ETV Bharat / state

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತನ ಎರಡು ವಿಡಿಯೋ ಬಿಡುಗಡೆ ಮಾಡಿದ ಎನ್​ಐಎ - Rameshwaram cafe blast case

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಆರೋಪಿಯ ಎರಡು ವಿಡಿಯೋಗಳನ್ನು ಎನ್​ಐಎ ಬಿಡುಗಡೆ ಮಾಡಿದೆ.

Etv Bharat
Etv Bharat
author img

By ETV Bharat Karnataka Team

Published : Mar 8, 2024, 10:11 PM IST

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆಗೆ ಎನ್​ಐಎ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಅಂತೆಯೇ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಈಗಾಗಲೇ ಘೋಷಿಸಿದೆ. ಸಾರ್ವಜನಿಕರಿಗೆ ಆರೋಪಿಯ ಗುರುತು ಗೊತ್ತಾಗಲಿ ಎಂದು ಆತನ ಮತ್ತೆರಡು ವಿಡಿಯೋಗಳನ್ನು ಎನ್​ಐಎ ಬಿಡುಗಡೆಗೊಳಿಸಿದೆ.

ಬಿಎಂಟಿಸಿ ಬಸ್​ನಲ್ಲಿ ಸಂಚರಿಸಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಶಂಕಿತ ಆರೋಪಿ ಅಡ್ಡಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿ, ಪತ್ತೆಗೆ ಸಹಕರಿಸುವಂತೆ ಎನ್​ಐಎ ತಿಳಿಸಿದೆ. ಶಂಕಿತನ ಮಾಹಿತಿ ಗೊತ್ತಾದರೆ 08029510900, 8904241100 ನಂಬರ್​ಗೆ ಕರೆ ಮಾಡಿ ಅಥವಾ info.blr.nia@gov.in ಗೆ ಇಮೇಲ್ ಮಾಡಿ. ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡುವುದಾಗಿ ಎನ್​ಐಎ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಎನ್​ಐಎ ಬಿಡುಗಡೆ ಮಾಡಿದ ವಿಡಿಯೋಗಳು: ಮೊದಲ ವಿಡಿಯೋ ಶಂಕಿತ ಆರೋಪಿ ಬಿಎಂಟಿಸಿ ಬಸ್​ನಲ್ಲಿ ಸಂಚರಿಸುವುದಿದೆ. ಈ ವಿಡಿಯೋದಲ್ಲಿನ ಸಮಯದ ಪ್ರಕಾರ ಆರೋಪಿ ಮಾರ್ಚ್ 1 ಮಧ್ಯಾಹ್ನ 3.06ರ ಸುಮಾರಿಗೆ ಬಸ್​​ನಲ್ಲಿ ಕ್ಯಾಪ್, ಮಾಸ್ಕ್ ಧರಿಸಿ ಸಂಚರಿಸಿದ್ದಾನೆ. ಮೊದಲು ಮಧ್ಯದ ಸೀಟಿನಲ್ಲಿ ಕುಳಿತಿದ್ದು, ಬಳಿಕ ಕೊನೆಯ ಸೀಟಿನಲ್ಲಿ ಕುಳಿತುಕೊಂಡಿರುವುದು ವಿಡಿಯೋದಲ್ಲಿದೆ. ಕೆಫೆಯಲ್ಲಿ ಸ್ಫೋಟವಾದ ಬಳಿಕ ಆರೋಪಿ ಸಂಚರಿಸಿರುವ ವಿಡಿಯೋ ಇದು.

ಇನ್ನೊಂದು ವಿಡಿಯೋ ಬಳ್ಳಾರಿಯಲ್ಲಿ ಆರೋಪಿ ಅಡ್ಡಾಡುತ್ತಿರುವುದು ಸೆರೆಯಾಗಿದೆ. ಸ್ಫೋಟದ ಬಳಿಕ ಬೆಂಗಳೂರಿನಿಂದ ಶಂಕಿತ ಬಳ್ಳಾರಿಗೆ ಆಗಮಿಸಿದ್ದಾನೆ. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದು ವಿಡಿಯೋದಲ್ಲಿದೆ. ಸಿಸಿಟಿವಿ ವಿಡಿಯೋ ಪ್ರಕಾರ ಮಾಚ್​ 1ರ ರಾತ್ರಿ 9ರ ಸುಮಾರಿಗೆ ಬಸ್ ಬಿಲ್ದಾಣದಲ್ಲಿ ಆರೋಪಿ ಇರುವುದು ಗೊತ್ತಾಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರಿ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಸುಧಾರಿತ ಕಡಿಮೆ ತೀವ್ರತೆಯ ಬಾಂಬ್​ ಇದಾಗಿದ್ದರಿಂದ ದೊಡ್ಡ ಹಾನಿ ಸಂಭವಿಸಿರಲಿಲ್ಲ. ಸ್ಫೋಟದ ಬಳಿಕ ಶಂಕಿತ ತಪ್ಪಿಸಿಕೊಂಡಿದ್ದು, ಪತ್ತೆಗೆ ಪೊಲೀಸರು ಮತ್ತು ಎನ್​ಐಎ ಬಲೆ ಬೀಸಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಆರೋಪಿಯ ಸುಳಿವು ನೀಡಿದ್ರೆ ₹ 10 ಲಕ್ಷ ನಗದು ಬಹುಮಾನ - ಎನ್ಐಎ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.