ETV Bharat / state

ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದ ಸಂಸದೆ; ಬಿಎಸ್​ವೈ ಪರ ಶಾಮನೂರು ಬ್ಯಾಟಿಂಗ್ - Prabha Mallikarjun - PRABHA MALLIKARJUN

ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೊಂದಾಣಿಕೆ ಆಗಿದ್ರೆ ಒಂದು ಲಕ್ಷ ಮತಗಳಿಂದ ಗೆಲುವು ಸಾಧಿಸಬೇಕಿತ್ತು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

BJP ALLEGATION  CONGRESS PARTY  MP PRABHA STATEMENT  DAVANAGERE
ಶಾಮನೂರು ಶಿವಶಂಕರಪ್ಪ ಮತ್ತು ಪ್ರಭಾ ಮಲ್ಲಿಕಾರ್ಜುನ್ (ETV Bharat)
author img

By ETV Bharat Karnataka Team

Published : Jun 14, 2024, 9:12 PM IST

ಬಿಎಸ್​ವೈ ಪರ ಶಾಮನೂರು ಶಿವಶಂಕರಪ್ಪ ಬ್ಯಾಟಿಂಗ್ (ETV Bharat)

ದಾವಣಗೆರೆ: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ, ಹೊಂದಾಣಿಕೆ ಮಾಡಿಕೊಂಡಿದ್ದೇ ಆಗಿದ್ದಲ್ಲಿ ನಾವು ಒಂದು ಲಕ್ಷ ಮತಗಳಿಂದ ಗೆಲುವು ಸಾಧಿಸಬೇಕಿತ್ತು ಎಂದು ಹೊಂದಾಣಿಕೆ ರಾಜಕಾರಣ ನಡೆದಿದೆ ಎಂದು ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿಯವರು ಸೋತಾದ ಬಳಿಕ ನಾನಾ ಕಾರಣಗಳನ್ನು ಹೇಳ್ತಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ಗೆಲುವು ಅವರು ಸಾಧಿಸುತ್ತಲೇ ಬಂದಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದ್ರೂ ಕೂಡ ಮೋದಿಯವರ ಮುಖ ನೋಡಿ ಮತ ಹಾಕ್ತಿದ್ದರು.‌ ನಮಗೆ ಪ್ರತಿಸ್ಪರ್ಧಿ ಇದ್ದದು ಮೋದಿಯವರು. ಜನ ಮೋದಿಯವರು ಮುಖ ನೋಡಿ ಮತ ಹಾಕ್ತಿದ್ದರು. ಇನ್ನು ಇಪ್ಪತ್ತೈದು ವರ್ಷಗಳಿಂದ ಆಗದ ಅಭಿವೃದ್ಧಿ ಕಂಡು ಜನ ಬದಲಾವಣೆ ಬಯಸಿದ್ದಾರೆ. ಜನ್ರ ಆಶಯದಂತೆ ಅಭಿವೃದ್ಧಿ ಮಾಡಿ ನಾವು ತೋರಿಸುತ್ತೇವೆ ಎಂದರು.‌

ಸಂಸತ್ ಭವನ, ಸಂಸದರ ಆಸನದಲ್ಲಿ ಕೂತಾಗ ಹೆಚ್ಚಿನ ಜವಾಬ್ದಾರಿ ಬರುತ್ತದೆ. ಅಲ್ಲಿಯ ವಾತಾವರಣ ಅರಿಯಬೇಕಿದೆ. ಸಂಸದೆ ಸ್ಥಾನದಲ್ಲಿ ಕೂರಲು ಮತದಾರರು ಕಾರಣ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಮತದಾರರು ಮತಹಾಕಿ ಗೆಲ್ಲಿಸಿದ್ದಕ್ಕೆ ನಾನು ದಾವಣಗೆರೆ ಸಮಸ್ಯೆಗಳನ್ನು ಪಾರ್ಲಿಮೆಂಟ್​ನಲ್ಲಿ ಮಾತ್ನಾಡಲು ಸಾಧ್ಯವಾಗಿಸಿದ್ದಾರೆ. ನಾನು ಇನ್ನೂ ಸಂಸದೆಯಾಗಿ ಪ್ರಮಾಣ ವಚನ ಕೂಡ ಸ್ವೀಕರಿಸಿಲ್ಲ. 24ರಿಂದ ಪ್ರಮಾಣ ವಚನದ ಪ್ರಕ್ರಿಯೆ ಶುರುವಾಗಲಿದೆ. ಆದಾದ ಬಳಿಕ ಸವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.

