ETV Bharat / state

ಹಳೆ ವಿದ್ಯಾರ್ಥಿಗಳ ಛಲ: ಹುಬ್ಬಳ್ಳಿ ಬ್ರಾಡ್‌ವೇ ರಸ್ತೆಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಗೆ ಅಭಿವೃದ್ಧಿ ಯೋಗ - REVIVAL OF GOVT SCHOOL

ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಹಣ ಹಾಕಿ ಸರಕಾರಿ ಶಾಲೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ್' ಹುಬ್ಬಳ್ಳಿ ​ಪ್ರತಿನಿಧಿ ಹೆಚ್​​.ಬಿ.ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ.

ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2, ಹುಬ್ಬಳ್ಳಿ
ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2, ಹುಬ್ಬಳ್ಳಿ (ETV Bharat)
author img

By ETV Bharat Karnataka Team

Published : Nov 15, 2024, 10:27 AM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದ ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2 ಇದೀಗ ಇಡೀ ಹುಬ್ಬಳ್ಳಿಗೆ ಮಾದರಿಯಾಗಿ ಹೊರಹೊಮ್ಮಿದೆ.

ಮಾರುಕಟ್ಟೆ ಪ್ರದೇಶದಲ್ಲಿದ್ದ ಬ್ರಾಡ್‌ವೇ ರಸ್ತೆಯ ಈ ಶಾಲೆ ಶಿಥಿಲಾವಸ್ಥೆ ತಲುಪಿದ್ದರಿಂದ ಪಾಲಿಕೆಯ ಯೋಜನಾ ವಿಭಾಗ ಇದನ್ನು ಕೆಡವಿ ಮಲ್ಟಿಲೆವೆಲ್ ಪಾರ್ಕಿಂಗ್​ ನಿರ್ಮಿಸಲು ಯೋಜನೆ ರೂಪಿಸಿತ್ತು. ಇದರಿಂದ ಎಚ್ಚೆತ್ತ ಹಳೆ ವಿದ್ಯಾರ್ಥಿಗಳು ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ ಸರ್ಕಾರದ 'ನಮ್ಮ ಶಾಲೆ ನಮ್ಮ ಹೊಣೆ' ಎಂಬ ಧ್ಯೇಯವನ್ನು ಸಾಕಾರಗೊಳಿಸಿದ್ದಾರೆ.

ಅಭಿವೃದ್ಧಿಗೊಂಡಿರುವ ಶಾಲಾ ಕೊಠಡಿಗಳು.
ಹುಬ್ಬಳ್ಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.2 (ETV Bharat)

ಹಳೆ ವಿದ್ಯಾರ್ಥಿಗಳ ಸಂಘ 15 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲೆ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಯೋಜನೆ ರೂಪಿಸಿದೆ. ಈಗಾಗಲೇ 5.33 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ 3 ಪ್ರತ್ಯೇಕ ಶೌಚಾಲಯ ನಿರ್ಮಿಸಿದ್ದಾರೆ. ಸೋರುತ್ತಿದ್ದ 14 ಕೊಠಡಿಗಳ ಚಾವಣಿಗೆ ರಬ್ಬರ್ ಪೇಂಟ್, ಪೈಪ್‌ಲೈನ್ ದುರಸ್ತಿ, ಆವರಣಕ್ಕೆ ತಂತಿ ಬೇಲಿ, ಶಾಲೆ ಹೊರಾಂಗಣ ಮತ್ತು ಒಳಾಂಗಣಕ್ಕೆ ಪೇಂಟಿಂಗ್ ಮಾಡಿದ್ದಾರೆ. ಆಕರ್ಷಕ ಗೋಡೆ ಬರಹ, ಚಿತ್ತಾರಗಳನ್ನು ಬಿಡಿಸಲಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಹೆಚ್ಚುವರಿ ವಿದ್ಯಾರ್ಥಿಗಳು ಸೇರಿದ್ದಾರೆ.

ಹುಬ್ಬಳ್ಳಿಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಗೆ ಅಭಿವೃದ್ದಿ ಯೋಗ

ಸ್ವಾತಂತ್ರ್ಯಪೂರ್ವದ ಶಾಲೆ: 1868ರಲ್ಲಿ ಆರಂಭವಾದ ಈ ಶಾಲೆಯಲ್ಲಿ LKG ಜೊತೆಗೆ 1ರಿಂದ 7ನೇ ತರಗತಿಗಳಿವೆ. 6 ಜನ ಶಿಕ್ಷಕರಿದ್ದಾರೆ. ಹೀಗಾಗಿ ಗುತ್ತಿಗೆ ಆಧಾರದ ಮೇಲೆ ಯೋಜನೆ ಗಣಿತ, ವಿಜ್ಞಾನ, ಹಿಂದಿ ಶಿಕ್ಷಕರನ್ನು ನೇಮಕ ಮಾಡಲು ಹಳೆ ವಿದ್ಯಾ ರ್ಥಿಗಳ ಸಂಘ ಯೋಜಿಸಿದೆ. ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಪ್ರಯೋಗಾಲಯ, ನೀರು, ವಿದ್ಯುತ್ ಇತ್ಯಾದಿ ಸೌಲಭ್ಯಕ್ಕೆ ಯೋಜನೆ ರೂಪಿಸಲಾಗಿದೆ.

