ETV Bharat / state

ಬಿ‌ಆರ್​ಟಿಎಸ್ ಚಿಗರಿ ಬಸ್​ಗೆ ಮನಸೋತ ಮಂದಿ: ಕುಗ್ಗದ ಪ್ರಯಾಣಿಕರ ಸಂಖ್ಯೆಯೇ ಯೋಜನೆಗೆ 'ಶಕ್ತಿ'! - BRTC Chigari Bus

ಉಚಿತ ಪ್ರಯಾಣ ಯೋಜನೆಯ ವ್ಯಾಪ್ತಿಗೆ ಬಿ‌ಆರ್​ಟಿಎಸ್ ಚಿಗರಿ ಬಸ್ ಬಾರದಿದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ದಿನ ದಿನಕ್ಕೆ ಹೆಚ್ಚಳವಾಗುತ್ತಿದೆ.

BRTS Chigari Bus
ಬಿ‌ಆರ್​ಟಿಎಸ್ ಚಿಗರಿ ಬಸ್​ (ETV Bharat)
author img

By ETV Bharat Karnataka Team

Published : Aug 21, 2024, 6:42 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನರಿಗೆ ತ್ವರಿತ ಬಸ್ ಸೇವೆ ಒದಗಿಸುವ ಉದ್ದೇಶದಿಂದ ಚಿಗರಿ ಬಸ್ (BRTS) ಯೋಜನೆ ಜಾರಿ ಮಾಡಲಾಗಿದೆ. ಇದು ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಗೊಂಡ ಐಷಾರಾಮಿ ಎಸಿ ಬಸ್ ಸೇವೆ. ನಿತ್ಯ ನೂರಾರು ಚಿಗರಿ ಬಸ್‌ಗಳು ಅವಳಿ ನಗರಗಳ ಮಧ್ಯೆ ಓಡಾಡುತ್ತವೆ. ಈ ಚಿಗರಿ ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅನ್ವಯವಾಗುವುದಿಲ್ಲ.

ಬಿ‌ಆರ್​ಟಿಎಸ್ ಚಿಗರಿ ಬಸ್​ಗೆ ಮನಸೋತ ಮಂದಿ: ಕುಗ್ಗದ ಪ್ರಯಾಣಿಕರ ಸಂಖ್ಯೆಯೇ ಯೋಜನೆಗೆ 'ಶಕ್ತಿ'! (ETV Bharat)

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಬಿಆರ್​ಟಿಎಸ್​ಗೆ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದೆಲ್ಲವನ್ನು ಮೀರಿ ಚಿಗರಿ ಬಸ್​ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಆದರೆ ಚಿಗರಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ವಿಭಿನ್ನ ಸಿಟಿ ಬಸ್ ಸಂಚಾರವಾಗಿದೆ. ನಿತ್ಯ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಸಂಪರ್ಕ ಯೋಜನೆ ಉಚಿತ ಬಸ್ ಪ್ರಯಾಣ ಯೋಜನೆ ವ್ಯಾಪ್ತಿಗೆ ಬಾರದೇ ಇದ್ದರೂ‌ ಕೂಡ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಈ‌ ಕುರಿತು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ ಮಾಹಿತಿ ನೀಡಿದ್ದು, "ಶಕ್ತಿ ಯೋಜನೆಯಿಂದಾಗಿ ಬಿಆರ್​ಟಿಎಸ್ ಮೇಲೆ ಯಾವುದೇ ಪರಿಣಾಮವಾಗಿಲ್ಲ.‌ ಸಾಮಾನ್ಯ ಸಾರಿಗೆ ನಡುವೆಯೋ ಪ್ರತಿದಿನ ಸರಾಸರಿ 80 ಸಾವಿರದಿಂದ 1 ಲಕ್ಷ ಜನರು ಹುಬ್ಬಳ್ಳಿ-ಧಾರವಾಡ ನಡುವೇ ಸಂಚರಿಸುತ್ತಿದ್ದಾರೆ. ಕಳೆದ ವರ್ಷ ಶಕ್ತಿ ಯೋಜನೆ ಜಾರಿಗೂ ಮುನ್ನ ಯಾವ ರೀತಿ ಪ್ರಯಾಣಿಕರ ದಟ್ಟಣೆ ಇತ್ತೋ ಅಷ್ಟೇ ಜನ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ" ಎಂದರು.

ಬಿಆರ್‌ಟಿಎಸ್​ಗೆ ಇ-ಪಾಸ್ ವರದಾನ: "ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಇ- ಪಾಸ್ ಕೂಡ ಕಾರಣವಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಿದೆ. ಮೆಟ್ರೋ ಕಾರ್ಡ್‌ನಂತೆ ಬಳಕೆ ಮಾಡಬಹುದು. 200 ರೂಪಾಯಿ ಕರೆನ್ಸಿ ಹಾಕಿಸಿಕೊಂಡರೆ 220 ಕರೆನ್ಸಿ ಬರುತ್ತೆ. ಶೇ.10ರಷ್ಟು ಕರೆನ್ಸಿ ಬರುತ್ತದೆ. ಪ್ರತಿ ದಿನ ಸರತಿ ಸಾಲಿನಲ್ಲಿ ‌ನಿಂತು ಟಿಕೆಟ್ ‌ಪಡೆಯುವ ಅವಶ್ಯಕತೆ ಇರುವುದಿಲ್ಲ. ಸುಲಭವಾಗಿ ಪ್ರಯಾಣ ಮಾಡಬಹುದು. ವಿಶೇಷ ರಿಯಾಯಿತಿ ಸಿಗಲಿದೆ" ಎಂದು ಮಾಹಿತಿ ನೀಡಿದರು.

ಬಿ‌ಆರ್​ಟಿಎಸ್ 100 ಬಸ್​ಗಳಲ್ಲಿ ನಿತ್ಯ 90ರಿಂದ 92 ಬಸ್​ಗಳು ಪ್ರತಿ ನಿಮಿಷಕ್ಕೆ ಒಂದರಂತೆ ಓಡಾಡುತ್ತಿವೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ನಗರಕ್ಕೆ ಅತ್ಯಾಧುನಿಕ ಬಸ್​ಗಳ​ ವ್ಯವಸ್ಥೆ: ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭ - advanced bus to twin cities

ETV Bharat Logo

Copyright © 2024 Ushodaya Enterprises Pvt. Ltd., All Rights Reserved.