ETV Bharat / state

ನೀಟ್​ ಪರಿಷ್ಕೃತ ಫಲಿತಾಂಶ: ಟಾಪರ್​ ಆಗಿದ್ದ ರಾಜ್ಯದ ಮೂವರ ಸ್ಥಾನದಲ್ಲಿ ಭಾರಿ ಕುಸಿತ, ಪದ್ಮನಾಭ್​ ಮೆನನ್​ಗೆ 21ನೇ ರ್‍ಯಾಂಕ್​ - NEET UG revised results

ನೀಟ್​ ಪರಿಷ್ಕೃತ ಫಲಿತಾಂಶದಲ್ಲಿ ಕರ್ನಾಟಕಕ್ಕೆ ಭಾರೀ ನಿರಾಸೆ ಉಂಟಾಗಿದೆ. ಈ ಹಿಂದೆ ಟಾಪರ್​ ಆಗಿದ್ದ ಮೂವರ ಸ್ಥಾನದಲ್ಲಿ ತೀವ್ರ ಕುಸಿತ ಉಂಟಾಗಿದೆ. ಅಗ್ರ 50ರ ಪಟ್ಟಿಯಿಂದಲೇ ಅವರೆಲ್ಲರೂ ಹೊರಬಿದ್ದಿದ್ದಾರೆ.

ನೀಟ್​ ಪರಿಷ್ಕೃತ ಫಲಿತಾಂಶ
ನೀಟ್​ ಪರಿಷ್ಕೃತ ಫಲಿತಾಂಶ (ETV Bharat)
author img

By ETV Bharat Karnataka Team

Published : Jul 27, 2024, 10:21 PM IST

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್​ಟಿಎ) ನೀಟ್​-ಯುಜಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಅಭ್ಯರ್ಥಿಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಬದಲಾವಣೆಯಾಗಿದೆ. ಈ ಹಿಂದಿನ ರಿಸಲ್ಟ್​​ನಲ್ಲಿ ರಾಜ್ಯದ ಮೂವರು ಟಾಪರ್​ಗಳಾಗಿದ್ದರು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ಅವರು 50ನೇ ಶ್ರೇಯಾಂಕಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿದಿದ್ದಾರೆ. ವಿಶೇಷವೆಂದರೆ, ಟಾಪ್​​ 20 ರಲ್ಲೂ ರಾಜ್ಯದ ಒಬ್ಬ ಅಭ್ಯರ್ಥಿ ಇಲ್ಲ.

21ನೇ ರ್‍ಯಾಂಕ್​​ ಪಡೆದಿರುವ ಪದ್ಮನಾಭ್ ಮೆನನ್ ರಾಜ್ಯದ ಹೊಸ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮೊದಲು ಅವರು 74ನೇ ಶ್ರೇಯಾಂಕ ಪಡೆದಿದ್ದರು. ಅಂದರೆ, ರಾಜ್ಯದಿಂದ ಯಾವೊಬ್ಬ ಅಭ್ಯರ್ಥಿಯೂ ಪೂರ್ಣಾಂಕ ಪಡೆಯುವಲ್ಲಿ ಸಫಲವಾಗಿಲ್ಲ. ಭಾರ್ಗವ ಭಟ್ (84), ಪಿ.ನಂದನ್ (90) ಹೊಸದಾಗಿ ಟಾಪ್ 100 ಶ್ರೇಯಾಂಕದಲ್ಲಿ ಪ್ರವೇಶಿಸಿದ್ದಾರೆ.

ಈ ಹಿಂದೆ ಟಾಪ್​ 100 ರ್‍ಯಾಂಕರ್​ಗಳಾಗಿದ್ದ ಪ್ರಜ್ಞಾನ್ ಪಿ.ಶೆಟ್ಟಿ ಮತ್ತು ಖುಷಿ ಮಾಗನೂರ್ ಅವರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಟಾಪ್ 100ರ ಪಟ್ಟಿಯಲ್ಲಿ ರಾಜ್ಯದ ಯಾವೊಬ್ಬ ಹುಡುಗಿಯರಿಲ್ಲ. ವರ್ಗವಾರು ಶ್ರೇಯಾಂಕದಲ್ಲಿ ಕೆ.ರುಶಿಲ್ (147) ರಾಷ್ಟ್ರೀಯವಾಗಿ ಅಗ್ರ 10 ಎಸ್​ಸಿ ಅಭ್ಯರ್ಥಿಗಳಲ್ಲಿ ಸ್ಥಾನ ಪಡೆದಿದ್ದಾರೆ, ಸಮೃದ್ಧ್ (1166) ಟಾಪ್ 10 ಎಸ್​ಟಿ ಅಭ್ಯರ್ಥಿಗಳಲ್ಲಿ ಇದ್ದಾರೆ.

ಟಾಪ್​ ರ್‍ಯಾಂಕರ್​ಗಳ ಈಗಿನ ಶ್ರೇಯಾಂಕವೇನು?: ಈ ಹಿಂದೆ ಬಿಡುಗಡೆ ಮಾಡಿದ್ದ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಿದ ದೇಶದ 67 ಅಭ್ಯರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಕಾಲೇಜಿನ ಸ್ಯಾಮ್‌ ಶ್ರೇಯಸ್‌ ಜೋಸೆಫ್, ಚೈತನ್ಯ ಶಿಕ್ಷಣ ಸಂಸ್ಥೆಯ ಕಲ್ಯಾಣ್ ವಿ ಹಾಗೂ ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್‌ ಕಿಶೋರ್‌ ಸ್ಥಾನ ಪಡೆದಿದ್ದರು. ಈ ಮೂವರೂ 720 ಕ್ಕೆ 720 ಅಂಕ ಗಳಿಸಿದ್ದರು. ಇದೀಗ ಮೂವರ ಶ್ರೇಯಾಂಕದಲ್ಲೂ ಬದಲಾಗಿದ್ದು, ಅವರು ಕ್ರಮವಾಗಿ 53, 64 ಮತ್ತು 71 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ರಾಜ್ಯದ ಆರು ಅಭ್ಯರ್ಥಿಗಳು ಅಖಿಲ ಭಾರತ ಮಟ್ಟದ ನೂರರೊಳಗಿನ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕದ 1,50,171 ಅಭ್ಯರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್​, ಕನ್ನಡ, ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 1,065 ಅಭ್ಯರ್ಥಿಗಳು ಕನ್ನಡದಲ್ಲಿ ಬರೆಯಲು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. 2024ನೇ ಸಾಲಿನ ನೀಟ್​ ಪರೀಕ್ಷೆಯು ಮೇ 5 ರಂದು 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟಾರೆ 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಇದನ್ನೂ ಓದಿ: NEET-UG ಪರಿಷ್ಕೃತ ವೇಳಾಪಟ್ಟಿ ಪ್ರಕಟ: 67ರ ಬದಲು 17 ಅಭ್ಯರ್ಥಿಗಳಷ್ಟೇ ಟಾಪರ್ಸ್​​​, 2 ಅಂಕ ಕಟ್​ಆಫ್​ ಕಡಿತ - NEET revised result

ETV Bharat Logo

Copyright © 2024 Ushodaya Enterprises Pvt. Ltd., All Rights Reserved.