ಅಭಿವೃದ್ಧಿಗೊಂಡಿರುವ ಶಾಲಾ ಕಾರಿಡಾರ್.
ಶಾಲೆಯ ಕಾರಿಡಾರ್ (ETV Bharat)

ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ ಇಲ್ಲಿನ ಹಳೆ ವಿದ್ಯಾರ್ಥಿಗಳು: ಇದೇ ಶಾಲೆಯಲ್ಲಿ ಕಲಿತಿರುವ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಈ ಶಾಲೆಯ ಹಳೆ ವಿದ್ಯಾರ್ಥಿಗಳು. ಹಾಗಾಗಿ, ಅವರೂ ಕೂಡಾ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.

ಹಳೇ ವಿದ್ಯಾರ್ಥಿಗಳಿಂದ  ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಗೆ ಅಭಿವೃದ್ದಿ ಯೋಗ
ಶಾಲೆಯ ಹಳೆ ವಿದ್ಯಾರ್ಥಿಗಳು (ETV Bharat)

ಹಳೆ ವಿದ್ಯಾರ್ಥಿ ಸಂಘದ ಸದಸ್ಯ ನಿಕೇಶ ಭಂಡಾರಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಖಾಸಗಿ ಶಾಲೆಗೇನೂ ಕಮ್ಮಿ ಇಲ್ಲದಂತೆ ನಾವು ಕಲಿತ ಶಾಲೆಯನ್ನು ಅಭಿವೃದ್ಧಿಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ 5.33 ಲಕ್ಷ ರೂ. ವೆಚ್ಚದಲ್ಲಿ ಹಲವು ಕೆಲಸಗಳನ್ನು ಮಾಡಲಾಗಿದೆ. ಇನ್ನುಳಿದ ಕಾರ್ಯ ಪೂರ್ಣಗೊಳಿಸಲು ವಿದ್ಯಾರ್ಥಿಗಳ ಸಂಘ ಅಗತ್ಯ ಯೋಜನೆ ರೂಪಿಸಿದೆ" ಎಂದರು.

ಹಳೆ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು (ETV Bharat)

"ಇಲ್ಲಿಯವರೆಗೂ ಸರ್ಕಾರದಿಂದ ಪೈಸೆ ಹಣಕಾಸು ನೆರವು ಪಡೆದುಕೊಂಡಿಲ್ಲ. ಹಳೆ ವಿದ್ಯಾರ್ಥಿಗಳು ಮಾಡಿದ ಧನಸಹಾಯದಿಂದ ಖಾಸಗಿ ಶಾಲೆಗಳ ಹಾವಳಿ ತಪ್ಪಿಸುವುದರ ಜೊತೆಗೆ ಕನ್ನಡ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಣ ತೊಟ್ಟಿದ್ದೇವೆ. ಶಿಕ್ಷಕರ ಕೊರತೆ ನಡುವೆಯೂ LKG, UKG ಪ್ರಾರಂಭಿಸಿದ್ದೇವೆ" ಎಂದು ಹಳೆ ವಿದ್ಯಾರ್ಥಿ ಪರಶುರಾಮ್​​ ವಾಲೀಕಾರ ಹೇಳಿದರು.

ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಗೌಡ ಪ್ರತಿಕ್ರಿಯಿಸಿ, "ಈ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಳೆ ವಿದ್ಯಾರ್ಥಿಗಳು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಕಳೆದ ವರ್ಷ ಮಹಾನಗರ ಪಾಲಿಕೆ ಶಾಲೆ ಕಟ್ಟಡದ ಜಾಗದಲ್ಲಿ ಮಲ್ಟಿ ಲೆವಲ್​ ಪಾರ್ಕಿಂಗ್​ಗೆ ಯೋಜನೆ ಮಾಡಿತ್ತು. ಇದಕ್ಕೆ ಹಳೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಸದ್ಯಕ್ಕೆ ‌ಕೈಬಿಟ್ಟಿದ್ದು, ಈಗ ಯಾವುದೇ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದೆ ಬಂದಿಲ್ಲ" ಎಂದರು.

ಇದನ್ನೂ ಓದಿ: ಮೈಸೂರು: ಬಯಲು ಶೌಚಾಲಯಕ್ಕೆ ಬೆದರಿ ಕನ್ನಡ ಶಾಲೆ ಬಿಡಲು ಮುಂದಾದ ವಿದ್ಯಾರ್ಥಿಗಳು

ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಹೈದರಾಬಾದ್ ಪ್ರವಾಸ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ಐಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.