ರಾಯಚೂರು: ''ನೀಟ್ ಪರೀಕ್ಷಾ ಅಕ್ರಮ ಪ್ರಕರಣವು ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಅಕ್ರಮ ಇದಾಗಿದೆ. ನೀಟ್ ಪರೀಕ್ಷೆಯ ಅಕ್ರಮದಲ್ಲಿ ದೊಡ್ಡ ಪ್ರಭಾವಿಗಳು ಶಾಮೀಲು ಆಗಿದ್ದಾರೆ'' ಎಂದು ರಾಯಚೂರು ಜಿಲ್ಲಾ ಉಸ್ತುವರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನೀಟ್ ಪರೀಕ್ಷೆ ಅಕ್ರಮ ಪ್ರಕರಣ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರದ ದೊಡ್ಡ ಅಕ್ರಮ ಇದಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಜನರು ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಬಹಳ ಅನುಮಾನ ಹುಟ್ಟಿಸಿದೆ. ಬಹುದೊಡ್ಡ ಹಗರಣ ಆಗಿದ್ರೂ ಕೇಂದ್ರ ಸರ್ಕಾರವು ಸರಿಯಾಗಿ ತನಿಖೆ ಮಾಡಿಲ್ಲ'' ಎಂದು ದೂರಿದರು.
''ನೀಟ್ ಪರೀಕ್ಷೆ ರದ್ದಾಗಿದ್ದು, ಇದನ್ನು ಸಿಬಿಐಗೆ ನೀಡಬೇಕು ಎನ್ನುವುದು ಎಲ್ಲ ರಾಜ್ಯಗಳ ಒತ್ತಾಯವಿದೆ. ಆದರೆ, ಇದರ ಬಗ್ಗೆ ಕೇಂದ್ರ ಸರ್ಕಾರ ಏನು ಮಾಡುದೇ ಸುಮ್ಮನೆ ಕುಳಿದಿದೆ. ಕೇಂದ್ರ ಸರ್ಕಾರವು ಯಾರನ್ನು ರಕ್ಷಣೆ ಮಾಡಲು ನಿಂತಿದೆ ಎನ್ನುವುದು ತಿಳಿಯುತ್ತಿಲ್ಲ. ದೇಶದಲ್ಲಿ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದ್ದಾರೆ. ನೀಟ್ ತಿರಸ್ಕಾರ ಮಾಡಲು ಬರುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ನೀಟ್ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಇದೆ. ಕೇಂದ್ರ ಸರ್ಕಾರದ ಆ್ಯಕ್ಟ್ನಿಂದ ನೀಟ್ ಬಂದಿದೆ. ಇದರಿಂದ ನೀಟ್ ರದ್ದು ಮಾಡೋಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಬೇಕು'' ಎಂದರು.
''ಬೇರೆ ರಾಜ್ಯಗಳ ಹಾಗೆ ಬೇಜವಾಬ್ದಾರಿಯಿಂದ ನಾವು ಮಾತನಾಡುವುದಕ್ಕೆ ಬರುವುದಿಲ್ಲ. ತಮಿಳುನಾಡು ಸರ್ಕಾರ ಅವರ ಭಾವನೆ ಹೇಳಿದ್ದಾರೆ. ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಪಾರದರ್ಶಕವಾಗಿ ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದ್ದು, ಪೇಪರ್ ಲೀಕ್ ಆಗಿದೆ ಎಂಬುದು ಎಲ್ಲಾ ಮಕ್ಕಳ ಅನುಮಾನವಿದೆ. ಯಾರನ್ನೂ ರಕ್ಷಣೆ ಮಾಡುವಂತಿಲ್ಲ, ನಿಮ್ಮ ತಪ್ಪು ಇದ್ದರೆ ಒಪ್ಪಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: 'ನನ್ನ ರಾಜಕೀಯ ಅಂತ್ಯದ ಬಗ್ಗೆ ತಿರ್ಮಾನ ಮಾಡುವುದು ಜನರು': ಡಿ.ಕೆ. ಶಿವಕುಮಾರ್ - DCM DK Shivakumar