ಇನ್ನು ದಾವಣಗೆರೆಗೆ ಐಟಿಬಿಟಿ ಕಂಪನಿಗಳು ಬರಬೇಕೆಂಬುದು ಉಸ್ತುವಾರಿ ಸಚಿವರಾದ ಎಸ್ಎಸ್ ಮಲ್ಲಿಕಾರ್ಜುನ್‌ ಅವರ ಆಸೆ ಕೂಡ ಹೌದು. ನಮ್ಮ ರಾಜ್ಯದಲ್ಲಿ ನಮ್ಮದೆ ಸರ್ಕಾರ ಇದೆ. ಶಾಸಕರ ಬಲ ಇದೆ. ಪಾರ್ಲಿಮೆಂಟ್​ನಲ್ಲಿ ಮಾತನಾಡಿ ದಾವಣಗೆರೆಗೆ ಐಟಿಬಿಟಿ ಕಂಪನಿಗಳು ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಬಿಎಸ್​ವೈ ಪರ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬ್ಯಾಟಿಂಗ್: ಯಾರೋ ಹೆಣ್ಣು ಮಗಳು ಬಂದು ಕಂಪ್ಲೇಂಟ್ ಕೊಟ್ರೇ ಅರೆಸ್ಟ್ ಮಾಡ್ತೇವೆ ಎಂದ್ರೆ ಏನ್ ಅರ್ಥ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪರ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ್ರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಆರೋಪ ಸಾಬೀತಾದ್ರೆ ಕ್ರಮ ಜರುಗಿಸಿದ್ರೆ ಒಂದು ಲೆಕ್ಕಾಚಾರ. ಅದ್ರೇ ಯಾರೋ ದಾರಿಯಲ್ಲಿ ಹೋಗುವವರು ಬಂದು ಪ್ರಕರಣ ದಾಖಲು ಮಾಡಿ ಅರೆಸ್ಟ್ ಅಂದ್ರೆ ಏನ್ ಅರ್ಥ. ಈ ರೀತಿ ಮಾಡಿದ್ರೆ ತಪ್ಪಾಗುತ್ತದೆ. ಆ ಮಹಿಳೆ ಐವತ್ತೈದು ಕಡೆ ಇದೇ ಪ್ರಕರಣ ದಾಖಲು ಮಾಡಿದ್ದಾಳೆ. ಅದಕ್ಕೇನ್ ಬೆಲೆ? ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟ ದರ್ಶನ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಖೀಲ ಭಾರತೀಯ ವೀರಶೈವ ಮಹಾಸಭಾದಿಂದ ನಮ್ಮ ವಿರೋಧ ಇದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು. ದರ್ಶನ್ ಆಗಲಿ, ಯಾರೇ ಆಗಲಿ ಅವರಿಗೆ ಶಿಕ್ಷೆ ಆಗ್ಬೇಕು. ಪಾಪ ಸಾಯುವಂತೆ ಹೊಡೆಯಬಾರದಿತ್ತು. ಕರೆದು ಮಾತನಾಡಿ ಬಗೆಹರಿಸಬಹುದಿತ್ತು. ಆದ್ರೆ ಹೊಡೆದು ಸಾಯಿಸಿರುವುದು ತಪ್ಪು. ನಟ ದರ್ಶನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಖೀಲ ಭಾರತೀಯ ವೀರಶೈವ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಪ್ರಹ್ಲಾದ್ ಜೋಶಿಗೆ ಭವ್ಯ ಸ್ವಾಗತ - Pralhad Joshi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.