್ಬಾಜ್, ಗೌತಮ್, ಕೆ. ಅಭಿಷೇಕ್, ಎನ್ ಜಾಧವ್, ರಿತಿಕ್ ರಾಜ್ ಎಂಬಾತನ ಸಹಿತ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಎಕ್ಸ್ಟಸಿ ಪಿಲ್ಸ್
ಎಕ್ಸ್ಟಸಿ ಪಿಲ್ಸ್

ಬಂಧಿತ ಆರೋಪಿಗಳಿಂದ 219 ಎಕ್ಸ್ಟಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 130 ಗ್ರಾಂ ಚರಸ್, 100.88 ಗ್ರಾಂ ಕೊಕೇನ್ ಸಹಿತ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳು, 1 ದ್ವಿಚಕ್ರ ವಾಹನ, 6 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ತಿಳಿಸಿದ್ದಾರೆ.

ಮಾದಕ ಪದಾರ್ಥ
ಮಾದಕ ಪದಾರ್ಥ

ಪ್ರತ್ಯೇಕ ಪ್ರಕರಣ- ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ : ಅಂಗಡಿಗೆ ನುಗ್ಗಿ ಕಳ್ಳತನ‌ ಮಾಡಿದವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಸಿಂಗ್ ಮಾಲೀಕತ್ವದ ಅಂಗಡಿಯನ್ನು ಆರೋಪಿಗಳು ದೋಚಿದ್ದರು. ಅಂಗಡಿ ಮಾಲೀಕ ದಾವಣಗೆರೆ ನಗರದ ಆರ್​ಎಂಸಿ ಫ್ಲೈ ಓವರ್ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಭರತ್‌ ಆಟೋಮೊಬೈಲ್ಸ್ ಮತ್ತು ಲುಬ್ರಿಕೆಂಟ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ‌. ಜ. 26ರ ರಾತ್ರಿ ಈ ಘಟನೆ ನಡೆದಿತ್ತು.

ದಾವಣಗೆರೆ ಪೊಲೀಸರು
ದಾವಣಗೆರೆ ಪೊಲೀಸರು

ಮಂಜುನಾಥ್ ಅವರು ಮರುದಿನ ಅಂಗಡಿಗೆ ಆಗಮಿಸಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿಯ ಸ್ಕ್ರೂ ಬಿಚ್ಚಿ ಅಂಗಡಿಯಲ್ಲಿ ಇಟ್ಟಿದ್ದ 40 ಸಾವಿರ ರೂ. ಹಣವನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಕೆಟಿಜೆ ನಗರ ಠಾಣೆಯಲ್ಲಿ ಅವರು ದೂರು ನೀಡಿದ್ದರು.

ಠಾಣೆಯ ಗುನ್ನೆ 20/2024 ಕಲಂ 457, 380 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಾದ ಅಜಯ ವಿ ಅಲಿಯಾಸ್ ಕಳ್ಳ ಅಜಯ್, ಚಂದ್ರು ಅಲಿಯಾಸ್ ಆಯಿಲ್ ಚಂದ್ರ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರು ನಿಟ್ಟುವಳ್ಳಿಯ ನಿವಾಸಿಗಳು ಎಂದು ತಿಳಿದುಬಂದಿದೆ. ಆರೋಪಿಗಳಿಂದ ಒಟ್ಟು 32,600 ರೂ. ನಗದು ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1,80,000 ರೂ. ಬೆಲೆಯ ಒಂದು ಆಟೋ ಹಾಗೂ ಒಂದು ಹೊಂಡಾ ಆಕ್ಟಿವಾ ಸ್ಕೂಟರ್​ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯ 02 ಪ್ರಕರಣ ಹಾಗೂ ವಿದ್ಯಾನಗರ ಠಾಣೆಯ 01 ಪ್ರಕರಣ ಸೇರಿ ಒಟ್ಟು 03 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ : ಹೊಸ ವರ್ಷಾಚರಣೆಗೆ ಸಿದ್ಧತೆ: ಮಾದಕ ದಂಧೆಕೋರರ ಮೇಲೆ ಪೊಲೀಸರ ಹದ್ದಿನ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.